ಕಾರ್ಯಕರ್ತರಲ್ಲಿ ಪಕ್ಷನಿಷ್ಠೆ ಸದಾ ಜಾಗೃತವಾಗಿರಬೇಕು…
ಶಿವಮೊಗ್ಗ : ಕಾರ್ಯಕರ್ತರಲ್ಲಿ ಸದಾ ಪಕ್ಷನಿಷ್ಠೆ ಇರಬೇಕು. ಪಕ್ಷದ ಒಟ್ಟಾರೆ ವ್ಯವಸ್ಥೆಯಲ್ಲಿ ಸದಾ ಚಟುವಟಿಕೆ ಯಿಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿಎಸ್ ಅರುಣ್ ಹೇಳಿzರೆ.
ಜಿ ಬಿಜೆಪಿ ಕಚೇರಿಯ ಲ್ಲಿಂದು ಉಕ್ಕಿನ ಮನುಷ್ಯ ದೇಶದ ಏಕತೆಯ ರೂವಾರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ನಿಮಿತ್ತ ಏಕತಾ ನಡಿಗೆ ಜಿ ಕಾರ್ಯಗಾರ ಸರ್ದಾರ್ ೧೫೦ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಮನೆಯಲ್ಲಿ ರಾಜ ಕೀಯ, ಸಿನಿಮಾ, ಕ್ರಿಕೆಟ್ ಈ ಮೂರು ವಿಚಾರಗಳ ಬಗ್ಗೆ ಆಸಕ್ತಿ ಇರುತ್ತದೆ. ಈ ಬಗ್ಗೆ ಮಾತನಾ ಡುತ್ತಿರುತ್ತಾರೆ ಅದರಲ್ಲೂ ರಾಜಕೀ ಯದ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಸಂಘಟನೆ ಗಟ್ಟಿಯಾಗಬೇಕಾದರೆ ಅಽಕಾರ ಬೇಕು. ಅಧಿಕಾರ ಇದ್ದರೆ ದೇಶದ ಅಭಿವೃದ್ಧಿ ಮಾಡಿ ಬದಲಾ ವಣೆ ತರಲು ಸಾಧ್ಯ. ಅಧಿಕಾರ ವೊಂದೇ ಅಲ್ಲ ನಿರಂತರ ವಾಗಿ ಕಾರ್‍ಯ ಕರ್ತರು ಪಕ್ಷದ ಚಟುವಟಿಕೆಯಲ್ಲಿ ರಬೇಕು ಎಂದು ಕರೆ ನೀಡಿದರು.

ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಅನೇಕ ಬದಲಾ ವಣೆಗಳಾಗಲಿದೆ. ಈ ಸರ್ಕಾರದ ನಡೆಗಳನ್ನು ಜನ ಗಮನಿಸುತ್ತಿದ್ದು ಸರ್ಕಾರದ ಬಗ್ಗೆ ಅಸಹನೆ ತೋರಿಸುತ್ತಿzರೆ.
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಹೋರಾಟ ಮಾಡಿದ ತ್ಯಾಗ ಮಾಡಿದ ದಾರ್ಶನಿಕರ ಬಗ್ಗೆ ಯುವಕರಲ್ಲಿ ಅರಿವು ಮೂಡಿಸ ಬೇಕಾದ ಕರ್ತವ್ಯವಿದೆ. ಅಂತಹ ಮಹಾನ್ ವ್ಯಕ್ತಿತ್ವಗಳ ಬಗ್ಗೆ ದೇಶ ಕಟ್ಟಿದವರ ಬಗ್ಗೆ ಗೌರವ ಸೂಚಿಸ ಬೇಕು ಅವರಿಗಾಗಿ ಕನಿಷ್ಠ ಒಂದು ಗಂಟೆಯನ್ನಾದರೂ ಶಾಲಾ- ಕಾಲೇ ಜುಗಳಲ್ಲಿ ಅವರ ಜನ್ಮದಿನದಂದು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು. ಕಾಟಾಚಾರಕ್ಕೆ ದಾರ್ಶನಿಕರ ಜಯಂತಿಗಳು ಆಗಬಾರದು ಎಂದರು.

ಉಕ್ಕಿನ ಮನುಷ್ಯ ದೇಶದ ಮಾಜಿ ಗೃಹ ಸಚಿವ ಸರ್ದಾರ್ ಪಟೇಲ್ ಯುವಕರಿಗೆ ರೋಲ್ ಮಾಡೆಲ್ ಆಗಬೇಕು. ಸರ್ದಾರ್ ಪಟೇಲ್ ಅವರನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಭಾರತ ನಿರ್ಮಾಣ ಅಂದರೆ ವ್ಯಕ್ತಿ ನಿರ್ಮಾಣ ಮೊದಲು ಆಗಬೇಕು ಅದಕ್ಕಾಗಿ ಸರ್ದಾರ್ ಅವರ ಬಗ್ಗೆ ತಿಳಿಯಲು ಏಕತಾ ನಡಿಗೆ, ಪರಿಸರ ಜಾಗೃತಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆ, ರೀಲ್ ಮೂಲಕ ಏಕತಾ ಪ್ರತಿಮೆಯ ಬಗ್ಗೆ ಮಾಹಿತಿ ನೀಡುವ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು ಕಾರ್ಯಕರ್ತರ ಮತ್ತು ನಾಯಕರ ಸಮಿತಿಯನ್ನು ರಚನೆ ಮಾಡಲಾಗಿದ್ದು ಈ ಅಭಿಯಾನ ದಲ್ಲಿ ಪಾಲ್ಗೊಳ್ಳಲು ಅವರು ಕರೆ ನೀಡಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಧ್ಯಕ್ಷ ಜಗದೀಶ್ ಪ್ರಮುಖರಾದ ಮಾಲತೇಶ್, ಅಭಿಯಾನದ ಸಂಚಾಲಕ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪದ್ಮಿನಿ ರಾವ್, ಮಹಿಳಾ ಮೋರ್ಚಾ ಜಿಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಪದ್ಮಿನಿ ರಾವ್, ಕುಪೇಂದ್ರ, ಅಣ್ಣಪ್ಪ, ಮಂಗಳ ನಾಗೇಂದ್ರ, ಸುಮಾ ಭೂಪಾಳಂ, ಸಂತೋಷ್, ಸತೀಶ್ ರಾಮಿನಕೊಪ್ಪ ಮೊದಲಾದವರಿ ದ್ದರು.

