ಪೊಲೀಸ್ ಪ್ರಕಟಣೆ: ಕಾಣೆಯಾದವರ ಬಗ್ಗೆ ಮಾಹಿತಿ ನೀಡಿ…
ಶಿವಮೊಗ್ಗ : ಶಿಕಾರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಳಕಂಡ ವ್ಯಕ್ತಿಗಳು ಕಾಣೆಯಾಗಿದ್ದು, ಈ ವ್ಯಕ್ತಿಗಳ ವಿವರಗಳನ್ನು ಮರುಪ್ರಕಟಣೆಗಾಗಿ ನೀಡಲಾಗಿದೆ.
ಶಿಕಾರಿಪುರ ತಾಲ್ಲೂಕಿನ ಜಕ್ಕಿನಕೊಪ್ಪ ಗ್ರಾಮದ ರಂಗನಾಥ್ ಬಿನ್ ರುದ್ರಪ್ಪ (೪೭) ನವೆಂಬರ್ ೨೦೨೨ರಲ್ಲಿ ಮನೆಯಿಂದ ಹೋದ ವರು ಈವರೆಗೂ ವಾಪಾಸ್ಸು ಬಂದಿ ರುವುದಿಲ್ಲ. ಈ ವ್ಯಕ್ತಿಯ ಚಹರೆ ಸುಮಾರು ೫.೬ ಅಡಿ ಎತ್ತರ ದುಂಡುಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿ ರುತ್ತಾರೆ. ಮನೆಯಿಂದ ಹೋಗುವಾಗ ಕಂದು ಬಣ್ಣದ ಟೀ ಶರ್ಟ್ ಮತ್ತು ಬಿಳಿ ಬಣ್ಣದ ಪಂಚೆ ಧರಿಸಿರುತ್ತಾರೆ.
ಅರಿಷಿನಗೆರೆ ಗ್ರಾಮದ ಜುಮ್ಮಯ್ಯ ಬಿನ್ ಲೇಟ್ ಹೊಳೆಬಸಪ್ಪ (೬೬) ಇವರು ಆಗಸ್ಟ್ ೨೦೨೨ರಲ್ಲಿ ಮನೆಯಿಂದ ಕೆಲಸಕ್ಕೆಂದು ಹೋದವರು ವಾಪಾಸ್ಸು ಬಂದಿರುವುದಿಲ್ಲ. ಈ ವ್ಯಕ್ತಿಯ ಚಹರೆ ಸುಮಾರು ೫.೦೨ ಅಡಿ ಎತ್ತರ ದುಂಡುಮುಖ, ಬಿಳಿಯ ಕೂದಲು, ಬಿಳಿ ಮೀಸೆ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮನೆಯಿಂದ ಹೊಗುವಾಗ ನಶೇ ಬೂದು ಬಣ್ಣದ ತುಂಬು ತೂಳಿನ ಶರ್ಟ್ ಮತ್ತು ಪಟ್ಟಾ ಪಟ್ಟಿ ಪಂಚೆ ಕೆಂಪು ಟವೆಲ್ ಧರಿಸಿರುತ್ತಾರೆ.
ಕಲ್ಮನೆ ಗ್ರಾಮದ ಮಹೇಶಪ್ಪ ಬಿನ್ ಮಶಪ್ಪ (೫೫) ಇವರು ಜನವರಿ ೨೦೨೩ರಲ್ಲಿ ಮನೆಯಿಂದ ಬ್ಯಾಂಕಿಗೆ ಹಣ ಕಟ್ಟಲು ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಈ ವ್ಯಕ್ತಿಯೂ ಸುಮಾರು ೫.೬ ಅಡಿ ಎತ್ತರ ದುಂಡುಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿ ರುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಕೆಂಚಗೊಂಡನಕೊಪ್ಪ ಗ್ರಾಮದ ಅಭಿನಾಯ್ಕ ಬಿನ್ ತಿಮ್ಮನಾಯ್ಕ (೧೯) ಇವರು ಸೆಪ್ಟಂಬರ್ ೨೦೨೨ ರಲ್ಲಿ ಮನೆಯಿಂದ ಕೆಲಸಕ್ಕೆ ಹೋದ ವರು ವಾಪಾಸ್ಸು ಬಂದಿರುವುದಿಲ್ಲ. ಈ ವ್ಯಕ್ತಿಯ ಚಹರೆ ಸುಮಾರು ೫.೫ ಅಡಿ ಎತ್ತರ ದುಂಡುಮುಖ, ಕಪ್ಪನೆಯ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮನೆಯಿಂದ ಹೊಗುವಾಗ ಬಿಳಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿರುತ್ತಾರೆ, ಲಂಬಾಣಿ ಭಾಷೆ ಮಾತನಾಡುತ್ತಾರೆ.
ನೆಲವಾಗಿಲು ಗ್ರಾಮದ ಉಮೇಶ್ ಬಿನ್ ಬಸಪ್ಪ (೫೧) ಇವರು ಡಿಸೆಂಬರ್ ೨೦೦೦ರಲ್ಲಿ ನೆಲವಾಗಿಲು ಗ್ರಾಮದಿಂದ ಶಿಕಾರಿಪುರಕ್ಕೆ ಹೋದವರು ವಾಪಾಸ್ಸು ಬಂದಿರುವುದಿಲ್ಲ. ಈ ವ್ಯಕ್ತಿಯ ಚಹರೆ ಸುಮಾರು ೫.೬ ಅಡಿ ಎತ್ತರ ದುಂಡುಮುಖ, ಎಣ್ಣೆ ಗೆಂಪು ಮೈ ಬಣ್ಣ, ದಡವಾದ ಮೈಕಟ್ಟು ಹೊಂದಿರುತ್ತಾರೆ. ಮನೆಯಿಂದ ಹೊಗುವಾಗ ಅರ್ಧ ತೋಳಿನ ಬಿಳಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿರುತ್ತಾರೆ,
ಈ ಎ ಕಾಣೆಯಾದ ವ್ಯಕ್ತಿಗಳ ಸುಳಿವು ಸಿಕ್ಕಲ್ಲಿ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆ ಫೋ: ೦೮೧೮೭-೨೨೩೪೩೦ ಅಥವಾ ಶಿಕಾರಿಪುರ ಗ್ರಾಮಾಂತರ ಪೋಲಿಸ್ ಠಾಣೆ ಸಬ್ ಇನ್ಸಪೆಕ್ಟರ್ ಮೊ.: ೯೪೮೦೮೦೩೩೬೬ ಮತ್ತು ಶಿವಮೊಗ್ಗ ಕಟ್ರೋಲ್ ರೂಂ ಫೋ: ೦೮೧೮೨- ೨೭೦೫೨೧ಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಶಿಕಾರಿಪುರ ಪೋಲಿಸ್ ಪ್ರಕಟಣೆ ತಿಳಿಸಿದೆ.