ಜಿಲ್ಲಾ ಸುದ್ದಿತಾಜಾ ಸುದ್ದಿ

ಅಂತ್ಯ ಸಂಸ್ಕಾರ ಯೋಜನೆ ಮರು ಜರಿಗೆ ಆಗ್ರಹಿಸಿ ಮನವಿ ….

Share Below Link

ಶಿವಮೊಗ್ಗ: ಅಂತ್ಯ ಸಂಸ್ಕಾರ ಯೋಜನೆ ಮರು ಜರಿಗೆ ಆಗ್ರ ಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಇಂದು ಜಿಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಜತಿ, ಧರ್ಮ, ಸ್ತ್ರೀ-ಪುರುಷರು, ಅಂಗವಿಕಲರು ಮತ್ತು ಮಕ್ಕಳು ಮೃತರಾದರೆ ಅವರ ವಾರಸು ದಾರರಿಗೆ ಮೃತರ ಅಂತ್ಯಕ್ರಿಯೆ ಯನ್ನು ನಡೆಸಲು ಜರಿಯಲ್ಲ್ಲಿದ್ದ ಅಂತ್ಯಸಂಸ್ಕಾರ ಯೋಜನೆಯ ಅಡಿಯಲ್ಲಿ ೫,೦೦೦ ರೂ, ಗಳನ್ನು ಈ ತನಕ ನೀಡುತ್ತಿದ್ದ ಜನಪರ ಯೋಜನೆ ರದ್ದುಗೊಳಿಸಿರುವು ದನ್ನು ಸರ್ಕಾರ ಕೂಡಲೇ ಮರು ಸ್ಥಾಪಿಸಬೇಕೆಂದು ರಾಜ್ಯದ ಮುಖ್ಯ ಮಂತ್ರಿಗಳಗೆ, ಉಪ ಮುಖ್ಯ ಮಂತ್ರಿಗಳಗೆ ಮತ್ತು ಕಂದಾಯ ಸಚಿವರಿಗೆ ಪ್ರತ್ಯೇಕವಾಗಿ ಪತ್ರ ಬರೆದು ಶಿವಮೊಗ್ಗ ಜಿಧಿಕಾರಿ ಗಳ ಮೂಲಕ ಒತ್ತಾಯಿಸಲಾಗಿದೆ.
ರಾಜ್ಯ ಸರ್ಕಾರದಿಂದ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಯಾವುದೇ ಕುಟುಂಬದ ಸದಸ್ಯರು ಯಾವುದೇ ರೀತಿಯಲ್ಲಿ ಮರಣ ಹೊಂದಿದಲ್ಲಿ ಮೃತರ ವ್ಯಕ್ತಿಯ ವಾರಸುದಾರರು/ಅಂತ್ಯಕ್ರಿಯೆ ನಡೆಸುವ ಜವಾಬ್ದಾರಿಯುತ ಸದ ಸ್ಯರು ಅಥವಾ ಮೃತರ ಅವಲಂಬಿ ತರಿಗೆ ಮೃತರ ಅಂತ್ಯಕ್ರಿಯೆ ನೆರ ವೇರಿಸಲು ಅರ್ಹ ಫಲಾನುಭವಿ ಗಳಿಗೆ ಒಂದೇ ಬಾರಿಗೆ ರೂ.೫, ೦೦೦ ಗಳನ್ನು ನೀಡಲಾಗುತ್ತಿತ್ತು ಎಂದರು.
೨೦೨೧ರ ಅವಧಿಯಲ್ಲಿ ಮು ಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ತಮ್ಮ ೨೦೨೧-೨೨ ರ ಸಾಲಿನ ಆಯವ್ಯಯದಲ್ಲಿ ರಾಜ್ಯ ದಲ್ಲಿ ಅಂತ್ಯಸಂಸ್ಕಾರ ಯೋಜನೆ ಯನ್ನು ರದ್ದುಪಡಿಸಿ ರಾಜ್ಯದ ಬಡ ಕುಟುಂಬಗಳ ಮೇಲೆ ಗದಾ ಪ್ರಹಾರ ನಡೆಸಿzರೆ, ಅಂದಿನ ಬಿಜೆಪಿ ಸರ್ಕಾರಕ್ಷ ಮಠ-ಮಾನ್ಯ ಗಳಿಗೆ ಹಣ ಒದಗಿಸಲು ಯಥೇಚ್ಛ ಹಣ ಲಭ್ಯವಿತ್ತು. ಆದರೆ, ಬಡ ಕುಟುಂಬಗಳಿಗೆ ಅಂತ್ಯಸಂಸ್ಕಾರಕ್ಕೆ ಅನುಕೂಲವಾಗುತ್ತಿದ್ದ ಅಂತ್ಯ ಸಂಸ್ಕಾರ ಯೋಜನೆಯನ್ನು ಕೈಬಿಟ್ಟಿರುವುದು ಜನವಿರೋಧಿ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎ ಅಂಶಗಳನ್ನು ಪರಿಗ ಣಿಸಿ ತಾವು ಈಗಾಗಲೇ ನೂತನ ವಾಗಿ ಅಧಿಕಾರ ವಹಿಸಿಕೊಂಡ ನಂತರ ಹಲವಾರು ಜನಪರ ಯೋಜನೆಗಳನ್ನು ಜರಿಗೊಳಸಲು ನಿರ್ಧರಿಸಿರುವಂತೆಯೇ ಈ ಅಂತ್ಯಸಂಸ್ಕಾರ ಯೋಜನೆಯನ್ನೂ ಸಹ ಮನಃ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದರು.
ಈ ಸಂದರ್ಭದಲ್ಲಿ ಸಂಘಟ ನೆಯ ಪ್ರಮುಖರಾದ ಕಲ್ಲೂರು ಮೇಘರಾಜ್, ಎಸ್.ವಿ. ರಾಜ ಮ್ಮ, ಡಾ. ನೇತ್ರಾವತಿ, ಎಸ್.ಬಿ. ಅಶೋಕ್‌ಕುಮಾರ್, ಸುರೇಶ್ ಮಾಸಡಿ, ಶಂಕ್ರಾನಾಯ್ಕ, ಎಲ್. ಆದಿಶೇಷ, ಮಂಜುನಾಥ, ಸುರೇಶ್ ಕೋಟೆಕಾರ್, ಸೋಮ ಶೇಖರಪ್ಪ, ಟಿ.ಟಿ. ಶೇಖರಪ್ಪ ಇನ್ನಿತರರು ಹಾಜರಿದ್ದರು.