ಜಿಲ್ಲಾ ಸುದ್ದಿತಾಜಾ ಸುದ್ದಿ

ಸಕ್ಕರೆ ಕಾರ್ಖಾನೆ ಆಸ್ತಿ ಸಾರ್ವಜನಿಕ ಸೇವೆಗೆ ಮೀಸಲಿಡಲು ಆಗ್ರಹಿಸಿ ಡಿಸಿಗೆ ಮನವಿ

Share Below Link

ಶಿವಮೊಗ್ಗ: ತುಂಗಾ ಭದ್ರಾ ಸಕ್ಕರೆ ಕಾರ್ಖಾನೆ ಆಸ್ತಿ ಖಾಸಗಿ ಲೇಔಟ್ ಆಗಿ ಪರಿವರ್ತನೆ ಆಗದೇ ಸರ್ಕಾರಿ ಸಾರ್ವಜನಿಕ ಸೇವೆಗೆ ಮೀಸಲಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ನೇತೃತ್ವದಲ್ಲಿ ಡಿಸಿಗೆ ಮನವಿ ಸಲ್ಲಿಸಲಾಯಿತು.
ತುಂಗಾ ಭದ್ರಾ ಸಕ್ಕರೆ ಕಾರ್ಖಾನೆ ಸುಮಾರು ೧೮೦೦ ಎಕರೆ ಜಗ ಹೊಂದಿದೆ. ಅಂದಿನ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಕಬ್ಬು ಬೆಳೆಯುವ ರೈತರ ಅನುಕೂಲಕ್ಕಾಗಿ ಮಲವಗೊಪ್ಪದಲ್ಲಿ ೧೨೦ ಎಕರೆ ಜಗದಷ್ಟು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮನೆಗಳನ್ನು ನೀಡಿತ್ತು. ಇದರ ಜೊತೆಗೆ ೧೨೦ ಎಕರೆ ಜಗದಲ್ಲಿ ಕಬ್ಬು ಸಾಗಾಣಿಕೆಗೆ ಬರುವ ವಾಹನಗಳ ನಿಲುಗಡೆಗೆ ಬಳಸಲಾಗುತ್ತಿತ್ತು. ಕ್ರಮೇಣ ಕಾರ್ಖಾನೆ ನಿಂತು ಹೋಯಿತು ಎಂದು ಮನವಿದಾರರು ತಿಳಿಸಿದರು.
ಈಗ ಕಾರ್ಖಾನೆಯ ಜಗವನ್ನು ನ್ಯಾಯಾಲಯದ ಮೂಲಕ ಆದೇಶ ಮಾಡಿಕೊಂಡು ಈ ಜಗವನ್ನು ಕೆಲವು ಪ್ರತಿಷ್ಠಿತ ರಾಜಕೀಯ ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಲೇಔಟ್‌ಗಳಾಗಿ ಪರಿವರ್ತನೆ ಮಾಡುವ ಹುನ್ನಾರ ಮಾಡುತ್ತಿ ದ್ದಾರೆ. ಇದು ತೀವ್ರ ಖಂಡನೀಯ. ಇದನ್ನು ಸಾರ್ವಜನಿಕ ಉದ್ದೇಶ ಕ್ಕೋಸ್ಕರವಾಗಿಯೇ ಮೀಸಲಾಗಿಡ ಬೇಕು. ಬೇಕಾದರೆ ನ್ಯಾಯಾಲಯ ದಿಂದ ಗೆದ್ದುಕೊಂಡ ಉದ್ದಿಮೆದಾರರಿಗೆ ಪರಿಹಾರ ನೀಡಿ ಆ ಜಗವನ್ನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸರ್ಕಾರ ಈ ಜಗದಲ್ಲಿ ಇಂಜಿನಿಯರಿಂಗ್ ಕಾಲೇಜ್, ಅಥವಾ ಸರ್ಕಾರಿ ಕಚೇರಿಗಳ ಸಂಕೀರ್ಣ, ಇಲ್ಲವೇ ಐಟಿ ಬಿಟಿ ಉದ್ಯಮಕ್ಕಾಗಿ ಬಳಸಬೇಕು. ಇದರಿಂದ ಉದ್ಯೋಗವೂ ಸಿಕ್ಕಂತಾಗುತ್ತದೆ. ಯಾವುದೇ ಕಾರಣಕ್ಕೂ ಖಾಸಗಿ ಲೇಔಟ್‌ಗೆ ಅವಕಾಶ ಕೊಡಬಾರದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕವಿತಾ ರಾಘವೇಂದ್ರ, ಮಧುಕುಮಾರ್, ಬಾಲಾಜಿ, ಶಿವಕುಮಾರ್, ಅಫ್ತಾಬ್ ಫರ್ವಿಜ್, ಮಂಜುನಾಥ್, ರೇಷ್ಮಾ ಮೆದಲಾದವರಿದ್ದರು.