ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಲೋಕಾಯುಕ್ತ ಬಲಗೊಳಿಸುವುದರ ಮೂಲಕ ಭ್ರಷ್ಟಾಚಾರ ತಡೆಗಟ್ಟಿ:ಎಸ್‌ಪಿಎಸ್..

Share Below Link

ಶಿವಮೊಗ್ಗ: ಲೋಕಾಯುಕ್ತ ವನ್ನು ಬಲಗೊಳಿಸುವುದರ ಮೂ ಲಕ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ. ಶೇಷಾದ್ರಿ ಮನವಿ ಮಾಡಿzರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ಹಲವು ಹಗರಣ ನಡೆದಿವೆ. ಮಾಡಾಳ್ ವಿರೂಪಾಕ್ಷಪ್ಪ ಹಗರಣ, ಗಣಿಗಾರಿಕೆ ಹಗರಣ, ಆಪರೇಷನ್ ಕಮಲ, ಕೊರೋನಾ ಕಾಲದಲ್ಲಿ ವಸ್ತುಗಳ ಖರೀದಿ, ಬಿಡಿಎ ಹಗರಣ, ಜಿಂದಾಲ್ ಕಂಪನಿಗೆ ಭೂಮಿ ಮಾರಾಟ, ಡಾ. ಸುಧಾಕರ್ ಅವರ ಔಷಧಿ ಖರೀದಿ ಪ್ರಕರಣ, ರಮೇಶ್ ಜರಕಿಹೊಳಿ ಅವರ ರಾಸಲೀಲೆ ಪ್ರಕರಣ, ಶೇ. ೪೦ರಷ್ಟು ಕಮಿಷನ್ ಹಗರಣ, ಬಿಟ್ ಕಾಯಿನ್ ಹಗರಣ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ, ಮಠಗಳಿಗೆ ಹಣ ಮಂಜೂರಾತಿಯಲ್ಲಿ ಕಮಿಷನ್ ಪಡೆದ ಪ್ರಕರಣ ಇವೆಲ್ಲವನ್ನೂ ಲೋಕಾಯುಕ್ತಕ್ಕೆ ನೀಡಬೇಕು ಎಂದು ಒತ್ತಾಯಿಸಿzರೆ.
ಇದಲ್ಲದೇ, ಪೊಲೀಸ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ, ಇದಲ್ಲದೇ ಒಂದು ಕೋಮಿನ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟ ಪ್ರಕರಣ, ಸ್ಯಾಂಟ್ರೋ ರವಿ ಪ್ರಕರಣ ಹೀಗೆ ಹಲವು ಪ್ರಕರಣಗಳು ನಡೆದಿದ್ದು, ಇವೆಲ್ಲವನ್ನು ರಾಜ್ಯ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿzರೆ.
ಲೋಕಾಯುಕ್ತ ಇತ್ತೀಚೆಗೆ ಹಲವು ದಾಳಿಗಳನ್ನು ನಡೆಸಿ ಭ್ರಷ್ಟರನ್ನು ಬಲೆಗೆ ಹಾಕುತ್ತಿರು ವುದು ಶ್ಲಾಘನೀಯವಾಗಿದೆ. ಭ್ರಷ್ಟರ ಬೇಟೆ ಹೀಗೆ ಮುಂದು ವರೆಯಬೇಕು. ತಹಶೀಲ್ದಾರ್ ಅಂತಹ ವ್ಯಕ್ತಿಯೊಬ್ಬ ೫೦೦ ಕೋಟಿ ರೂ. ಸಂಪಾದನೆ ಮಾಡುತ್ತಾರೆ ಎಂದರೆ ಭ್ರಷ್ಟಾಚಾರದ ಬಗೆ ತಿಳಿದುಕೊಳ್ಳಬಹುದು. ಹಾಗಾಗಿ ಈ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಸರ್ಕಾರ ತಡೆ ಹಾಕಬೇಕು ಎಂದು ತಿಳಿಸಿzರೆ.