ಶಿಕ್ಷಕ ಕಬ್ಬೂರಗೆ ಪಂಚತಂತ್ರ ದುರ್ಗಸಿಂಹ ರಾಷ್ಟ್ರೀಯ ಪ್ರಶಸ್ತಿ…
ಧಾರವಾಡ: ಅಕ್ಷರ ದೀಪ ಫೌಂಡೇಶನಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ -ಬೆಳಗಾವಿ ಇವರ ಸಹಯೋಗದಲ್ಲಿ ಜಿ ಕನ್ನಡ ಸಾಹಿತ್ಯ ಪರಿಷತ್ತು ಧಾರವಾಡದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಸವದತ್ತಿ ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ಸಹಶಿಕ್ಷಕ ಎನ್.ಎನ್.ಕಬ್ಬೂರ ಇವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ೨೦೨೩ನೇ ಸಾಲಿನ ಪಂಚತಂತ್ರ ದುರ್ಗಸಿಂಹ ರಾಷ್ಟ್ರೀಯ ಪ್ರಶಸ್ತ್ತಿ ನೀಡಿ ಗೌರವಿಸಲಾಯಿತು.
ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು, ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹಾಗೂ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಧ್ಯಕ್ಷ ಮಹಾಂತೇಶ ತಾಂವಶಿ ಕಾರ್ಯಕ್ರಮ ಉದ್ಘಾಟಿಸಿದರು.
ಸಾಹಿತಿಗಳು ಮತ್ತು ಕನ್ನಡಪರ ಚಿಂತಕರಾದ ನಾಗಲೇಖರು ಅಧ್ಯಕ್ಷತೆ ವಹಿಸಿದ್ದರು, ಅಕ್ಷರ ದೀಪ ಫೌಂಡೇಶನಿನ ಸಂಸ್ಥಾಪಕ ಪ್ರವೀಣ ಕುಮಾರ ಕುನ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚನಾ ಪಾಟೀಲ ಪ್ರಾರ್ಥಿಸಿ, ರೋಹಿಣಿ ಮಿರ್ಜೆ ಸ್ವಾಗತಿಸಿದರು, ರಾಜೇಶ್ವರಿ ಮಗದುಮ್ಮ ನಿರೂಪಿಸಿದರು.