ಜಿಲ್ಲಾ ಸುದ್ದಿತಾಜಾ ಸುದ್ದಿ

ತಾವು ಬೆಳೆದ ಶ್ರೀಗಂಧದ ಮರಗಳ ಹತ್ಯೆಗೆ ಮುನ್ನ ನನಗೆ ದಯಾಮರಣ ನೀಡಿ…

Share Below Link

ಶಿವಮೊಗ್ಗ: ಶ್ರೀಗಂಧ ಮರಗಳನ್ನು ಕಡಿತಲೆ ಮಾಡುವುದ ಕ್ಕಿಂತ ಮೊದಲು ನನಗೆ ದಯಾ ಮರಣ ದಯಪಾಲಿಸಿ ಎಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಭೂಸ್ವಾ ಧೀನ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿzರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಫೆ.೨ಕ್ಕೆ ಶ್ರೀಗಂಧ ಮರಗಳನ್ನು ಕಡಿತಲೆ ಮಾಡಲಾಗುವುದು ಎಂದು ಜ.೨೭ಕ್ಕೆ ನೋಟಿಸ್ ನೀಡುತ್ತಾರೆ. ಆದರೆ ಈ ವಿಷಯ ಈಗಾಗಲೇ ನ್ಯಾಯಾಲಯದ ವಿಚಾರಣೆ ಯಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳು ಮರ ಕಡಿತಲೆ ಮುಂದಾ ಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.


ತಾವು ಸುಮಾರು ೩೦ ವರ್ಷ ಗಳಿಂದ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರೀಗಂಧ ಬೆಳೆ ಬೆಳೆಸಿಕೊಂಡು ಬಂದಿರುವುದಾಗಿ ತಿಳಿಸಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಜಾಹೀರಾತು ನೀಡಿ ಶ್ರೀಗಂಧ ಬೆಳೆಸಲು ರೈತರನ್ನು ಪ್ರೋತ್ಸಾಹಿಸಿತ್ತು. ಸರ್ಕಾರದ ಪ್ರೇರಣೆಯ ಮೇರೆಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಶ್ರೀಗಂಧ ಮರಗಳನ್ನು ಬೆಳೆಸಿzವೆ. ಆದರೆ ಈಗ ಅದಕ್ಕೆ ತಕ್ಕಂತೆ ಬೆಲೆ ನೀಡದೆ ಕಡಿತಲೆ ಮಾಡುವುದಕ್ಕೆ ಮುಂದಾಗಿರುವುದು ಅನ್ಯಾಯ ಎಂದು ಆರೋಪಿಸಿದರು.
ಅಧಿಕಾರಿಗಳ ಲಂಚಗುಳಿತನ ಹಾಗೂ ದೌರ್ಜನ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿzನೆ ಎಂದರು.
ಈಗ ಆತ್ಮಹತ್ಯೆ ಮಾಡಿ ಕೊಳ್ಳಲು ಧೈರ್ಯ ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಹೇಳಿದಂತೆ ಶ್ರೀಗಂಧ ಮರಗಳಿಗೆ ವೈeನಿಕವಾಗಿ ಯೋಗ್ಯ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ. ಇಲ್ಲವಾದಲ್ಲಿ ನನ್ನ ಮರಗಳನ್ನು ಉಚಿತವಾಗಿ ತೆಗೆದು ಕೊಳ್ಳಿ. ಆದರೆ ಅದಕ್ಕಿಂತ ಮೊದಲು ನನಗೆ ದಯಾಮರಣ ನೀಡಿ ಎಂದು ಮನವಿಯಲ್ಲಿ ತಿಳಿಸಿzರೆ.
ಕೆಲವು ಅಧಿಕಾರಿಗಳು ಶ್ರೀಗಂಧಕ್ಕೆ ಹಾಗೂ ಭೂತಾಯಿಗೆ ಅಪಮಲ್ಯ ಮಾಡುತ್ತಿರುವುದನ್ನು ನಾನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ ಅವರು, ಶ್ರೀಗಂಧವು ರಾಷ್ಟ್ರದ ಅಮೂಲ್ಯ ಸಂಪತ್ತು. ಅದನ್ನು ಬೆಳೆಸಿದ ರೈತನಿಗೆ ಗೌರವ ನೀಡದೆ ದೌರ್ಜನ್ಯ ನಡೆಸುತ್ತಿ ರುವುದು ನೋವಿನ ಸಂಗತಿ ಎಂದು ವಿಷಾಧಿಸಿದರು.
ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಸ್ಥಳೀಯರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.