ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ರಿಯದರ್ಶಿನಿ ಆಂಗ್ಲ ಮಾಧ್ಯದ ಶಾಲೆ: ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳೂ ಪ್ರಥಮ ದರ್ಜೆ ತೇರ್ಗಡೆ…

Share Below Link

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆ ಈ ಬಾರಿ ರಾಜ್ಯದಲ್ಲಿ ೩ನೇ ಸ್ಥಾನ ಗಳಿಸಿದೆ. ಶಿವಮೊಗ್ಗ ಜಿಲ್ಲೆ ಕಳೆದ ಬಾರಿ ೨೮ನೇ ಸ್ಥಾನದಲ್ಲಿತ್ತು. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ೨೩,೦೨೮ ವಿದ್ಯಾರ್ಥಿಗಳಲ್ಲಿ ೨೦,೪೨೦ ವಿದ್ಯಾ ರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ.೧೦೦ ಫಲಿತಾಂಶ ಪಡೆದಿದ್ದು, ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ.


ಜೆ.ಹೆಚ್. ಪಟೇಲ್ ಬಡಾವಣೆಯ ರವಿಶಂಕರ್ ಗುರೂಜಿ ವಿದ್ಯಾಲಯದ ಗುರುಚರಣ್ ಎಂ.ಶೆಟ್ಟಿ ೬೨೫ಕ್ಕೆ ೬೨೨ ಅಂಕ ಪಡೆದು ಜಿಲ್ಲೆಯ ಟಾಪರ್ ಆಗಿದ್ದಾರೆ.
ಸಾಂದೀಪನಿ ಆಂಗ್ಲ ಶಾಲೆ ಶೇ.೧೦೦ ಫಲಿತಾಂಶ ಪಡೆದಿದೆ. ಸಾಂದೀಪಿನಿ ಶಾಲೆಯ ರಜತ್‌ಕೃಷ್ಣ ೬೧೮ ಅಂಕ ಗಳಿಸಿದ್ದಾರೆ. ಸಂಸ್ಕೃತ ೧೨೪, ಇಂಗ್ಲಿಷ್ ೯೬, ಕನ್ನಡ ೧೦೦, ಗಣಿತ೧೦೦, ವಿಜನ ೧೦೦, ಸಮಾಜ ೯೯, ಶಾಲೆಯಲ್ಲಿ ೧೭ ವಿದ್ಯಾರ್ಥಿಗಳು ೬೦೦ಕ್ಕಿಂತಲೂ ಹೆಚ್ಚು ಅಂಕಪಡೆದುಕೊಂಡಿದ್ದಾರೆ.
ರಾಮಕೃಷ್ಣ ಶಾಲೆಗೆ ಶೇ.೧೦೦ ರಷ್ಟು ಫಲಿತಾಂಶ ಬಂದಿದೆ. ಪ್ರಣಿತ್ ಜಿ. ೬೧೯, ವಿದಾತ್ರಿ ೬೧೯, ಅನನ್ಯ ಕೆ.ಎಸ್. ೬೧೮, ವಿಕಾಸ್ ೬೧೬, ನಿಖಿಲ್ ರಾಜ್ ಡಿ.ಜಿ. ೬೧೫, ಅಂಕಿತ್ ಯು.ವಿ. ೬೧೩, ಸೃಷ್ಟಿ, ಕಮಲ್ ೬೧೦, ಟಿ.ಚಿನ್ನರೆಡ್ಡಿ ೬೦೮, ಸಾಕ್ಷಿ ಬದಲ್ ೬೦೭,ಲಾವಣ್ಯ ಎಸ್.ಎಂ. ೬೦೭, ಹರೀಶ್‌ಗೌಡ ಎಂ.ಎಂ. ೬೦೬, ಗೋವರ್ಧನ ಗೌಡ ೬೦೬, ಪ್ರೇಕ್ಷಾ ಹೆಚ್.ಎಸ್. ೬೦೫, ಖಾದಿರ ಖಾನಮ್, ೬೦೪, ಧನ್ಯ ಬಿದರೆ ೬೦೪, ಭೂಮಿಕಾ ಎನ್., ೬೦೪, ಮೊಹಮ್ಮದ್ ಶಾಯಿದ್ ಬಿ. ೬೦೪, ಸಂಪ್ರಿತ್ ತೀವಾರಿ ೬೦೩, ಪ್ರೇರಣಾ ೬೦೦ ಅಂಕಪಡೆದಿದ್ದಾರೆ.
ಈ ಹಿಂದೆ ರಾಜ್ಯ ಮಟ್ಟದಲ್ಲಿ ೨೮ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಜಿಲ್ಲೆ ೩ನೇ ಸ್ಥಾನಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಿಡಿಪಿಐ ಸಿಆರ್. ಪರಮೇಶ್ವರಪ್ಪ ಅವರು, ಫಲಿತಾಂಶ ಹೆಚ್ಚಳಕ್ಕಾಗಿ ಅನೇಕ ಕ್ರಮ ಕೈಗೊಳ್ಳಲಾಗಿತ್ತು. ಮೊದಲಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಡಯಟ್ ಸಹಯೋಗದಲ್ಲಿ ಶೇ.೭೦ ಕ್ಕಿಂತ ಕಡಿಮೆ ಫಲಿತಾಂಶ ಪಡೆದಿದ್ದ ಶಾಲೆಗಳನ್ನು ಗುರುತಿಸ ಲಾಯಿತು. ವಿದ್ಯಾರ್ಥಿಗಳನ್ನು ೩ ಭಾಗಗಳಾಗಿ ವಿಂಗಡಿಸಿ ಅವರ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಯಿತು ಎಂದರು.
೮ ಶಿಕ್ಷಕರ ತಂಡಗಳು ಪ್ರತಿ ವಿದ್ಯಾರ್ಥಿಯ ಸಮೀಕ್ಷೆ ನಡೆಸಿ ಅವರು ಯಾವ ವಿಷಯದಲ್ಲಿ ಹಿಂದುಳಿದಿ ದ್ದಾರೆ ಎಂಬುದನ್ನು ಪರಿಶೀಲಿಸಿದರು. ನಂತರ ಅವರಿಗೆ ಅಗತ್ಯವಾದ ಮಾರ್ಗದರ್ಶನ ನೀಡಲಾಯಿತು ಎಂದಿದ್ದಾರೆ.