ಮಠ-ಮಾನ್ಯಗಳ ಧರ್ಮಸಭೆಯಲ್ಲಿ ಪೋಷಕರು ತಮ್ಮ ಮಕ್ಕಳ ಸಹಿತ ಭಾಗಿಯಾಗುವುದರ ಮೂಲಕ ಕ್ರೈಗಳನ್ನು ಕಡಿಮೆ ಮಾಡಬಹುದು…
ಹೊನ್ನಾಳಿ : ಸಂಸ್ಕಾರದ ಕೊರತೆಯಿಂದ ಸಮಾಜ ದಲ್ಲಿ ಅಪರಾಧಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಮಠ-ಮಾನ್ಯಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳನ್ನು ಕರೆದುಕೊಂಡು ಬರುವ ಮೂಲಕ ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಹೊನ್ನಾಳಿ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ೬ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯನ್ನುzಶಿಸಿ ಮಾತನಾಡಿದ ಅವರು, ಈ ಹಿಂದೆ ಸಮಾಜಕ್ಕೆ, ಪೋಷಕರಿಗೆ ಹೆದರಿ ಅಪರಾಧಗಳನ್ನು ಮಾಡದೇ, ದುಷ್ಚಟಗಳಿಗೆ ದಾಸರಾಗದಂತೆ ಜೀವನ ನಿರ್ವಹಣೆ ಮಾಡುತ್ತಿ ದ್ದರು, ಆದರೆ ಇಂದು ರಾಜರೋಷವಾಗಿ ಮದ್ಯಪಾನ, ಬೆಟ್ಟಿಂಗ್ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೂ ಯಾವುದೇ ಅಪರಾಧಿ ಮನೋಭಾವವಿಲ್ಲದೇ ಅಡ್ಡಾಡುವುದು ಕಂಡುಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಲಿಯುಗವೆಂದು ಕರೆಯಲ್ಪಡುವ ಈ ಯುಗದಲ್ಲಿ ದಿನ ನಿತ್ಯ ಪತ್ರಿಕೆ, ನ್ಯೂಸ್ ಚಾನೆಲ್ ಗಳಲ್ಲಿ ಎಂದರಲ್ಲಿ ಕಳ್ಳತನ, ದರೋಡೆ, ಮೋಸ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ-ಅತ್ಯಾಚಾರ, ಆನ್ ಲೈನ್ ಮತ್ತು ಸೈಬರ್ ಕ್ರೈಂಗಳನ್ನು ಎಂದರಲ್ಲಿ ನೋಡುವ ಮೂಲಕ ಇದು ಕ್ರೈಂ-ಯುಗವೆಂದು ಕರೆಯ ಬಹುದಾಗಿದೆ ಎಂದು ಹೇಳಲು ಬೇಸರವಾಗುತ್ತದೆ ಎಂದರು.
ಇತ್ತೀಚೆಗೆ ಸೈಬರ್ ಕ್ರೈಂ ವಿಶ್ವದಾದ್ಯಂತ ವ್ಯಾಪಿಸಿದ್ದು, ಕಳ್ಳತನ, ದರೋಡೆ ಇಂತಹ ಪ್ರಕರಣಗಳನ್ನು ಬಹು ಬೇಗನೇ ಪತ್ತೆ ಹಚ್ಚಲು ಸಾಧ್ಯವಿದ್ದು, ಆದರೆ ಆನ್ ಲೈನ್ ಕ್ರೈಂಗಳನ್ನು ಪತ್ತೆ ಹಚ್ಚುವುದು ತುಂಬಾ ಕಷ್ಟವಿದ್ದು, ಸಾರ್ವಜನಿಕರು ಜಗರೂಕತೆಯಿಂದಿರಬೇಕೆಂದು ಸಲಹೆ ನೀಡಿದರು.
