ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಮಣ್ಣನ್ನು ಕಲುಷಿತಗೊಳಿಸದೆ ಭೂತಾಯಿಯ ಋಣ ತೀರಿಸಿ: ಶ್ರೀಧರ್

Share Below Link

ಶಿವಮೊಗ್ಗ: ನಮ್ಮ ಅಸ್ತಿತ್ವ ಹಾಗೂ ಬದುಕಿಗೆ ಭೂತಾಯಿಯೇ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣ ಕರ್ತಳು. ಪರಿಸರ ಹಾಗೂ ಮಣ್ಣನ್ನು ಕಲುಷಿತಗೊಳಿಸದೆ ಸಂರ ಕ್ಷಿಸುವ ಮೂಲಕ ಭೂತಾಯಿಯ ಋಣ ತೀರಿಸಬೇಕಿದೆ ಎಂದು ಪರೋಪಕಾರಂ ಕುಟುಂಬದ ಕಟ್ಟಾಳು ಶ್ರೀಧರ್ ಎನ್.ಎಂ. ಹೇಳಿದರು.


ಪರೋಪಕಾರಂ ಶಿವಮೊಗ್ಗ ವತಿಯಿಂದ ಇತ್ತೀಚೆಗೆ ನಗರದ ಹೊರವಲಯದಲ್ಲಿನ ಗಾಜ ನೂರು ಬಳಿಯ ಹಳೇ ಹೊನ್ನಾ ಪುರದಲ್ಲಿರುವ ಗಣೇಶ್ ಎಂ. ಅಂಗಡಿ ಅವರ ತೋಟದಲ್ಲಿ ಹಮ್ಮಿ ಕೊಂಡಿದ್ದ ಭೂಮಿ ಹುಣ್ಣಿಮೆ ಪೂಜ ಕಾರ್‍ಯಕ್ರಮದಲ್ಲಿ ಪಲ್ಗೊಂಡು ಮಾತನಾಡಿದ ಅವರು ತಾಯಿ ಭುವನೇಶ್ವರಿಯ ಗರ್ಭ ದಲ್ಲಿ ಜನಿಸಿ, ಅವಳ ಮಡಿಲಿ ನಲ್ಲಿಯೇ ಬೆಳೆದು, ಅವಳು ನೀಡಿದ ಭಿಕ್ಷೆ ತಿಂದು, ಅವಳ ಮಣ್ಣಿನಲ್ಲಿಯೇ ಒಂದಾಗುವ ಈ ಶರೀರ ಅವಳಿಂದ ಪಡೆದ ಅನಂತ ಉಪಕಾರಕ್ಕೆ ನೀಡುವ ಒಂದು ಸಣ್ಣ ಧನ್ಯವಾದವೇ ಭೂಮಿ ಹುಣ್ಣಿಮೆ. ಈ ಹಬ್ಬದ ಆಚರಣೆ ಕೇವಲ ಬೆಳೆದು ನಿಂತ ಪೈರಿಗೆ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸುವುದಕ್ಕಷ್ಟೇ ಸೀಮಿತವಾಗಬಾರದು. ಬದಲಿಗೆ ಇದು ಭೂತಾಯಿ, ಮಣ್ಣು ಮತ್ತು ಪರಿಸರ ಸಂರಕ್ಷಣೆಯ ಅಭಿಯಾನ ವಾಗಬೇಕೆಂದು ಆಶಿಸಿದರು.
ಪರೋಪಕಾರಂ ಕುಟುಂಬಕ್ಕೆ ಭೂಮಿ ಹುಣ್ಣಿಮೆ ಎಂದರೆ ಅದೊಂದು ದೊಡ್ಡ ಸಡಗರ ಹಾಗೂ ಸಂಭ್ರಮ. ಪ್ರತಿ ವಷ ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಕಳೆದ ಕ್ಷಣಗಳು ವರ್ಷಪೂರ್ತಿ ಪರೋಪಕಾರಂ ಕುಟುಂಬದ ಉತ್ಸಾಹ ಹಾಗೂ ಅಂತರಂಗಕ್ಕೆ ಬೇಕಾದ ಇಂಧನವನ್ನು ತುಂಬಿ ನಮ್ಮ ಶಕ್ತಿಯನ್ನು ದ್ವಿಗುಣ ಗೊಳಿಸುತ್ತದೆ. ಅಂತಹ ಅದ್ಭುತ ಶಕ್ತಿ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಯಲ್ಲಿದೆ ಎಂದರು.
ಪರೋಪಕಾರಂ ಕುಟುಂಬದ ಲೀಲಾಬಾಯಿ, ನಿವೃತ್ತ ಪ್ರಾಧ್ಯಾ ಪಕ ಡಾ. ವರದರಾಜ್, ಅನಿಲ್ ಹೆಗಡೆ, ಸಾರಥಿ ಶಿವಾನಂದ್, ಆಡಿಟರ್ ಕೃಷ್ಣಮೂರ್ತಿ, ರಾಘ ವೇಂದ್ರ , ದೀಪ ಶ್ರೀಧರ್, ಕೃಷಿ ಕರುಗಳಾದ ರಾಜಣ್ಣ ದುಮ್ಮಳ್ಳಿ, ಓಂ ಪ್ರಕಾಶ್, ಶ್ರೀಕಾಂತ್, ಪಾಂಡುರಂಗಪ್ಪ, ಕಿರಣ್ ಆರ್., ಕೀರ್ತಿ ಕಿರಣ್, ಶ್ರೀಕಾಂತ್ ಆರ್., ಶೈಲ ರಾಘವೇಂದ್ರ, ದೀಪು, ವಿಜಯ್ ಕಾರ್ತಿಕ್, ತೋಟದ ಮಾಲೀಕ ಗಣೇಶ್ ಎಂ. ಅಂಗಡಿ ಮತ್ತಿತರರು ಭಾಗವಹಿಸಿದ್ದರು.