ತಾಜಾ ಸುದ್ದಿಲೇಖನಗಳು

ಪತ್ರಿಕಾ ದಿನಾಚರಣೆ…

Share Below Link

ಜು.೧ರ ಇಂದು ಕರ್ನಾಟಕ ರಾಜ್ಯದಾದ್ಯಂತ ಪತ್ರಿಕಾ ದಿನ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಬಿಂಬಿಸಲಾಗುತ್ತಿರುವ ಪತ್ರಿಕೋದ್ಯಮದ ಏಳು-ಬೀಳುಗಳ ಕುರಿತು ಸವದತ್ತಿ ತಾಲೂಕಿನ ಶಿಕ್ಷಕ ಹಾಗೂ ಬರಹಗಾರರಾದ ಎನ್.ಎನ್. ಕಬ್ಬೂರ ಅವರು ಬರೆದ ವಿವರಣಾತ್ಮಕ ಲೇಖನ ಹೊಸನಾವಿಕ ಓದಗರಿಗಾಗಿ…
ಇಂದು ಪತ್ರಿಕೋದ್ಯಮ ಎಂಬುದು ಗತಿಸಿದ ಕಾಲಘಟ್ಟದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮದ ರೀತಿ ಮತ್ತು ಸ್ವರೂಪ ಎಲ್ಲವೂ ಬದಲಾಗಿದೆ. ಮುದ್ರಣ ಮಾದ್ಯಮದ ಜಾಗವನ್ನು ಇಂದು ಬಹುಪಾಲು ಆನ್‌ಲೈನ್ ಪತ್ರಿಕೆಗಳು ಆವರಿಸಿಕೊಂಡುಬಿಟ್ಟಿವೆ. ಸಾಮಾಜಿಕ ಜಲತಾಣಗಳು ಸುದ್ದಿಗಳನ್ನು ಸೆಕೆಂಡು ಸೆಕೆಂಡಿಗೂ ಹೊತ್ತು ತರುತ್ತಿವೆ. ಎಲೆಕ್ಟ್ರಾನಿಕ್ ಮಾದ್ಯಮಗಳು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತಿರಿಸಿಕೊಂಡು ತಾಂತ್ರಿಕವಾಗಿ ಹೆಚ್ಚು ಸಮೃದ್ಧಿಯಾಗುತ್ತಿವೆ. ಇಂದು ಸುದ್ದಿಯನ್ನು ತಿಳಿಯಬೇಕೆಂದರೆ ಬಹುಪಾಲು ಜನ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ. ಕೈಯಲ್ಲಿ ಸ್ಮಾರ್ಟಫೋನ್, ಟ್ಯಾಬ್ ಇದ್ದರೆ ಇಂಟರನೆಟ್ ಸಹಾಯದಿಂದ ಜಗತ್ತಿನ ಯಾವ ಭಾಗದ ವಿಷಯವನ್ನಾದರೂ ಕೂಡ ಅಂಗೈಯಲ್ಲಿ ಹಿಡಿದುಕೊಂಡು ನೋಡಬಹುದು. ಸುದ್ದಿ ಮಾದ್ಯಮದ ಮೇಲೆ ತಂತ್ರeನದ ಬೆಳವಣಿಗೆ ಇಷ್ಟರ ಮಟ್ಟಿಗೆ ಪ್ರಭಾವ ಬೀರಿವೆ.
ಆದರೂ ಕೂಡ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಅಕ್ಷರಗಳನ್ನು ಓದುವುದೆಂದರೆ ಅದರ ಮಜಾನೇ ಬೇರೆ. ಕಾಗದದ ಸ್ಪರ್ಶ ಹಿತಾನುಭವ ನೀಡುತ್ತದೆ. ಅದು ಆನ್‌ಲೈನ್ ಮಾದ್ಯಮದಲ್ಲಿ ಸಿಗಲಾರದು ಎಂದು ಹೇಳುವವರು ಈಗಲೂ ಅದೆಷ್ಡೋ ಜನ ಇzರೆ.