ಬ್ಯಾಂಕ್ ಖಾತೆಗಳಲ್ಲಿ ಹಣ ವಿದ್ದರೂ ಅದು ಸುರಕ್ಷಿತವಾಗಿರು ವುದಿಲ್ಲ, ಯಾವುದೋ ಆಮಿಷ ವೊಡ್ಡಿ ವಾಟ್ಸಾಪ್ ಸಂದೇಶಗಳ ಮೂಲಕ ಅಥವಾ ಮೊಬೈಲ್ ನಂಬರ್ಗಳಿಗೆ ಸಂಪರ್ಕಿಸಿ ಒಟಿಪಿ ಕೇಳಿದರೆ, ಯಾವುದೇ ಕಾರಣಕ್ಕೂ ಕೊಡದೇ ನಿರ್ಲಕ್ಷ್ಯ ತೋರ ಬೆಕೆಂದರು. ವಿಡಿಯೋ ಕಾಲ್ಗಳ ಮೂಲಕ ಡಿಜಿಟಲ್ ಆರೆಸ್ಟ್ ಹಾಗೂ ಎಪಿಕೆ ಫೈಲ್ ಮೂಲಕ ಉಡುಗೊರೆ ಬಂದಿದೆ ಎಂದು ಮೋಸದ ಜಲವನ್ನು ಬೀಸುತ್ತಾರೆ ಎಂದು ಎಚ್ಚರಿಸಿದರು.

ಅಪ್ರಾಪ್ತ ಯುವಕ- ಯುವತಿಯರು ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ ಮನೆ ಬಿಟ್ಟು ಹೋಗುತ್ತಿರುವ ಪ್ರಕರಣಗಳು ದಿನೇ-ದಿನೇ ಹೆಚ್ಚಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳು ಓದುತ್ತಿರುವ ಶಾಲಾ-ಕಾಲೇಜು ಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಚಲನವಲನದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಕಿವಿ ಮಾತು ಹೇಳಿದರು.
ಪೊಲೀಸ್ ಎಂದರೆ ಭಯ ಬೇಡ ನೊಂದವರು ಮಾತ್ರವೇ ಪೊಲೀಸ್ ಠಾಣೆಗೆ ಬರುತ್ತಾರೆ, ಈ ನಿಟ್ಟಿನಲ್ಲಿ ಸಾರ್ವಜನಿಕರ ಕುಂದು -ಕೊರತೆಗಳನ್ನು ಬಗೆಹರಿಸಲೆಂದೇ ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದ ಯಾವುದೇ ಮೂಲೆ ಯಲ್ಲಿದ್ದರೂ ಸಾರ್ವಜನಿಕರು ಸಮಸ್ಯೆಗಳಿಗೆ ಸಿಲುಕಿzಗ ಮರೆಯದೇ ೧೧೨ ನಂಬರ್ಗೆ ಸಂಪರ್ಕಿಸಿದರೆ ನಿಮಗೆ ಆಯಾ ಭಾಗದ ಪೊಲೀಸರಿಂದ ಸೂಕ್ತ ನೆರವು ಸಿಗುತ್ತದೆ ಎಂದು ಮಾಹಿತಿ ನೀಡಿದರು.

ವಿದ್ಯಾಶ್ರೀ ಹಿರೇಮಠ ಇವರು ನವರಾತ್ರಿ ಹಬ್ಬದ ಆಚರಣೆಯ ಬಗ್ಗೆ ಉಪನ್ಯಾಸ ನೀಡಿದರು.
ರಟ್ಟಿಹಳ್ಳಿ ಕಬ್ಬಣ ಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಸಾನಿಧ್ಯ ವಹಿಸಿದ್ದರು.
ಎಸ್.ಜೆ.ವಿ.ಪಿ.ಬಿಇಡಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಿಕ್ಷಕಿ ಗೀತಾವೀರಯ್ಯ ಸ್ವಾಗತಿಸಿ, ಎಸ್.ಜೆ.ವಿ.ಪಿ.ಬಿಇಡಿ ಕಾಲೇಜಿನ ಉಪನ್ಯಾಸಕ ಎಸ್.ಎಂ.ಪ್ರಸನ್ನ ನಿರೂಪಿಸಿ-ವಂದಿಸಿದರು.
ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರು ಮಠ, ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಮಠದ ಸೇವಾಕರ್ತರಾದ ಕಡದಕಟ್ಟೆ ದಾನಪ್ಪ, ಕೋರಿ ಯೋಗೀಶ್ ಕುಳಗಟ್ಟೆ, ಜಿ.ಎಚ್.ರಾಜು, ಎಚ್.ಸಿ, ಮೃತ್ಯುಂಜಯ ಪಾಟೀಲ್, ಎಂ.ಪಿ.ಎಂ. ವಿಜಯಾನಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
