ಜಿಲ್ಲಾ ಸುದ್ದಿತಾಜಾ ಸುದ್ದಿ

ಪೊಲೀಸರು ಗಾಂಧಿಬಜರ್‌ನಲ್ಲಿ ಬಲವಂತದ ಬಂದ್ ಮಾಡಿಸಬೇಡಿ: ವಾಣಿಜ್ಯ ಸಂಘ- ಸರ್ವ ಪಕ್ಷಗಳ ಮನವಿ…

Share Below Link

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದ ಇಡೀ ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಜರಿ ಮಾಡಲಾಗಿದ್ದು, ಪೊಲೀಸರು ಗಾಂಧಿಬಜರ್‌ನಲ್ಲಿ ಬಲವಂತದ ಬಂದ್ ಮಾಡಿಸಬಾರದು ಎಂದು ಜಿಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿ ನಾಥ್ ಹೇಳಿzರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಗಣೇಶ ಹಬ್ಬ iತ್ತು ಈದ್‌ಮಿಲಾದ್ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ಗಾಂಧಿಬಜ ರಿನ ಎ ವರ್ತಕರು ವ್ಯವಹಾರ ಸ್ಥಗಿತಗೊಳಿಸಿ ಸಹಕರಿಸಿzರೆ. ಆದರೆ ನಗರದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ರಾಗಿಗುಡ್ಡದಲ್ಲಿ ಈದ್‌ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರೂ ಸಹ ಆ ಘಟನೆ ಕೇವಲ ರಾಗಿಗುಡ್ಡಕ್ಕೆ ಸೀಮಿತವಾಗಿದ್ದರೂ ಕೆಲವು ಮಾಧ್ಯಮಗಳಲ್ಲಿ ಅತಿರಂಚಿ ತವಾಗಿ ತೋರಿಸುತ್ತಿರುವುದರಿಂದ ಶಿವಮೊಗ್ಗಕ್ಕೆ ಬರುವ ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಮತ್ತು ಈ ರೀತಿಯ ಸುದ್ದಿಗಳಿಂದ ಶಿವಮೊಗ್ಗದ ಶಾಂತಿಗೆ ಇನ್ನಷ್ಟು ಹಾನಿ ಆಗಲಿದೆ. ಜಿ ರಕ್ಷಣಾಧಿಕಾರಿಗಳು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿzರೆ. ಆದ್ದರಿಂದ ಮಾಧ್ಯಮಗಳು ವ್ಯಾಪ ರಿಗಳು ಮತ್ತು ಗ್ರಾಹಕರ ಹಿತದೃಷ್ಟಿ ಯಿಂದ ಸಾರ್ವಜನಿಕರ ಆತಂಕ ದೂರ ಮಾಡುವಲ್ಲಿ ಸಹಕರಿಸಬೇಕು ಎಂದು ವಿನಂತಿಸಿದರು.
೧೪೪ ಸೆಕ್ಷನ್ ಅನ್ನು ಕೇವಲ ರಾಗಿಗುಡ್ಡಕ್ಕೆ ಮಾತ್ರ ಸೀಮಿತ ಮಾಡಬೇಕೆಂದು ಈಗಾಗಲೇ ನಾವು ಜಿ ರಕ್ಷಣಾಧಿಕಾರಿಗಳು iತ್ತು ಜಿಧಿಕಾರಿಗಳಿಗೆ ವಿನಂತಿ ಸಿದ್ದೇವೆ. ಶಿವಮೊಗ್ಗಕ್ಕೆ ಕೆಟ್ಟ ಹೆಸರು ಬರದಂತೆ ಎಲ್ಲರೂ ನೋಡಿಕೊ ಳ್ಳಬೇಕು. ವಾಣಿಜ್ಯೋದ್ಯಮ ಬೆಳೆ ಸಲು ಅವಕಾಶ ಕೊಡಿ. ಶಿವಮೊಗ್ಗ ಅಭಿವೃದ್ಧಿಗೆ ಮಾರಕ ವಾಗದಂತೆ ಮಾಧ್ಯಮಗಳು ಸಂಯಮವಹಿಸ ಬೇಕೆಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಕೆಲವು ಮಾಧ್ಯಮದವರು ನಾವು ವಾಸ್ತ ವಾಂಶ ಮಾತ್ರ ತೋರಿಸಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶ ವಿಲ್ಲ. ಉದ್ಯಮಿಗಳಿಗೆ ಭದ್ರತೆ ಒದಗಿಸುವುದು ಜಿಡಳಿತದ ಕರ್ತವ್ಯ. ಸೆಕ್ಷನ್ ಮತ್ತು ಕರ್ಫ್ಯೂ ಇದಕ್ಕೆ ವ್ಯತ್ಯಾಸವಿದ್ದು, ಜಿಡಳಿತ ವ್ಯವಹಾರಗಳಿಗೆ ಅವಕಾಶ ನೀಡಲಿ. ಮಾಧ್ಯಮದವರ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ಕೆಲವು ಮಾಧ್ಯಮದವರು ಕೂಡ ಸಲಹೆ ನೀಡಿzರೆ.
ಈ ಸಂದರ್ಭದಲ್ಲಿ ನಗರದ ಶಾಂತಿಗೆ ಸಹಕರಿಸುವಂತೆ ಕಾರ್ಯ ದರ್ಶಿ ವಸಂತ ಹೋಬಳಿದಾರ್, ಎಂ. ಶ್ರೀಕಾಂತ್, ಧರಣೇಂದ್ರ ದಿನಕರ್, ಎನ್. ರಮೇಶ್ ಮನವಿ ಮಾಡಿದರು.
ರೊ. ವಿಜಯಕುಮಾರ್, ಪ್ರದೀಪ್ ಯಲಿ, ವಾಸುದೇವ್ ಸೇರಿದಂತೆ ವಾಣಿಜ್ಯ ಕೈಗಾರಿಕಾ ಸಂಘದ ಪ್ರಮುಖರು ಹಾಗೂ ವರ್ತಕರು ಉಪಸ್ಥಿತರಿದ್ದರು.