ಜಿಲ್ಲಾ ಸುದ್ದಿತಾಜಾ ಸುದ್ದಿ

ಪೋಷಕ ಮಾರ್ಗದರ್ಶನ; ಗುರುಗಳ ಪ್ರೋತ್ಸಾಹದಿಂದ ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯವಾಯಿತು: ಶಿವಾನಿ

Share Below Link

ಶಿವಮೊಗ್ಗ: ಪೋಷಕರ ಮಾರ್ಗದರ್ಶನ, ಇಚ್ಛಾಶಕ್ತಿ ಹಾಗೂ ಗುರುಗಳ ಪ್ರೋತ್ಸಾಹದಿಂದ ವಿeನ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯ ವಾಯಿತು ಎಂದು ಚಂದ್ರಯಾನ ಯಶಸ್ವಿ ಉಡಾವಣೆ ಕಾರ್ಯದ, ಇಸ್ರೋ ಸಂಸ್ಥೆಯ ವಿeನಿ ಪುಟ್ಟಮ್ಮ ಶಿವಾನಿ ಹೇಳಿದರು.
ನಗರದ ಮಕ್ಕಳ ವಿದ್ಯಾಸಂಸ್ಥೆ ಮತ್ತು ತರುಣೋದಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತದ ಇಸ್ರೋ ಸಂಸ್ಥೆಯಲ್ಲಿ ಇಪ್ಪತ್ತು ಸಾವಿರ ಉದ್ಯೋಗಿಗಳು ಇದ್ದು, ಎ ವಿಷಯಗಳ ವಿದ್ಯಾಭ್ಯಾಸ ಮಾಡಿದ ವರು ಇzರೆ. ಚಂದ್ರಯಾನ ಯಶಸ್ಸಿನಲ್ಲಿ ಎಲ್ಲರ ಸಹಯೋಗ ಶ್ರಮ ಇದೆ ಎಂದು ತಿಳಿಸಿದರು.
ನನ್ನ ಪ್ರಾಥಮಿಕ ಶಾಲಾ ಸ್ನೇಹಿತರು, ಯೂತ್ ಹಾಸ್ಟೇಲ್ಸ್ ಅಸೋಸಿಯೇಷನ್ ತರುಣೋದಯ ಘಟಕದ ಸನ್ಮಾನ ವನ್ನು ಸಂತೋಷದಿಂದ ಸ್ವೀಕರಿಸಿ ದ್ದೇನೆ. ನನ್ನ ಸ್ನೇಹಿತರನ್ನು ಕಂಡು ಬಹಳ ಸಂತೋಷವಾಗಿದೆ ಎಂದರು.
ಕುಟುಂಬದ ಪ್ರತಿಯೊಬ್ಬರು ನನ್ನ ಏಳಿಗೆಯ ಬೆನ್ನೆಲುಬಾಗಿ ನಿಂತಿ ದ್ದರು. ಯಾವಾಗಲು ನನ್ನ ಏಳಿಗೆಗೆ ಸಹಕಾರ ಕೊಡುತ್ತಿದ್ದರು. ಇದರಿಂದ ಉನ್ನತ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು. ನನ್ನ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಿಲ್ಲ ಅಂದು ಕೊಂಡಿದ್ದೇನೆ. ನನ್ನ ಕೆಲಸದ ಒತ್ತಡ ಅಂತಹದ್ದು. ನನ್ನ ಇಬ್ಬರು ಮಕ್ಕಳು ಚನ್ನಾಗಿ ಓದಿಕೊಂಡು ಉತ್ತಮ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.
ಮಕ್ಕಳ ವಿದ್ಯಾ ಸಂಸ್ಥೆ ೧೯೮೨ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿ ಮಿತ್ರರು ಹಾಗೂ ಯೂತ್ ಹಾಸ್ಟೆಲ್ ತರುಣೋದಯ ಘಟಕದ ಪದಾಧಿಕಾರಿಗಳ ವತಿ ಯಿಂದ ಇಸ್ರೋ ಸಂಸ್ಥೆಯ ವಿeನಿ, ಕೋಣಂದೂರು ಲಿಂಗಪ್ಪ ಪುತ್ರಿ ಪುಟ್ಟಮ್ಮ ಶಿವಾನಿ ಅವರಿಗೆ ಸನ್ಮಾನಿ ಸಲಾಯಿತು. ಸಂವಾದ ಕಾರ್ಯ ಕ್ರಮ ಯಶಸ್ವಿಯಾಗಿ ನಡೆಯಿತು.
ಗಣೇಶ್ ಅಂಗಡಿ ಸ್ವಾಗತಿಸಿ ದರು. ರಾಘವೇಂದ್ರ ನಿರೂಪಿಸಿ ದರು. ಕೋಣಂದೂರು ಲಿಂಗಪ್ಪ, ಶಾರ್ದೂಲಾ, ವಿನಾಯಕ, ಡಾ. ಜಗದೀಶ್, ವೆಂಕಟೇಶ್, ವಿಶ್ವನಾಥ್, ಸುರೇಶ್, ಸುಮಂಗಲಾ, ಜಯಂತಿ, ಕವಿತಾ, ಹಳೆಯ ವಿದ್ಯಾರ್ಥಿಗಳು ಕುಟುಂಬದವರು, ಯೂತ್ ಹಾಸ್ಟೆಲ್ಸ್ ಚೇರ್ಮನ್ ವಾಗೇಶ್, ಸುರೇಶ್ ಕುಮಾರ್, ಡಾ. ಕೌಸ್ತುಭ, ಡಾ. ಶೇಖರ್ ಗೌಳೇರ್, ದಿಲೀಪ್ ನಾಡಿಗ್, ನಾಗರಾಜ್, ಲಕ್ಷ್ಮೀ, ರವೀಂದ್ರ, ಜಿ. ವಿಜಯ ಕುಮಾರ್ ಇನ್ನಿತರರಿದ್ದರು.