ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ…

Share Below Link

ಹೊನ್ನಾಳಿ : ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಯಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಹೊನ್ನಾಳಿ-ನ್ಯಾಮತಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಳ್ಳಲಾ ಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
೨೦೦೭ ರಿಂದ ಸರ್ಕಾರದಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪ್ರಾರಂಭ ಮಾಡಿದ್ದು, ವಲಯ, ಕ್ಲಸ್ಟರ್ ಮಟ್ಟದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ತಾಲ್ಲೂಕು ಮತ್ತು ಜಿ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಂತರ ರಾಜ್ಯ ಮಟ್ಟದಲ್ಲಿ ನಮ್ಮ ತಾಲ್ಲೂಕಿನ ಪ್ರತಿಭೆಗಳು ಪ್ರಶಸ್ತಿಗಳಿ ಸಲಿ ಎಂದು ಶುಭ ಹಾರೈಸಿದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯುವ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯ ಅಧ್ಯಕ್ಷರಿಗೆ ಕಾರ್ಯಕ್ರಮದ ಅಧ್ಯಕ್ಷತೆ ನೀಡಬೇಕು ಎಂದು ಸೂಚಿಸಿದರು.
ಭಾರತೀಯ ವಿದ್ಯಾಸಂಸ್ಥೆಯು ೩೪ ವರ್ಷಗಳ ಹಿಂದೆ ಪ್ರಾರಂಭ ವಾಗಿ ಈ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ. ಇದಕ್ಕೆ ಕಾರಣ ರಾದ ಸಂಸ್ಥೆಯ ಆಡಳಿತ ಮಂಡಳಿ ಯವರಿಗೂ ಮತ್ತು ಶಿಕ್ಷಕ ವೃಂದ ದವರ ಕಾರ್ಯ ವೈಖರಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ದಲ್ಲಿ ಈ ಬಾರಿ ನಮ್ಮ ತಾಲ್ಲೂಕುಗಳು ಜಿಯಲ್ಲಿಯೇ ಪ್ರಥಮ ಸ್ಥಾನದಲ್ಲಿ ಫಲಿತಾಂಶ ಬರುವಂತೆ ಶಿಕ್ಷಕ ವೃಂದವರು ಗಮನಹರಿಸಬೇಕೆಂದು ಸಲಹೆ ನೀಡಿದರು.
ಬಿಆರ್‌ಸಿ ತಿಪ್ಪೇಶಪ್ಪ ಮಾತನಾಡಿ, ಯಾವುದೇ ಲೋಪ ದೋಷಗಳಾಗದಂತೆ ಯಾವುದೇ ತಾರತಮ್ಯಗಳಿಗೆ ಅವಕಾಶ ನೀಡ ದಂತೆ ತೀರ್ಪುಗಾರರು ತೀರ್ಪು ನೀಡಬೇಕೆಂದು ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ. ಆನಂದ ಕುಮಾರ್ ಮಾತನಾಡಿ, ಭಾರತೀಯ ವಿದ್ಯಾ ಸಂಸ್ಥೆಯು ಮಕ್ಕಳಿಗೆ ಪಠ್ಯದ ಜೊತೆಗೆ ಮಕ್ಕ ಲ್ಲಿರುವ ಪ್ರತಿಭೆಯನ್ನು ಗುರುತಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಮಕ್ಕಳೂ ಕೂಡ ತಮ್ಮಲ್ಲಿರುವ ಪ್ರತಿಭೆಗಳನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸುತ್ತಾ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಳ್ಳುತ್ತಾ ಬರುತ್ತಿ zರೆಂದು ಹರ್ಷ ವ್ಯಕ್ತಪಡಿಸಿದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎ.ಕೆ.ನಾಗೇಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಖಜಂಚಿ ಅನಿಲ್ ಕುಮಾರ್, ಇಸಿಒಗಳಾದ ಮುದ್ದಹನುಮೇಗೌಡ, ರಂಗ ನಾಥ್, ಆಫ್ಸರ್ ಅಹ್ಮದ್, ಸಂಸ್ಥೆಯ ಉಪಾಧ್ಯಕ್ಷ ಎಚ್. ಲಿಂಗಯ್ಯ, ನಿರ್ದೇಶಕರಾದ ಪ್ರಕಾಶ್, ಹಾಲೇಶ್ ಕುಂಕೋದ್, ಜಯಪ್ಪ, ಕೋರಿ ಯೋಗೀಶ್ ಕುಳಗಟ್ಟೆ, ಮುಖ್ಯೋಪಾಧ್ಯಾಯ ತಿಮ್ಮೇಶ್, ಪುನೀತ್, ಜಿ.ಪ್ರಾ. ಶಾ. ಶಿ. ಸಂಘದ ಜಿಧ್ಯಕ್ಷ ರಾಮಪ್ಪ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷೆ ಗೀತಾ ದೊಡ್ಡಪ್ಪ, ಪ್ರ.ಕಾರ್‍ಯದರ್ಶಿ ಪ್ರಕಾಶ್ ನಾಯ್ಕ್, ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಪ್ರ. ಕಾರ್‍ಯದರ್ಶಿ ಗಿರೀಶ್ ನಾಡಿಗ್, ಶಿಕ್ಷಕರಾದ ನಾಗಮ್ಮ, ಮಂಜಪ್ಪ, ಸತೀಶ್ ಇದ್ದರು.

Leave a Reply

Your email address will not be published. Required fields are marked *