ಸರಕಾರದ ಗಮನ ಸೆಳೆಯಲು ಬೆಂಗಳೂರು ಚಲೋಗೆ ಸಿದ್ಧತೆ: ಡಾ. ಎಂಪಿಎಂ ಷಣ್ಮುಖಯ್ಯ
ಮಂಗಳೂರು : ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯಿಂದ ಏ.೩ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆರಂಭಿಸಲಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯದಾದ್ಯಂತ ಎಲ್ಲ ಜಿ ಹಾಗೂ ತಾಲೂಕುಗಳ, ನಿವೃತ್ತ ನೌಕರರುಗಳು ಈಗಾಗಲೇ ಬಸ್ಸು ಹಾಗೂ ರೈಲಿನಲ್ಲಿ ತಮ್ಮ ಸ್ಥಳಗಳನ್ನು ಕಾಯ್ದಿರಿಸಿದ್ದು ರಾಜ್ಯದ ಇತಿಹಾಸ ದಲ್ಲಿ ಬಹುದೊಡ್ಡ ಸಭೆ ಅಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವೇದಿಕೆ ಪ್ರಧಾನ ಸಂಚಾಲಕ ಡಾ. ಎಂ.ಪಿ.ಎಂ. ಷಣ್ಮುಖಯ್ಯ ಅವರು ತಿಳಿಸಿzರೆ .
ಕಳೆದ ಹತ್ತು ದಿನಗಳಿಂದ ರಾಜ್ಯದ ಬೇರೆಬೇರೆ ಜಿಗಳಲ್ಲಿ ಪ್ರವಾಸ ಮಾಡುವ ಮೂಲಕ ಅನಿರ್ದಿಷ್ಟಾವಧಿ ಹೋರಾಟವನ್ನು ಯಶಸ್ವಿಗೊಳಿಸಲು ನಿವೃತ್ತ ನೌಕರರನ್ನು ಸಂಘಟಿಸಲಾಗಿದ್ದು, ಈಗಾಗಲೇ ನಿವೃತ್ತ ನೌಕರರಿಗಾಗಿರುವ ಆರ್ಥಿಕ ನಷ್ಟ ಸರಿ ಹೊಂದಿಸಲು ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಎರಡು ಬಾರಿ ಹಾಗೂ ಬೆಳಗಾವಿ ಅಧಿವೇಶನದ ಸಂದರ್ಭದಲ್ಲ್ಲಿ ೨೩,೦೦೦ಕ್ಕೂ ಹೆಚ್ಚು ನಿವೃತ್ತ ನೌಕರರು ಹಾಗೂ ಅಧಿಕಾರಿಗಳು ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಮಾನ್ಯ ಮುಖ್ಯಮಂತ್ರಿಗಳವರು ನಮ್ಮನ್ನು ಕರೆದು ಮಾತನಾಡಿ ಬೆಂಗಳೂರಿಗೆ ತೆರಳಿದ ನಂತರ ಅಧಿಕಾರಿಗಳ ಜೊತೆ ಸಭೆ ಮಾಡುವುದಾಗಿ ಮಾತನ್ನು ಕೊಟ್ಟು ಮಾತಿಗೆ ತಪ್ಪಿರುತ್ತಾರೆ. ಈ ನಿಟ್ಟಿನಲ್ಲಿ ಫೆ.೨೮ರಂದು ಫ್ರೀಡಂ ಪಾರ್ಕಿನಲ್ಲಿ ೨೦,೦೦೦ಕ್ಕೂ ಹೆಚ್ಚು ಅಧಿಕಾರಿ ಹಾಗೂ ನೌಕರರುಗಳು ಅನಿರ್ಧಿಷ್ಟ ಅವಧಿ ಧರಣಿಗೆ ಕುಳಿತ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಳಿನಿ ರಜನಿಶ್ ಅವರು, ನನ್ನೊಂದಿಗೆ ನಾಲ್ಕು ಜನ ವೇದಿಕೆ ಮುಖಂಡ ರನ್ನು ಕರೆಸಿ , ಅಧಿವೇಶನದ ನಂತರ ಮುಖ್ಯಮಂತ್ರಿಗಳ ಬಳಿ ನಿಮ್ಮ ವಿಷಯ ಚರ್ಚಿಸಿ ತಿಳಿಸುವುದಾಗಿ ಹೇಳಿದ ಪ್ರಕಾರ ನಾವು ನಮ್ಮ ಅಂದಿನ ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿzವು. ಬಜೆಟ್ ಅಧಿವೇಶನ ಮುಗಿದಿದ್ದರೂ ಸಹ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬರದೇ ಇದ್ದಿದ್ದರಿಂದ ಬರುವ ಮಾ.೩೦ರಿಂದ ಪುನಃ ಅನಿರ್ದಿಷ್ಟ ಅವಧಿ ಹೋರಾಟಕ್ಕೆ ನಮ್ಮ ವೇದಿಕೆ ಸಂಪೂರ್ಣ ಸಜ್ಜಾಗಿದ್ದು ಈಗಾಗಲೇ ಪೊಲೀಸ್ ಇಲಾಖೆಯವರಿಗೆ ಸಂಬಂಧಿಸಿದಂತೆ ನಮ್ಮ ಹೋರಾಟ ಕುರಿತಂತೆ ಮನವಿಯನ್ನು ಸಲ್ಲಿಸಲಾಗಿದೆ. ಈ ರಾಜ್ಯದ ನೌಕರರುಗಳಿಗೆ ಏಳನೇ ವೇತನ ಬಿಡುಗಡೆ ಮಾಡಿದ್ದರು ಸಹ ಅದೇ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ೧ ಜುಲೈ ೨೦೨೨ ರಿಂದ ದಿನಾಂಕ ೩೧ ಜುಲೈ ೨೦೨೪ರಲ್ಲಿ ನಿವೃತ್ತರಾಗಿರುವ ಅಧಿಕಾರಿಗಳು ಹಾಗೂ ನೌಕರರುಗಳಿಗೆ ೬ನೇ ವೇತನಕ್ಕೆ ಸಂಬಂಧಿಸಿದಂತೆ ನಿವೃತ್ತಿ ಸೌಲಭ್ಯಗಳನ್ನು ನೀಡುತ್ತಿದ್ದು ಇದರಿಂದ ನೌಕರರಿಗೆ ಅತಿಹೆಚ್ಚಿನ ಆರ್ಥಿಕ ನಷ್ಟ ಹೊಂದಿದ್ದು ಅದನ್ನು ಸರಿಪಡಿಸುವಂತೆ ಸರ್ಕಾರವನ್ನು ಈ ವೇದಿಕೆಯಲ್ಲಿ ಒತ್ತಾಯಿಸಲಾಗು ವುದು. ನಮ್ಮ ಹೋರಾಟವನ್ನು ಬೆಂಬಲಿಸಿ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಮಂಚ್‌ನ ಸಂಸ್ಥಾಪಕ ಅಣ್ಣಾ ಹಜರೆ ಹಾಗೂ ಕರ್ನಾಟಕ ರಾಜ್ಯದ ವಿಶ್ರಾಂತ ಲೋಕಾಯುಕ ನಿಟ್ಟೆ ಸಂತೋಷ ಹೆಗಡೆ ಸೇರಿದಂತೆ ಹಲವಾರು ಸಾಹಿತಿಗಳು ಬೆಂಬಲಿಸಿ ನಮ್ಮ ವೇದಿಕೆಯ ಕಾರ್ಯಕ್ರಮ ದಲ್ಲಿ ಭಾಗವಹಿಸಿರುತ್ತಾರೆ. ಅವರು ನೇರವಾಗಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಕೂಡಲೇ ನಿವತ್ತಿ ನೌಕರರುಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ zರೆ. ಏ.೩ ರಂದು ನಡೆಯಲಿರುವ ಹೋರಾಟ ಅಂತಿಮ ಹೋರಾಟ ವಾಗಿದ್ದು ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವವರೆಗೂ ಫ್ರೀಡಂ ಪಾರ್ಟ್ನ ಬಿಟ್ಟು ಬರುವುದಿಲ್ಲ ಎಂಬುದು ನಮ್ಮ ವೇದಿಕೆಯ ಗಟ್ಟಿ ನಿರ್ಧಾರವಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ಮತ್ತು ದ.ಕ. ಜಿ ನಿವತ್ತ ಸರಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಮಾ.೨೯ರಂದು ಬೆಳಗ್ಗೆ ೧೦.೩೦ಕ್ಕೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನ ತಾಲೂಕು ಮಿನಿವಿಧಾನ ಸೌಧ, ಮಂಗಳೂರು ಇಲ್ಲಿ ಜಿ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆ ಕರೆಯಲಾಗಿದ್ದು, ಈ ಸಭೆಗೆ ರಾಜ್ಯದ ಮಹಾ ಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ. ಷಣ್ಮುಖಯ್ಯ ಮತ್ತು ರಾಜ್ಯದ ತಂಡದ ಸದಸ್ಯರು, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಭಾಗವಹಿಸಲಿzರೆ. ಈ ಸಭೆಯಲ್ಲಿ ಸರಕಾರಕ್ಕೆ ಇನ್ನೊಮ್ಮೆ ಆರ್ಥಿಕ ನಷ್ಟದ ಬಗ್ಗೆ ಮನವರಿಕೆ ಮಾಡಲೂ ಏ.