ಜಿ ಹಾಗೂ ತಾ.ಪಂ.ಕ್ಷೇತ್ರಗಳ ಮರುವಿಂಗಡಣೆ ಮಾಡುವಂತೆ ಕೋರಿ ಮಧು ಬಂಗಾರಪ್ಪರಿಂದ ಮನವಿ
ಶಿವಮೊಗ್ಗ: ಜಿ ಹಾಗೂ ತಾ.ಪಂ.ಕ್ಷೇತ್ರಗಳ ಮರುವಿಂಗಡಣೆ ಮಾಡುವಂತೆ ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿ zರೆ.
ಜಿಪಂ ಮತ್ತು ತಾ ಪಂ, ಸೀಮಾ ಆಯೋಗದ ಆದೇಶದಂತೆ ಕ್ಷೇತ್ರ ಗಳನ್ನು ನಿಗದಿಪಡಿಸುವ ಆದೇಶ ವನ್ನು ಹೊರಡಿಸಿದ್ದು, ಆದೇಶದ ಪ್ರಕಾರ ಉತ್ತರ ಕನ್ನಡ, ಕೊಡಗು ಮತ್ತು ಭಾಗಶಃ ಚಿಕ್ಕಮಗಳೂರು ಜಿಯ ಪ್ರತಿ ಜಿ ಪಂಚಾಯತ್ ಕ್ಷೇತ್ರಕ್ಕೆ ೨೧,೦೦೦ ಜನ ಸಂಖ್ಯೆಗೆ ಸೀಮಾ ಕ್ಷೇತ್ರವನ್ನು ನಿಗದಿಪಡಿಸ ಲಾಗಿರುತ್ತದೆ ಎಂದು ತಿಳಿಸಿzರೆ.
ಶಿವಮೊಗ್ಗ ಜಿಯು ಕೂಡ ದೇಶದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿದ್ದು, ದಟ್ಟ ಅರಣ್ಯದಿಂದ ಸುತ್ತುವರಿದಿ ರುತ್ತದೆ. ಲಿಂಗನಮಕ್ಕಿ, ಚಕ್ರಾ, ವರಾಹಿ, ಸಾವೇಹಕ್ಕು ಮತ್ತು ತುಂಗಾಭದ್ರಾ ಯೋಜನೆಗಳಿಂದ ಬಹಳಷ ಪ್ರದೇಶವು ಮುಳುಗಡೆ ಯಾಗಿ ಚದುರಿದಂತೆ ಜನವಸತಿ ಪ್ರದೇಶವಿರುತ್ತದೆ ಎಂದರು.
ಪಂಚಾಯತ್ ಆಯೋಗದ ನಡಾವಳಿ ಅನ್ವಯ ಉತ್ತರ ಕನ್ನಡ, ಕೊಡಗು ಮತ್ತು ಭಾಗಶಃ ಚಿಕ್ಕಮ ಗಳೂರು ಜಿಯಲ್ಲಿ ನಿಗದಿಪಡಿ ಸಿದ ಮಾದರಿಯಂತೆ ಶಿವಮೊಗ್ಗ ಜಿಯನ್ನು ಸಹ ಪರಿಗಣಿಸಬೇಕು ಎಂದು ಮನವಿ ಮಾಡಿzರೆ.
೨೦೧೧ರ ಜನಗಣತಿ ಪ್ರಕಾರ ಕ್ಷೇತ್ರ ವಿಂಗಡಣೆ ಮಾಡಲಾಗಿ ರುತ್ತದೆ. ಆದರೆ ೨೦೨೧ರ ಜನಗಣ ತಿಯ ವರದಿಯು ಬಂದಿರುವು ದಿಲ್ಲ. ಅದರಂತೆ ೨೦೨೧ರ ಜನಗಣ ತಿಯ ವರದಿಯು ಬಂದರೆ ಜನ ಸಂಖ್ಯೆಯು ಹೆಚ್ಚಳವಾಗಿರುತ್ತದೆ. ಆದ್ದರಿಂದ ಜಿ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವಂತೆ ಹಾಗೂ ಶಿವಮೊಗ್ಗ ಜಿಯಲ್ಲಿ ಬೇರೆ ಜಿಗಳಿಗಿಂತ ಹೆಚ್ಚು ಪ್ರದೇಶ ಮುಳುಗಡೆಯಾಗಿದ್ದು, ಜನವಸತಿ ಯು ತುಂಬಾ ಚದುರಿ ಹೋಗಿ ರುತ್ತದೆ ಎಂದು ತಿಳಿಸಿದರು.
ಜಿಯ ಜನರ ಒತ್ತಾಸೆಯು ಕೂಡ ಕ್ಷೇತ್ರಗಳ ವಿಸ್ತಾರ ದೊಡ್ಡ ದಾಗಿದ್ದು, ಆಡಳಿತಾತ್ಮ ದೃಷ್ಟಿ ಯಿಂದ ಗುಡ್ಡಗಾಡು ಪ್ರದೇಶದ ಮಾದರಿಯಲ್ಲಿಯೇ ಕ್ಷೇತ್ರವನ್ನು ಮರುವಿಂಗಡಣೆ ಮಾಡಲು ಸಹಾಯಕವಾಗುವಂತೆ ಕೊಡುಗು, ಉತ್ತರ ಕನ್ನಡ ಮತ್ತು ಭಾಗಶಃ ಚಿಕ್ಕಮಗಳೂರು ಜಿ ಯಲ್ಲಿ ಕೈಗೊಂಡಿರುವಂತೆ ಶಿವ ಮೊಗ್ಗ ಜಿಯನ್ನು ಸಹ ಪರಿಗಣಿಸಿ ಆದೇಶ ಹೊರಡಿಸುವಂತೆ ಸಂಬಂಧಿಸಿದವರಿಗೆ ಆದೇಶ ಮಾಡಿ ನಮ್ಮ ಜಿಗೆ ನ್ಯಾಯ ಒದಗಿಸಿ ಕೊಡುವಂತೆ ಸಚಿವರು ಕೋರಿ zರೆ.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜು ನಾಥ ಗೌಡ ಇದ್ದರು.