ಹಕ್ಕು ಪತ್ರ ನೀಡಲು ಆಗ್ರಹಿಸಿ ಡಿಸಿಗೆ ಮನವಿ
ಶಿವಮೊಗ್ಗ : ತಾಲ್ಲೂಕಿನ ಹಸೂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ೯೪ ಡಿ ಅಡಿ ಸರ್ವೇ ಆಗಿದ್ದು, ತಹಸೀಲ್ದಾರ್ ಕಛೇರಿ ಯಲ್ಲಿ ಅರ್ಜಿಗಳು ಇದ್ದು, ಇದುವರೆಗೂ ಹಕ್ಕು ಪತ್ರ ನೀಡಿಲ್ಲ, ಕೆಲವು ಜನರಿಗೆ ಮಾತ್ರ ಹಕ್ಕು ನೀಡಿರುವುದು ಕಂಡು ಬಂದಿದೆ. ಸುಮಾರು ಜನರಿಗೆ ೯೪ಡಿ ನಡಿ ಹಕ್ಕುಪತ್ರ ನೀಡಿಲ್ಲ. ಇದರಿಂದ ಗ್ರಾಮಸ್ಥರಿಗೆ ತುಂಬಾ ತೊಂದರೆ ಆಗಿದೆ. ಆದ್ದರಿಂದ ತಾವುಗಳ ದಯಮಾಡಿ ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯಿತಿ ಯಲ್ಲಿ ೯೪ ಡಿ.ನಡಿ ಸರ್ವೇ ಆಗಿ ಬಂದ ೯೪ ಡಿ ಅರ್ಜಿಗಳನ್ನು ಶೀಗ್ರ ವಿಲೇವಾರಿ ಮಾಡಿ ಹಕ್ಕು ಪತ್ರ ಕೊಡಿಸಬೇಕಾಗಿ ಗ್ರಾಮಸ್ಥರು ಮನವಿ ಮಾಡಿzರೆ.
ಶಿವಮೊಗ್ಗ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಜೆ.ಜೆ.ಎಂ.ನಡಿ ಕೇವಲ ಮೀಟರ್ ಬುರಡೆ ಹಾಕಿ ನಲ್ಲಿ ಸಂಪರ್ಕ ಹಾಕಿಲ್ಲ, ಕೆಲವು ಕಡೆ ಪೈಪ್ ಲೈನ್ ಮಾಡಿಲ್ಲ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆ ಆಗುತ್ತದೆ. ಸದರಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಿಲ್ಲ, ಅಧಿಕಾರಿಗಳು ಈ ಯೋಜನೆ ಬಗ್ಗೆ ನಿರ್ಲಕ್ಷ್ಯ ತೋರಿzರೆ ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡುವಂತೆ ಹಸೂಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಜಯಕುಮಾರ್ ಕೆ. ಜಿಧಿಕಾರಿಗಳಿಗೆ ಮನವಿ ಮೂಲಕ ಒತ್ತಾಯಿಸಿzರೆ.