೩ರಂದು ಮೂರನೇ ಸಲ ಬೆಂಗಳೂರು ಚಲೋ ಕಾರ್ಯಕ್ರಮ ಹಾಗೂ ಏ.೪ ರಂದು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಸಂಘದ ವತಿಯಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ಬೇಡಿಕೆ ಈಡೇರಿಸಲು ಸರಕಾರವನ್ನೂ ಒತ್ತಾಯಿಸುವ ಕುರಿತು ನಿರ್ಧಾರ ವನ್ನು ತಾಳಲಾಗುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಹಾಗೂ ದಕ್ಷಿಣ ಕನ್ನಡ ಜಿ ಸರಕಾರಿ ನೌಕರರ ಸಂಘ ದ.ಕ. ಮಂಗಳೂರು ಅಧ್ಯಕ್ಷ ಎನ್. ಸೀತಾರಾಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿzರೆ.
ಮಾ.೨೮ರ ನಾಳೆ ಮೈಸೂರು ವಿಭಾಗದ ಸಭೆಯನ್ನು ಮೈಸೂರಿನ ಪೊಲೀಸ್ ಉಪ ಆಯುಕ್ತರ ಕಚೇರಿಯದರು ಇರುವ ಚಿಲ್ಡ್ರನ್ಸ್ ಪಾರ್ಕಿನಲ್ಲಿ ಕರೆಯಲಾಗಿದ್ದು ಮೈಸೂರು ಭಾಗದಲ್ಲಿ ಬರುವ ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಮಂಗಳೂರು ಉಡುಪಿ ಹಾಗು ಕೊಡಗು ಜಿಯ ಎಲ್ಲ ಜಿ ಪ್ರಧಾನ ಸಂಚಾಲಕರು ರಾಜ್ಯ ಸಂಚಾಲಕರು ಅಂದು ಮೈಸೂರಿನಲ್ಲಿ ಪಾಲ್ಗೊಳ್ಳುವ ಮೂಲಕ ಏ.೩ ರಂದು ಆರಂಭವಾಗಲಿರುವ ಆನಿರ್ದಿಷ್ಟ ಅವದಿ ಧರಣಿ ಹಾಗೂ ೪ರಂದು ನಡೆಯಲಿರುವ ರಾಜ್ಯ ಕರ್ನಾಟಕ ನಿವತ್ತ ನೌಕರರ ಸಂಘದ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಧಾರವನ್ನು ಪಡೆಯಲು ತಮ್ಮ ಸಲಹೆ ಸಹಕಾರ ನೀಡಲು ರಾಜ್ಯ ಸಂಚಾಲಕ ಶ್ರೀ ಆನಂದಪ್ಪ ದಾವಣಗೆರೆ ಇವರು ವಿಭಾಗ ಮಟ್ಟದ ಎಲ್ಲ ಜಿಗಳ ಪ್ರಧಾನ ಸಂಚಾಲಕರು ಹಾಗೂ ರಾಜ್ಯ ಸಂಚಾಲಕರಲ್ಲಿ ವಿನಂತಿಸಿzರೆ.
ಮಾ.೨೮ರಂದು ಮೈಸೂರಿ ನಲ್ಲಿರುವ ಮೈಸೂರು ವಿಭಾಗ ಮಟ್ಟದ ಸಭೆ ಹಾಗೂ ಮಾ.೨೯ ರಂದು ದಕ್ಷಿಣ ಕನ್ನಡ ಜಿಯ ಮಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿ ನಿವತ್ತ ನೌಕರರು ಸಭೆಗಳು ಎರಡರಲ್ಲೂ ನಿವೃತ್ತ ನೌಕರರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನ್ಯಾಯಯುತ ಹೋರಾಟಕ್ಕೆ ಬೆಂಬಲಿಸುವಂತೆ ಪ್ರಧಾನ ಸಂಚಾಲಕ ಡಾ. ಎಂಪಿಎಂ ಷಣ್ಮುಖಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿzರೆ.