ವಿರೋಧಿಗಳಿಂದ ಕೀಳು ಅಭಿರುಚಿಯ ರಾಜಕೀಯ: ಶಾಸಕ ಸಂಗಮೇಶ್ವರ್
ಭದ್ರಾವತಿ: ಸುಮಾರು ಒಂದುವರೆ ಸಾವಿರ ಕೋಟಿ ಯಿಂದ ಎರಡು ಸಾವಿರ ಕೋಟಿವರೆಗೂ ನಗರ ಹಾಗೂ ಗ್ರಾಮಾಂತರ ಪ್ರದೇಶ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಬಿಕೆ. ಸಂಗಮೇಶ್ವರ್ ತಿಳಿಸಿದರು.
ಚುನಾವಣೆಯಲ್ಲಿ ಗೆಲವು ಸಾಧಿಸಿದ ನಂತರ ಬೆಂಗಳೂರಿಗೆ ತೆರಳಿ, ಇದೇ ಮೊದಲ ಬಾರಿಗೆ ಭದ್ರಾವತಿಗೆ ಅಗಮಿಸಿದ ಶಾಸಕರನ್ನು, ಶಾಸಕರ ಗೃಹ ಕಛೇರಿ ಯಲ್ಲಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ತಮಗೆ ಮಂತ್ರಿ ಪದವಿಗಿಂತ ಊರಿನ ಅಭಿವೃದ್ಧಿ ಮುಖ್ಯ ಎಂದರಲ್ಲದೇ, ಮಂತ್ರಿ ಪದವಿ ನೀಡದಿದ್ದರೂ ಊರಿನ ಅಭಿವೃದ್ಧಿಗೆ ಪೂರ್ಣ ಸಹಕಾರ ಕೊಡಬೇಕು ಎಂಬ ಷರತ್ತಿನ ಮೇಲೆ ತಾವು ಬದ್ದರಾಗಿದ್ದೇನೆ ಎಂದರು.
ತಾವು ಕಳೆದ ಒಂದುವರೆ ತಿಂಗಳ ಕಾಲ ಬೆಂಗಳೂರಿನಲ್ಲಿ ಇದ್ದು ಊರಿನ ಅಭಿವೃದ್ಧಿ ಗೆ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರೇ, ತಮ್ಮ ವಿರೋಧಿಗಳು ತಮಗೆ ಅರೋಗ್ಯ ಸರಿಯಿಲ್ಲ, ಚಿಕಿತ್ಸೆ ಪಡೆಯಲು ಹೊರ ದೇಶ ಗಳಿಗೆ ತೆರಳುತ್ತಾರೆ, ಬೆಂಗಳೂರಿನಲ್ಲಿ ಖಾಸಗೀ ಅಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿzರೆ ಎಂಬ ಸುಳ್ಳು ವಂದತಿಗಳನ್ನು ಹಬ್ಬಿಸುವ ಮೂಲಕ ಕೀಳು ಅಭಿರುಚಿಯ ರಾಜಕೀಯ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತ ಪಡೆಸಿದರು.
ಜು.೨೦ರ ನಂತರ ತಮಗೆ ಯಾವುದಾದರೂ ಒಂದು ನಿಗಮದ ಅಧ್ಯಕ್ಷ ಸ್ಥಾನ ದೊರೆಯುವ ಭರವಸೆ ಇದೆ ಎಂದ ಶಾಸಕ ಸಂಗಮೇಶ್, ಎಂ.ಪಿ.ಎಂ. ಪುನರ್ ಪ್ರಾರಂಭಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೈಗಾರಿಕಾ ಸಚಿವರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮುಂದಿನ ತಿಂಗಳು ಚರ್ಚೆ ನಡೆಯಲಿದ್ದು ಕಾರ್ಖಾನೆ ಪ್ರಾರಂಭವಾಗಬಹುದು ಎಂದು ಅಶಾಭಾವನೆ ಹೊಂದಿರುವುದಾಗಿ ತಿಳಿಸಿದರು.
ಇದೇ ರೀತಿ ವಿ.ಐ.ಎಸ್.ಎಲ್. ಕಾರ್ಖಾನೆಯ ಬಗ್ಗೆ ಈಗಿರುವ ಮುಚ್ಚುವ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲು ಸಹಾ ಪ್ರಯತ್ನಿಸುತ್ತಿರುವು ದಾಗಿ ತಿಳಿಸಿದರು.
