ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮೊಬೈಲ್‌ನಿಂದ ಉಂಟಾಗುತ್ತಿರುವ ಮನಸ್ಸಿನ ಮಾಲಿನ್ಯ ತಡೆ ಇಂದಿನ ಅಗತ್ಯ…

Share Below Link

ಶಿವಮೊಗ್ಗ: ಮೊಬೈಲ್, ವಾಟ್ಸಪ್, ಫೇಸ್‌ಬುಕ್‌ನಂತಹ ಆಧುನಿಕ ಸಮೂಹ ಮಾಧ್ಯಮ ಗಳಿಂದ ಮನುಷ್ಯನ ಮನಸ್ಸು ಕಲುಷಿತಗೊಳ್ಳುತ್ತಿದೆ. ಸಂಸ್ಕಾರ ಹಾಗೂ ಸಂಸ್ಕೃತಿ ಕಡಿಮೆಯಾಗು ತ್ತಿದೆ. ತಂತ್ರeನ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ. ಮನಸ್ಸಿನ ಮಾಲಿನ್ಯವನ್ನು ತಡೆಗ ಟ್ಟಲು ಮಕ್ಕಳಿಗೆ ಸಂಸ್ಕಾರ ಕಲಿಸು ವುದು ಅತ್ಯಗತ್ಯವಾಗಿದೆ ಎಂದು ಶ್ರೀ ಶೀಲಸಂಪಾದನಾ ಮಠದ ಪೀಠಾಧ್ಯಕ್ಷ ಪೂಜ್ಯಶ್ರೀ ಡಾ. ಸಿದ್ಧ ಲಿಂಗ ಸ್ವಾಮೀಜಿ ಪ್ರತಿಪಾದಿಸಿ ದರು.
ಶ್ರೀ ಶೀಲಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್ ನಿಂದ ಶಂಕರಘಟ್ಟ ಸಮೀಪದ ಗೋಣಿಬೀಡಿನ ಶ್ರೀ ಶೀಲಸಂಪಾದ ನಾ ಮಠದಲ್ಲಿ ಹಮ್ಮಿಕೊಂಡಿದ್ದ ಅನುಭಾವ ಸಂಗಮ-೮೭ನೇ ಕಾರ್ಯಕ್ರಮದಲ್ಲಿ ಗಂಜಿಗಟ್ಟಿಯ ಚರಮೂರ್ತೇಶ್ವರ ಮಠದ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾ ಮೀಜಿ ಅವರನ್ನು ಗೌರವಪೂ ರ್ವಕವಾಗಿ ಅಭಿನಂದಿಸಿ ಅವರು ಆಶೀರ್ವಚನ ನೀಡಿದರು.
ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸುವುದು ಒತ್ತಟ್ಟಿಗಿರಲಿ ಅವರೊಂದಿಗೆ ಸರಿಯಾಗಿ ಮಾತ ನಾಡದೆ ಮೊಬೈಲ್‌ನಲ್ಲಿ ಮುಳು ಗಿರುತ್ತಾರೆ. ಧಾರ್ಮಿಕ ಕಾರ್ಯ ಕ್ರಮಗಳಿಗೆ ಬರುವ ಅರ್ಧದಷ್ಟು ಜನತಲೆ ಬಗ್ಗಿಸಿ ಕೊಂಡು ಮೊಬೈ ಲ್ ನೋಡುತ್ತಿರು ತ್ತಾರೆ. ಉಳಿದ ರ್ಧ ಜನ ಪರಸ್ಪರ ಮಾತನಾಡು ತ್ತಿರುತ್ತಾರೆ. ಮೊಬೈಲ್ ಬಳಕೆ ನಮ್ಮ ಬದುಕಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾ ರದು. ಭಗವಂತನ ನಾಮಸ್ಮರಣೆ, ಧಾರ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಸಂತೋಷ ವಾಗಿ ಬದುಕಲು ಸಾಧ್ಯಎಂದರು.

ವಚನ ಸಾಹಿತ್ಯಅತ್ಯಂತ ಶ್ರೇಷ್ಟ ಸಾಹಿತ್ಯವಾಗಿದೆ. ಬದುಕಿನ ಮೌಲ್ಯ ಗಳನ್ನು ಶರಣರುತಮ್ಮ ವಚನಗಳ ಮೂಲಕ ಪ್ರತಿಪಾದಿಸಿzರೆ. ವಚ ನದ ತತ್ವಗಳನ್ನು ಪಾಲಿಸುವುದ ರಿಂದ ನಿಜ ವ್ಯಕ್ತಿತ್ವದ ಅರಿವು ಉಂಟಾಗುತ್ತದೆ. ಭವ- ಬಂಧನ ಗಳನ್ನು ಮೀರಿ ದಂಥ ಆಧ್ಯಾತ್ಮಿಕ ಸಿರಿ ದೊರೆಯು ತ್ತದೆ. ಇದರಿಂದ ಬದುಕು ದಿವ್ಯವಾ ಗುತ್ತದೆ, ಭವ್ಯವಾಗುತ್ತದೆ ಎಂದರು.
ಚರಮೂರ್ತೇಶ್ವರ ಮಠದ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಯುವಜನತೆ ಲೌಕಿಕತೆಯಿಂದ ದೂರ ಸರಿಯುತ್ತಿzರೆ. ಅವರಿಗೆ ಲೌಕಿಕಗಿಂತಲೂ ಲವ್ ಕಿಕ್ ಮುಖ್ಯವಾಗಿದೆ. ಬಂಧನ ಮತ್ತು ಮೋಕ್ಷಕ್ಕೆ ಮನಸ್ಸೇ ಕಾರಣ. ಆಧ್ಯಾತ್ಮದಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯವೆಂದರು.
ಫೌಂಡೇಷನ್‌ನ ಕಾರ್ಯಾ ಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಸ್. ದಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಳೇನಹಳ್ಳಿ ಶ್ರೀ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಕುಮಾರಚಲ್ಯ, ರುದ್ರಪ್ಪಯ್ಯ ಕೆ., ಎನ್.ಜೆ. ರಾಜಶೇಖರಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು. ಆಧ್ಯಾತ್ಮಕ ಚಿಂತಕ ವಿ. ಸಂತೋಷ್ ಕುಮಾರ್‌ಉಪನ್ಯಾಸ ನೀಡಿದರು.
ಕುಬೇರ ಸ್ವಾಗತಿಸಿ, ಹರೀಶ್ ಆರಾಧ್ಯ ನಿರೂಪಿಸಿ ವಂದಿಸಿದರು.