ಪತ್ರಿಕೋದ್ಯಮ ಹಾಗೂ ಪತ್ರಿಕಾ ಸಾಹಿತ್ಯಕ್ಕೆ ಭದ್ರ ತಳಪಾಯ ಪತ್ರಿಕೆಗಳು ಎಂದರೆ ಅತೀಶಯೋಕ್ತಿಯಾಗಲಾರದು. ಪ್ರತಿ ವರ್ಷ ಜುಲೈ ೧ರಂದು ನಮ್ಮ ರಾಜ್ಯದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಹಾಗೂ ಇತರೆ ವಿಷಯಗಳ ಕುರಿತಾದ ಚರ್ಚೆ ಮತ್ತು ಅವಲೋಕನ ಈ ದಿನ ನಡೆಯುತ್ತದೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
ಮಾನವನ ಸರ್ವತೋಮುಖ ಬೆಳವಣಿಗೆಯಲ್ಲಿ ಮುದ್ರಣ ಕಲೆ ಮಹತ್ವದ ಪಾತ್ರ ವಹಿಸಿದೆ. ಮುದ್ರಣ ಮಾದ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದು ಪರಿಚಯಿಸಿ ಕೊಟ್ಟಿದೆ. ಮೊದಲು ಪುಸ್ತಕಗಳು ನಂತರ ನಿಯತಕಾಲಿಕೆಗಳು ತದನಂತರ ಪತ್ರಿಕೆಗಳು eನದ ಪ್ರಸರಣವನ್ನು ಆರಂಭಿಸಿದವು. ಪತ್ರಿಕೆಗಳಲ್ಲಿ ಸ್ಥಳಿಯ ಸುದ್ದಿಗಳಿಂದ ಹಿಡಿದು, ತಾಲೂಕು, ಜಿ, ರಾಜ್ಯ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದವರೆಗೂ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.
ಇತಿಹಾಸ: ಜರ್ಮನಿಯ ಗುಟೆನ್‌ಬರ್ಗ್ ೧೪೪೦ರಲ್ಲಿ ಎರಕಹೊಯ್ದ ಅಚ್ಚುಮೊಳೆ ತಯಾರಿಸಿ ಪವಿತ್ರ ಗ್ರಂಥ ದಿ ಬೈಬಲ್‌ನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ ಅದೊಂದು ಕ್ರಾಂತಿಕಾರಕ ಅವಿಷ್ಕಾರವಾಗಿತ್ತು. ಮುದ್ರಣ eನದ ದಾಹ ತಣಿಸುವ ಪ್ರಮುಖ ಸೆಲೆಯಾಯಿತು.
ನಾಗರಿಕತೆಯ ಬೆಳವಣಿಗೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ ಹಲವಾರು ಸಾಧನೆಗಳಲ್ಲಿ ಮುದ್ರಣ ಯಂತ್ರವು ಒಂದು ಎಂಬುದಾಗಿ ಆಧುನಿಕ ಇತಿಹಾಸಕಾರರು ಹೇಳುತ್ತಾರೆ. ಅದೇ ರೀತಿ ಕನ್ನಡ ಪತ್ರಿಕೋದ್ಯಮದ ಪಿತಾಮಹರೆಂಬ ಖ್ಯಾತಿಯೂ ಕ್ರೈಸ್ತ ಮಿಷನರಿಗಳಿಗೆ ಸಲ್ಲುತ್ತದೆ. ಧರ್ಮ ಪ್ರಸಾರದ ಜೊತೆಗೆ ಒಂದು ಪತ್ರಿಕೆಯನ್ನು ಪ್ರಸರಣ ರೂಪಕ್ಕೆ ತಂದು, ಆ ಮೂಲಕ ಜನರಿಗೆ ಸುದ್ದಿ ಮತ್ತು ಮಾಹಿತಿಯನ್ನು ನೀಡಬೇಕೆಂಬ ಬಾಶೆಲ್ ಮಿಷನ್ ಚಿಂತಿಸಿದ ಫಲವಾಗಿ ೧ನೇ ಜುಲೈ ೧೮೪೩ರಲ್ಲಿ ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರ ಸಮಾಚಾರ ಎಂಬ ಪಾಕ್ಷಿಕ ಸಾಕಾರಗೊಂಡು ನಾಗರಿಕ ಸಾಮಾಜಕ್ಕೆ ಅರ್ಪಣೆಗೊಂಡಿತು. ಬಾಸಲ್ ಮಿಷನ್‌ದ ರೆವರೆಂಡ್ ಹರ್ಮನ್ ಮೊಲ್ಲಿಂಗ್‌ರವರು ಪತ್ರಿಕೆಯ ಸಂಪಾದಕರಾಗಿದ್ದರು, ಈ ಕಾರಣದಿಂದ ಇವರನ್ನು ಕರ್ನಾಟಕ ಪತ್ರಿಕಾ ರಂಗದ ಪಿತಾಮಹ ಎಂದು ಇವತ್ತಿಗೂ ಸ್ಮರಿಸಿಕೊಳ್ಳಲಾಗುತ್ತದೆ.
ಪ್ರಮುಖ ಸುದ್ದಿಗಳು, ಸ್ಥಳೀಯ ಆಸಕ್ತಿದಾಯಕ ವಿಚಾರಗಳನ್ನು ಹೊತ್ತುಕೊಂಡು ಮಂಗಳೂರು ಸಮಾಚಾರ ಪತ್ರಿಕೆ ಮೊದಲ ಸಂಚಿಕೆ ೧೮೪೩ರ ಜುಲೈ ೧ ರಂದು ಮಂಗಳೂರಿನಿಂದ ಪ್ರಕಟವಾಯಿತು. ಕನ್ನಡ ಪತ್ರಿಕಾ ರಂಗದ ಮೊದಲ ಆವೃತ್ತಿ ಹೊರಬಂದ ದಿನವನ್ನು ಸ್ಮರಿಸುವುದಕ್ಕಾಗಿ ಕರ್ನಾಟಕದಲ್ಲಿ ಪ್ರತಿ ವರ್ಷ ಜುಲೈ ೧ ರಂದು ಪತ್ರಿಕಾ ದಿನವನ್ನಾಗಿ ಆಚರಿಸಲಗುತ್ತದೆ. ಆ ಪ್ರಯುಕ್ತ ಜುಲೈ ತಿಂಗಳು ಪೂರ್ತಿ ವಿವಿಧ ಪತ್ರಿಕಾ ಸಂಘಟನೆಗಳಾದ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ, ಕರ್ನಾಟಕ ಪರ್ತಕರ್ತರ ಸಂಘ, ಕಾರ್ಯನಿರತ ಪತ್ರಕರ್ತ ಸಂಘ, ಏಡಿಟರ್‍ಸ್ ಕ್ಲಬ್, ಪ್ರೆಸ್ ಕ್ಲಬ್ ಮೊದಲಾದ ಮಾದ್ಯಮ ಪ್ರತಿನಿಧಿಗಳ ಸಂಘ ಸಂಸ್ಥೆಗಳು ಹಾಗೂ ಕರ್ನಾಟಕ ಮಾದ್ಯಮ ಅಕಾಡೆಮಿ ವತಿಯಿಂದ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಪತ್ರಿಕೋದ್ಯಮ ಸಂಬಂಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ವಾಡಿಕೆಯಾಗಿದೆ.