ಮಾಧವಚಾರ್ ಸರ್ಕಲ್ ನಿಂದ ಭದ್ರಕಾಲೋನಿವರೆಗೆ ಚನ್ನಗಿರಿ ರಸ್ತೆ ಅಗಲೀಕರಣ, ನೂತನ ರಸ್ತೆ ಸೇರಿದಂತೆ ಹಲವು ರಸ್ತೆಗಳ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಸರಿಪಡಿಸುವುದು, ಸ್ಲಂಗಳ ಅಭಿವೃದ್ಧಿ, ಸ್ವಚ್ಛತೆ, ಈಗಿರುವ ಒಂದುನೂರು ಬೆಡ್ ಗಳ ಸರ್ಕಾರಿ ಅಸ್ಪತ್ರೆ ಜೊತೆ ಭದ್ರಕಾಲೋನಿಯಲ್ಲಿ ಹತ್ತು ಎಕರೆ ಜಗದಲ್ಲಿ ನೂರೈವತ್ತು ಬೆಡ್ ಗಳ ನೂತನ ಸುಸಜ್ಜಿತ ಅಸ್ಪತ್ರೆ ನಿರ್ಮಾಣ, ಸ್ಥಳೀಯ ಯುವಕರಿಗೆ ಪದವಿಧರರಿಗೆ ಉದ್ಯೋಗ ಕಲ್ಪಿಸಲು ೭೦ ಎಕರೆಯಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆ, ರಿಂಗ್ ರಸ್ತೆ ನಿರ್ಮಾಣ, ಭದ್ರ ನದಿ ಎರಡು ಬದಿಯ ದಡಕ್ಕೆ ತಡೆಗೋಡೆ, ೪ ರಿಂದಾ೫ ನೂತನ ಸೇತುವೆ ಗಳ ನಿರ್ಮಾಣ, ಈಗ ನಿರ್ಮಾಣ ಹಂತದಲ್ಲಿರುವ ಮಾಧವಚಾರ್ ಸರ್ಕಲ್ ನಿಂದಾ ಬಿ.ಹೆಚ್. ರಸ್ತೆ ವರೆಗಿನ ಸೇತುವೆ ಕಾಮಾಗಾರಿ ಕೆಲ ಕಟ್ಟಡ ಮಾಲೀಕರಿಂದಾಗಿ ತಡ ವಾಗುತ್ತಿದ್ದು, ಮುಂದಿನ ತಿಂಗಳು ಸಂಬಂಧಿಸಿದ ಅಧಿಕಾರಿಗಳು ಮತ್ತು ಕಟ್ಟಡ ಮಾಲೀಕರೊಂದಿಗೆ ಮಾತುಕತೆ ನಡೆಸಿ ಈ ಹಿಂದೆ ಲೋಕೋಪಯೋಗಿ ಇಲಾಖೆ ಮಾಡಿರು ನೀಲಿ ನಕ್ಷೆಯಂತೆ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ಗ್ರಾಮಂತರ ಪ್ರದೇಶಗಳಿಗೆ ಹಾಗೂ ಚಿತ್ರದುರ್ಗಕ್ಕೆ ತೆರಳಲು ಸರ್ಕಾರಿ ಬಸ್‌ಗಳನ್ನು ಓಡಿಸಲು ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಪ್ರಗತಿಯಲ್ಲಿದೆ ಶೀಘ್ರವಾಗಿ ಸರ್ಕಾರಿ ಬಸ್ ಗಳ ಓಡಾಡಲಿವೆ ಎಂದರು.
ಅಡಳಿತ ಯಂತ್ರ ಚುರುಕು ಗೊಳಿಸಲು ಹಾಗೂ ನಿರ್ಮಾಣ ಹಂತದ ಕಾಮಗಾರಿ ಗಳನ್ನು ಪೂರೈಸಲು ಚುನಾವಣೆ ಸಂಧರ್ಭ ದಲ್ಲಿ ತಾವು ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವದು ಪ್ರಮುಖವಾಗಿದೆ ಎಂದರು.