ರೈತ ಹೋರಾಟವೆಂದರೆ ಸಂಸ್ಕೃತಿಯ ವಿಕಸನ : ಡಾ.ಕೆ.ಜಿ.ವೆಂಕಟೇಶ್
ಶಿವಮೊಗ್ಗ : ರೈತ ಹೋರಾಟ ವೆಂದರೆ ಸಂಸ್ಕೃತಿಯ ವಿಕಸನ ವ್ಯವಸ್ಥೆ. ಅದು ಕೇವಲ ಹೋರಾಟ ಅಥವಾ ಮುಷ್ಕರವಲ್ಲ ಎಂದು ಇತಿಹಾಸ ಸಂಶೋಧಕರಾದ ಡಾ| ಕೆ.ಜಿ. ವೆಂಕಟೇಶ್ ಹೇಳಿದರು.
ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ರೈತ ಹೋರಾಟ ಮತ್ತು ಭೂ ಸುಧಾರಣೆಯ ಬಗ್ಗೆ ಮಾತನಾಡಿದ ಅವರು, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ವಿದ್ಯಾರ್ಥಿಯಾಗಿzಗ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷನಾಗಿ ಸ್ವತಃ ತಾವು ರೈತ ಹೋರಾಟದಲ್ಲಿ ಪಾಲ್ಗೊಂಡಿ ದ್ದನ್ನು ನೆನಪಿಸಿಕೊಂಡ ಅವರು ಕರ್ನಾಟಕದಲ್ಲಿ ಸ್ವಾತಂತ್ರ ಪೂರ್ವ ದಲ್ಲಿ ನಡೆದ ನಂಜನಗೂಡಿನ ಜಂಗಮರ ಹೋರಾಟ, ದಕ್ಷಿಣ ಕನ್ನಡ ಮತ್ತು ಬಳ್ಳಾರಿಯಲ್ಲಿ ನಡೆದ ಹೋರಾಟ, ನಗರದಂಗೆ, ಸ್ವಾತಂತ್ರದ ನಂತರ ನಡೆದ ಕಾಗೋಡು ಚಳುವಳಿ ಹಾಗೂ ಕಾಫಿ ಬೆಳೆಗಾರರ ಚಳುವಳಿ, ನರಗುಂದ ನವಲಗುಂದ ಹೋರಾಟದ ಬಗ್ಗೆ ತಿಳಿಸಿದರು.
ರೈತ ಸಂಘ ಪ್ರಾರಂಭದಲ್ಲಿ ೨೦ಕ್ಕೂ ಹೆಚ್ಚು ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದರೂ ಕೂಡ ಸರ್ಕಾರ ಎಲ್ಲವನ್ನು ಈಡೇರಿಸಲಿಲ್ಲ ಆದರೂ ಕೆಲವು ಬೇಡಿಕೆಯನ್ನು ಈಡೇರಿಸಿತು. ವೈeನಿಕ ಬೆಲೆ ನಿಗದಿ ಸಾಲಕ್ಕಾಗಿ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಳ್ಳು ವುದನ್ನು ನಿಷೇಧಿಸುವುದು, ಗ್ರಾಮೀಣ ಸಂಪನ್ಮೂಲಗಳ ಶೋಷಣೆಯನ್ನು ತಡೆಯುವುದು, ಉದಾರಿಕರಣದ ವಿರುದ್ಧ ಹೋರಾಟ ಮಾಡುವುದು ಹಾಗೂ ಜಮೀನ್ದಾರ ಪದ್ಧತಿ, ಗೇಣಿದಾರ ಪದ್ಧತಿ ವಿರುದ್ಧ ಹೋರಾಟವನ್ನು ಕೈಗೊಂಡಿತ್ತು. ಸರ್ಕಾರ ೧೯೬೨ರ ಹಾಗೂ ೧೯೭೪ರ ಕಾಯ್ದೆ ಅನ್ವಯ ಭೂ ಸುಧಾರಣೆ ಪದ್ಧತಿಯನ್ನು ಜರಿಗೆ ತಂದು ಗೇಣಿ ಹಾಗೂ ಜಮೀನ್ದಾರಿ ಪದ್ಧತಿಯನ್ನು ಕೈ ಬಿಟ್ಟಿತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ಇತಿಹಾಸದ ಉಪನ್ಯಾಸಕ ನವೀನ್ ಕುಮಾರ್ ಸ್ವಾಗತ ಮತ್ತು ವಂದನಾರ್ಪಣೆ ಯನ್ನು ಮಾಡಿದರು. ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.