ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಶಾಲೆ ಬಿಟ್ಟ ಮಕ್ಕಳ ಕಡೆ ಗಮನ ಹರಿಸಿ: ನ್ಯಾ.ಮಂಜುನಾಥ ನಾಯಕ್

Share Below Link

ಶಿವಮೊಗ್ಗ:ಮಕ್ಕಳ ವಿಚಾರ ದಲ್ಲಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಶಾಲೆ ಬಿಟ್ಟ ಮಕ್ಕಳ ಕಡೆ ಗಮನ ಹರಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕೆಂ ದು ಪ್ರಧಾನ ಜಿ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ತಿಳಿಸಿದರು.
ಜಿಡಳಿತ, ಜಿ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜ ನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾ ಶ್ರಯದಲ್ಲಿ ಇಂದು ಬೆಳಿಗ್ಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾ ಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕ ಪದ್ದತಿ ಒಂದು ಅಂತರಾಷ್ಟ್ರೀಯ ಪಿಡುಗು. ಬಡತನ, ಶಿಕ್ಷಣ ಸೌಲಭ್ಯದ ಕೊರತೆ, ಪೋಷಕರ ಅನಾರೋಗ್ಯ ಇನ್ನೂ ಹಲವಾರು ಕಾರಣಗಳಿಂದ ಬಾಲ ಕಾರ್ಮಿಕತೆ ಹೆಚ್ಚುತ್ತಿದೆ. ಕೆಲವೆಡೆ ಪ್ರೌಢಶಾಲೆಗಳು ಇಲ್ಲ, ಇನ್ನು ಕೆಲವೆಡೆ ಪೋಷಕರು ತಮ್ಮ ಅನಾರೋಗ್ಯ, ಬಡತನದಿಂದ ಮಕ್ಕಳನ್ನು ಕೆಲಸಕ್ಕೆ ಸೇರಿಸುವುದು, ಕೆಲ ಕೈಗಾರಿಕೆಗಳು ಆಮಿಷ ತೋರಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿ ರುವುದನ್ನು ಕಾಣುತ್ತಿದ್ದೇವೆ.

ದೇಶ ಸೇವೆ, ತಂತ್ರeನ ಸೇರಿ ದಂತೆ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ದಿಯನ್ನು ಕಾಣುತ್ತಿದೆ ಎನ್ನಲಾಗುತ್ತಿದೆ. ಆದರೆ ಬಾಲ ಕಾರ್ಮಿಕತೆ ಜರಿ ಇರುವೆಡೆ ಅಭಿವೃದ್ದಿ ಎನ್ನಲು ಸಾಧ್ಯವಿಲ್ಲ. ಇದನ್ನು ತೊಡೆದುಹಾಕಲು ಅನೇಕ ಕಾರ್ಯಕ್ರಮಗಳು, ಕಾಯ್ದೆಗಳನ್ನು ಜರಿಗೆ ತರಲಾಗಿದೆ. ಆದರೆ ಕೇವಲ ಕಾಯ್ದೆಯಿಂದ ಮಾತ್ರ ಈ ಪಿಡುಗಿನ ನಿವಾರಣೆ ಸಾಧ್ಯವಿಲ್ಲ. ನಮ್ಮ ಮನಸ್ಥಿತಿ ಬದಲಾಯಿಸಿ ಕೊಳ್ಳಬೇಕು ಎಂದರು.
ಶಾಲೆಯನ್ನು ಅರ್ಧಕ್ಕೆ ಬಿಟ್ಟ ವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಿದೆ. ಕೇವಲ ನಗರದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಗಮನಿಸಿದರೆ ಸಾಲದು, ಹಳ್ಳಿಗಳಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಕೃಷಿ ಕ್ಷೇತ್ರದಲ್ಲಿ ತೊಡಗಿಸಿರುವುದು ಆತಂಕಕಾರಿಯಾಗಿದ್ದು, ಇಂತಹ ಮಕ್ಕಳ ಕಡೆ ಗಮನ ಹರಿಸಿ ಅವರ ನ್ನು ಶಿಕ್ಷಣದಲ್ಲಿ ಮುಂದುವರೆಸ ಬೇಕು. ಉದ್ಯಮಿಗಳು, ಹೋಟೆ ಲ್ ಮಾಲೀಕರು, ಇತರೆ ಉzಮೆ ಮತ್ತು ಕೃಷಿ ಮಾಲೀಕರು ಮಕ್ಕಳ ನ್ನು ಕೆಲಸಕ್ಕೆ ನಿಯೋಜಿಸಬಾರದು ಎಂದರು.


ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎನ್. ಚಂದನ್ ಮಾತನಾಡಿ, ಮಕ್ಕಳು ದೇವರು ನೀಡಿದ ಒಂದು ವರ ಮತ್ತು ಮಕ್ಕಳೇ ದೇಶದ ಆಧಾರ ಸ್ತಂಭ. ಇಂತಹ ಮಕ್ಕಳೆಡೆ ನಮ್ಮೆ ಲ್ಲರಿಗೆ ಸಾಮಾಜಿಕ ಹೊಣೆಗಾರಿಕೆ ಇದೆ. ಕೇವಲ ನಮ್ಮ ಮಕ್ಕಳನ್ನು ನಾವು ಶಿಕ್ಷಿತರನ್ನಾಗಿ ಉತ್ತಮ ಸೌಲಭ್ಯ ನೀಡಿದರೆ ಸಾಲದು, ಸೌಲಭ್ಯ ವಂಚಿತ ಮಕ್ಕಳು ಕಂಡು ಬಂದಲ್ಲಿ ಅವರನ್ನು ಮುಖ್ಯವಾಹಿ ನಿಗೆ ತರಬೇಕು. ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜರಿಗೆ ತಂದಿದ್ದು ಅದರ ಉಪಯೋಗ ವನ್ನು ಎಲ್ಲರೂ ಪಡೆಯಬೇಕು. ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳಬೇಕು. ಕಾಯ್ದೆ ಪಾಲನೆ ಮನಸ್ಥಿತಿ ಎಲ್ಲರಲ್ಲಿ ಬರ ಬೇಕು ಎಂದರು.
ಜಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾ ಡಿ,ಯಾವುದೇ ಶಾಲೆ ಬಿಟ್ಟ ಮಕ್ಕಳು ಕಂಡುಬಂದಲ್ಲಿ ಮಕ್ಕಳು ಸೇರಿದಂತೆ ಯಾರೇ ಆಗಲಿ ಮಕ್ಕಳ ಸಹಾಯವಾಣಿ ೧೦೯೮ ಗೆ ಕರೆ ಮಾಡಿ ತಿಳಿಸಬೇಕು. ಆಗ ಮಕ್ಕಳನ್ನು ರಕ್ಷಿಸಿ ಮುಖ್ಯವಾಹಿನಿಗೆ ತರಲು ಸಹಕಾರಿಯಾಗುತ್ತದೆ. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಹಾಗೂ ಎಚ್ಚರಿಕೆ ಯಿಂದ ಮೊಬೈಲ್ ಬಳಸಬೇಕು. ಹೆಣ್ಣುಮಕ್ಕಳು ಗುಡ್ ಮತ್ತು ಬ್ಯಾಡ್ ಟಚ್ ಬಗ್ಗೆ ತಿಳಿದಿರಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೇ ಶಿಕ್ಷಣಕ್ಕೆ ಹೆಚಿನ್ಚ ಮಹತ್ವ ನೀಡಬೇಕೆಂದರು.

ಜಿ ವಕೀಲರ ಸಂಘದ ಅಧ್ಯಕ್ಷರಾದ ಬಿ.ಜಿ.ಶಿವಮೂರ್ತಿ ಮಾತನಾಡಿ, ಪೋಷಕರು ಮಕ್ಕಳ ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡ ಬೇಕು. ಹಾಗೂ ಮಕ್ಕಳ ವಿಚಾರ ದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಂಡು ಅವರಿಗೆ ಉತ್ತಮ ವಾತಾವರಣ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಸ್ತಬ್ದಚಿತ್ರ ವಾಹನ ಮತ್ತು ಕರಪತ್ರದ ಮೂಲ ಕ ಕಾನೂನು ಅರಿವು ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಹಾಗೂ ವೇದಿಕೆ ಕಾರ್ಯಕ್ರಮ ದಲ್ಲಿ ಬಾಲಕಾರ್ಮಿಕನಾಗಿ ದುಡಿ ಯುತ್ತಿದ್ದ ಬಾಲಕಕನ್ನು ರಕ್ಷಿಸಿ ಮುಖ್ಯ ವಾಹಿನಿಗೆ ತಂದು ಪ್ರಸ್ತುತ ೯ ನೇ ತರಗತಿಯಲ್ಲಿ ಓದುತ್ತಿರುವ ಹೊಸಳ್ಳಿಯ ವಿನಯ್ ನನ್ನು ಅಭಿನಂದಿಸಲಾಯಿತು. ಎಲ್ಲರಿಗೂ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕುರಿತು ಪ್ರತಿe ವಿಧಿ ಬೋಧಿಸಲಾಯಿತು.
ಜಿ ಕಾರ್ಮಿಕ ಅಧಿಕಾರಿ ಸುಮಾ ಹೆಚ್ ಎಸ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಕಾರ್ಮಿಕ ನಿರೀಕ್ಷಕ ಭೀಮೇಶ್ ಪಿ, ಬಿಇಓ ನಾಗರಾಜ್, ಇತರೆ ಇಲಾಖೆ ಅಧಿಕಾರಿಗಳು, ಬಾಲ ಕಾರ್ಮಿಕ ಯೋ ಜನಾ ಸೊಸೈಟಿ ಪಿಡಿ ರಘುರಾಂ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.