ಕನ್ನಡ ಪತ್ರಕೆಗಳು ಸ್ವತಂತ್ರ್ಯ ಪೂರ್ವದಲ್ಲಿ, ಸ್ವತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಸ್ವತಂತ್ರ್ಯ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲಿ, ನಾಗರಿಕತೆಯ ಬೆಳವಣಿಗೆಯಲ್ಲಿ ಹೀಗೆ ಹಲವಾರು ಆಯಾಮಗಳಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಾ ಬಂದಿವೆ. ಜನರಿಗೆ ಪ್ರeಪೂರ್ವಕ ಮಾಹಿತಿಯನ್ನು ಒದಗಿಸುತ್ತಾ, ಮನರಂಜನೆಯ ಜೊತೆಗೆ ಶಿಕ್ಷಣವನ್ನೂ ನೀಡುತ್ತಿವೆ, ಹಾಗೂ ದೇಶಪ್ರೇಮ, ದೇಶಭಕ್ತಿಯ ಜೊತೆಜೊತೆಗೆ ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತಾ ಜನರ ಧ್ವನಿಯಾಗಿ, ಸಮಾಜದ ಕೈಗನ್ನಡಿಯಾಗಿ, ಕನ್ನಡ ಪತ್ರಕೆಗಳು ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ನಾಗರಿಕ ಬದುಕಿನಲ್ಲಿ ವಿಶಿಷ್ಟ ಸ್ಥಾನಮಾನವನ್ನು ತನ್ನದಾಗಿಸಿಕೊಂಡಿದೆ.
ತಮ್ಮ ಮೂಗಿನ ನೇರಕ್ಕೆ ಸುದ್ದಿ ಲೇಕನಗಳು ಪ್ರಕಟಗೊಳ್ಳುತ್ತಿಲ್ಲ ಹಾಗೂ ಸಮಾಜದ ಏರುಪೇರುಗಳನ್ನು ಯಥಾವತ್ತಾಗಿ ಅನಾವರಣಗೊಳಿಸಲಾಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಪತ್ರಿಕೆಗಳ ಹಾಗೂ ಪರ್ತಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಹಲವರು ಮಾಡುತ್ತಿರುವ ಒಂದೆರಡು ಪ್ರಕರಣಗಳನ್ನು ಹೊರತುಪಡಿಸಿದರೆ, ಎಲ್ಲವನ್ನು ಮೆಟ್ಟಿನಿಂತು ಕನ್ನಡ ಪತ್ರಿಕಾ ರಂಗ ಇಂದಿಗೂ ತನ್ನ ಗಾಂಭಿರ್ಯತೆ ಮತ್ತು ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದೆ.
ಕನ್ನಡ ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇಯ ಅಂಗವಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಕನಾಗಿ, ಸಮಾಜದ ಅಂಕು-ಡೊಂಕು ತಿದ್ದುವ ಕಾರ್ಯ ಮಾಡುತ್ತಾ, ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡುವಲ್ಲಿ ನಿತ್ಯ ನಿರಂತರವಾಗಿ ತನ್ನ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಇವುಗಳ ಮಧ್ಯೆ ಕನ್ನಡ ಪತ್ರಿಕಾ ರಂಗ ಇದೀಗ ಒಂದು ಮುಕ್ಕಾಲು ಶತಮಾನ ದಾಟಿ ಮುನ್ನಡೆಯುತ್ತಿರುವುದು ಹೆಮ್ಮೆಯ ಜೊತೆಗೆ ಸಾಧನೆಯೇ ಸರಿ. ಅದಕ್ಕಾಗಿ ಈ ದಿನದಂದು ಕರ್ನಾಟಕದ ಕನ್ನಡ ಪತ್ರಿಕೆಗಳ ಎಲ್ಲ ಸಂಸ್ಥಾಪಕರಿಗೂ, ಸಂಪಾದಕರಿಗೂ, ಪ್ರಕಾಶಕರಿಗೂ, ವರದಿಗಾರರಿಗೂ, ಮುದ್ರಕರಿಗೂ, ಪತ್ರಿಕಾ ವಿತರಕರಿಗೂ ಹಾಗೂ ಸಮಸ್ತ ಪರ್ತಕರ್ತರಿಗೂ ಅಭಿನಂದನೆಗಳ ಜೊತೆಗೆ ಶುಭಾಶಯ ತಿಳಿಸೋಣ.