ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಚನ್ನಬಸಪ್ಪರಿಗೆ ನಿರೀಕ್ಷೆಗೂ ಮೀರಿ ಜನಬೆಂಬಲ: ಕೆ.ಎಸ್ . ಈಶ್ವರಪ್ಪ

Share Below Link

ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರಿಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿರುವುದರಿಂದ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಚನ್ನಬಸಪ್ಪ ಅವರಿಗೆ ಎಲ್ಲಾ ಜನಾಂಗದವರು ಬೆಂಬಲಿಸುತ್ತಿರು ವುದರಿಂದ ಕಳೆದ ಬಾರಿ ೪೬ ಸಾವಿರಕ್ಕೂ ಹೆಚ್ಚು ಮತಗಳಿಂದ ನಾನು ಗೆಲುವು ಸಾಧಿಸಿದ್ದೆ. ಈ ಬಾರಿ ಅವರು ೬೦ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಕಳೆದ ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಪಕ್ಷದ ಬೂತ್ ಮತ್ತು ಪೇಜ್ ಮಟ್ಟದಲ್ಲಿ ಪಕ್ಷದ ಸಂಘಟನೆ ಹಾಗೂ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಪಕ್ಷದಿಂದ ಹಮ್ಮಿ ಕೊಂಡಿರುವ ಕಾರ್ಯಕ್ರಮಗಳು, ಚುನಾವ ಣೆಯ ಪ್ರಚಾರಕ್ಕಾಗಿ ಪಕ್ಷದ ವರಿ ಷ್ಠರು ಆಗಮಿಸುತ್ತಿರುವುದು ಅಭ್ಯ ರ್ಥಿ ಗೆಲುವಿಗೆ ಸಹಕಾರಿಯಾಗ ಲಿದೆ ಎಂದರು.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ನಿನ್ನೆ ನಡೆದ ವಿವಿಧ ಸಮುದಾಯಗಳ ಸಭೆ ಯಲ್ಲಿ ಭಾಗವಹಿಸಿದ್ದಾರೆ ನಿರೀ ಕ್ಷೆಗೂ ಮೀರಿ ಜನರು ಸೇರಿದ್ದರು. ಏ.೩೦ರಂದು ಬೆಳಿಗ್ಗೆ ೧೦.೩೦ಕ್ಕೆ ಪೇಸ್ ಕಾಲೇಜಿನ ಹಿಂಭಾಗದ ಲ್ಲಿರುವ ಜಯಲಕ್ಷ್ಮಿ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಸಂತೋಷ್‌ಜೀ ಅವರು ವಿವಿಧ ಸಮುದಾಯಗಳ ಪ್ರಮು ಖರ ಸಭೆಯಲ್ಲಿ ಭಾಗವಹಿಸ ಲಿದ್ದಾರೆ. ಮೇ ೩ರಂದು ಸಂಜೆ ೫ ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಿವಮೊಗ್ಗ ದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅದೇ ರೀತಿ ಮೇ ೭ರಂದು ಆಯ ನೂರಿನಲ್ಲಿ ಜಿಲ್ಲೆಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರಧಾ ನಿ ನರೇಂದ್ರ ಮೋದಿಯ ವರು ಭಾಗವಹಿಸಲಿದ್ದಾರೆ ಎಂದರು.
ಜನರ ಮನಸ್ಸನ್ನು ಗೆಲ್ಲುವುದು ಬಿಟ್ಟು ಕಾಂಗ್ರೆಸ್ ಸೋಲಿನ ಭೀತಿ ಯಿಂದ ಗೂಂಡಾಗಿರಿ ಮಾಡು ತ್ತಿದೆ. ಅದನ್ನು ನಿಲ್ಲಿಸದಿದ್ದರೆ ಬಿಜೆಪಿ ತಕ್ಕ ಉತ್ತರ ನೀಡುತ್ತದೆ. ಪಕ್ಷದ ನಾಯಕರು ಕೆಟ್ಟ ಭಾಷೆಗಳನ್ನು ಬಳಸಿ ಹೇಳಿಕೆಗಳನ್ನು ನೀಡುತ್ತಿ ದ್ದಾರೆ. ಅದನ್ನು ನಿಲ್ಲಿಸಬೇಕು. ನಿನ್ನೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷದ ಹಾವು ಎಂದಿರು ವುದು ಅವರಿಗೆ ಶೋಭೆ ತರುವು ದಿಲ್ಲ. ಅವರಿಂದ ಇಂತಹ ಮಾತು ಗಳನ್ನು ನಿರೀಕ್ಷಿಸಿರಲಿಲ್ಲ ಎಂದರು.
ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಎಲ್ಲಾ ಹುದ್ದೆಗಳನ್ನು ನೀಡಿತ್ತು. ಅದರೆ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಸೋಲಿಸು ವುದೇ ಪಕ್ಷದ ಗುರಿಯಾಗಿದೆ. ಬಿಜೆಪಿಯನ್ನು ಟೀಕೆ ಮಾಡು ವವರು ಉದ್ದಾರ ಆಗುವುದಿಲ್ಲ ಎಂದರು.
ಸರ್ಕಾರದಿಂದ ಲಾಭ ಪಡೆದ ವರು ಹಾಗೂ ಪಕ್ಷದ ವಿಚಾರ ಧಾರೆಗಳನ್ನು ಒಪ್ಪುವವರು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವುದರ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ಜಗದೀಶ್, ಸಂತೋಷ್ ಬಳ್ಳೆಕೆರೆ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.