ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ…
ಭದ್ರಾವತಿ : ಪ್ರತಿ ವರ್ಷ ಮಾ.೨೧ರಂದು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗು ತ್ತದೆ. ಈ ಆಚರಣೆಯ ಅಂಗವಾಗಿ ಮತ್ತು ಹಸರೀಕರಣದೆಡೆಗೆ ಅಂಗವಾಗಿ ಸೈಲ್-ವಿಐಎಸ್‌ಎಲ್ ೬೦೦ ಸಸಿಗಳನ್ನು ವಿತರಿಸಿತು. ಅದರಲ್ಲಿ ಮೈಸೂರು ಕಾಗದ ಕಾರ್ಖಾನೆಗೆ ೨೫೦ ಸಸಿಗಳು (೧೫೦ -ನುಗ್ಗೆ ಮತ್ತು ೧೦೦-ಪಪ್ಪಾಯ), ಭದ್ರಾವತಿ ನಗರಸಭೆಗೆ ೧೦೦ ಸಸಿಗಳು (೭೫-ನುಗ್ಗೆ ಮತ್ತು ೨೫-ಪಪಾಯ), ವಿಐಎಸ್‌ಎಲ್ ಕಾರ್ಮಿಕರಿಗೆ ೧೭೫ ಸಸಿಗಳು ಮತ್ತು ಭದ್ರಾವತಿ ರ್‍ಯಾಪಿಡ್ ಆಕ್ಷನ್ ಫೋರ್ಸ್ ತಂಡಕ್ಕೆ ೫೦ ಸಸಿಗಳು (೨೫-ನುಗ್ಗೆ ಮತ್ತು ೨೫-ಪಪಾಯ) ಸಸಿಗಳನ್ನು ವಿತರಿಸಲಾಯಿತು.
ಭದ್ರಾವತಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ ಸಸಿಗಳನ್ನು ವಿತರಿಸಿದರು, ಇವರೊಂದಿಗೆ ವಿಐಎಸ್‌ಎಲ್, ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಕೆ.ಎಸ್. ಸುರೇಶ್, ವಿಐಎಸ್‌ಎಲ್ ಉಪಸ್ಥಿತರಿದ್ದರು. ಮೈಸೂರು ಕಾಗದ ಕಾರ್ಖಾನೆಯ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಮತ್ತು ನಗರಾಡಳಿತಾ ಧಿಕಾರಿ ಸತೀಶ್, ನಗರಸಭೆ ಆಯುಕ್ತ ಪ್ರಕಾಶ್ ಚನ್ನಪ್ಪನವರ್ ಮತ್ತು ಪರಿಸರ ಅಧಿಕಾರಿ ಪ್ರಭಾಕರ್ ರವರು ಸಸಿಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಭದ್ರಾವತಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಷ್ ರೆಡ್ಡಿ ಮಾತನಾಡಿ, ಭಾರತದ ಸಂವಿಧಾನದ ಆಶಯದಂತೆ ಪರಿಸರ, ಕಾಡುಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಕಾಳಜಿ ತೋರಿಸು ವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದರಲ್ಲದೇ, ಸೈಲ್- ವಿಐಎಸ್‌ಎಲ್ ಕಾರ್ಖಾನೆಯು ಸಸಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮಾತನಾಡಿ ಅರಣ್ಯೀಕರಣದೊಂದಿಗೆ, ಹೊಸ ಸಸಿಗಳನ್ನು ನೆಡುವುದರಿಂದ ಅರಣ್ಯ ನಾಶವನ್ನು ತಡೆಯಬಹುದು ಮತ್ತು ಪ್ರಸ್ತುತ ಇರುವ ಮರಗಳನ್ನು ರಕ್ಷಣೆ ಮಾಡುವುದು ಮತ್ತು ಸಸಿಗಳನ್ನು ಬೆಳೆಸುವುದು ಪರಿಸರ ಸ್ನೇಹಿಯ ಒಂದು ಸಂಸ್ಕೃತಿಯಾಗಬೇಕು ಆಗ ಮಾತ್ರ ನಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಬಹುದು ಎಂದರು.
ವಿಐಎಸ್‌ಎಲ್‌ನ ಮಹಾ ಪ್ರಬಂಧಕ ಎಲ್. ಪ್ರವೀಣ್ ಕುಮಾರ್, ಎಮ್. ಸುಬ್ಬರಾವ್, ಸಹಾಯಕ ಮಹಾಪ್ರಬಂಧಕರಾದ ವಿಕಾಸ್ ಬಸೇರ್ ಇನ್ನಿತರರಿದ್ದರು.

