ಜಿಲ್ಲಾ ಸುದ್ದಿತಾಜಾ ಸುದ್ದಿದೇಶಲೇಖನಗಳುವಿದೇಶಶಿಕ್ಷಣ

ಓವರ್ಸೀಸ್ ಟ್ರಾವೆಲರ್ ಪುಸ್ತಕ ಲೋಕಾರ್ಪಣೆ….

Share Below Link

ಬೆಂಗಳೂರು: ಇಲ್ಲಿನ ವಕೀಲರ ಸಂಘದ ಆಶ್ರಯದಲ್ಲಿ ವಕೀಲರ ದಿನಾಚರಣೆಯಂದು ಹೈಕೋರ್ಟ್‌ನ ಹಿರಿಯ ವಕೀಲರಾದ ತಳವನೂರು ಶಂಕರಪ್ಪ ಅವರು ಬರೆದ ಪ್ರವಾಸ ಕಥನ ಓವರ್ಸೀಸ್ ಟ್ರಾವೆಲರ್ ಎಂಬ ಕೃತಿಯನ್ನು ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ, ಹೈಕೋರ್ಟ್ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಹಾಗೂ ಹಿರಿಯ ವಕೀಲರಾದ ಟಿ.ಎಂ. ನಾನಯ್ಯ ಅವರು ಜಂಟಿಯಾಗಿ ಬಿಡುಗಡೆ ಮಾಡಿದರು.


ನಂತರ ಮಾತನಾಡಿದ ಉಪಲೋಕಾಯುಕ್ತ ನ್ಯಾ| ಬಿ.ವೀರಪ್ಪ, ತುಳುವನೂರು ಶಂಕರಪ್ಪ ಅವರನ್ನು ೧೯೯೫ ರಿಂದಲೂ ನಾನು ಹತ್ತಿರದಿಂದ ನೋಡಿzನೆ. ಅವರು ಚಿಕ್ಕಬಳ್ಳಾಪುರ ಜಿ, ಚಿಂತಾಮಣಿ ತಾಲೂಕಿನ ಅತ್ಯಂತ ಬಡ ಕುಟುಂಬ ದಿಂದ ಬಂದವರು. ಅವರು ಸ್ವಂತ ಪರಿಶ್ರಮದಿಂದ ವಿಶ್ವದ ೨೭ ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಪ್ರವಾಸಿ ಸ್ಥಳಗಳ ಪರಿಚಯ, ಆ ದೇಶಗಳ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಕುರಿತು ಪರಿಚಯ ಮಾಡಿಕೊಡುವ ಜೊತೆಗೆ ವಿವಿಧ ದೇಶಗಳ ಕಾನೂನು ವ್ಯವಸ್ಥೆ, ಜಾತಿ ವ್ಯವಸ್ಥೆಗಳ ಬಗ್ಗೆ ವಿಭಿನ್ನ ಸಂಸ್ಕೃತಿಗಳು, ಭೌಗೋಳಿಕ ಸ್ಥಿತಿಗತಿಗಳು, ಬೇರೆ ಬೇರೆ ದೇಶಗಳ ಭ್ರಷ್ಟಾಚಾರ, ಸಂಸ್ಕಾರ- ಸಂಸ್ಕೃತಿಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅವುಗಳನ್ನು ಎಳೆಎಳೆಯಾಗಿ ಅಕ್ಷರರೂಪಕ್ಕೆ ಇಳಿಸಿದ್ದಾರೆ ಎಂದು ಪ್ರಶಂಶಿಸಿದರಲ್ಲದೇ, ಶಂಕರಪ್ಪ ಅವರು ರಚಿಸಿರುವ ಪ್ರವಾಸ ಕಥನವು ಪ್ರವಾಸಿಗರಿಗೆ ಒಂದು ಮಾರ್ಗದರ್ಶಿ ಪುಸ್ತಕವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ತುಳುವ ನೂರು ಶಂಕರಪ್ಪ ಅವರು ಪ್ರಪಂಚ ಸುತ್ತಿ ಬರಲಿ, ಅವರು ಬರೆದ ಪುಸ್ತಕದಲ್ಲಿ ನಾವು ಪ್ರಪಂಚವನ್ನು ನೋಡೋಣ. ಈ ದೇಶದ ದೊಡ್ಡ ಪಿಡುಗು ಅಂದರೆ ಭ್ರಷ್ಟಾಚಾರ. ಇತ್ತೀಚಿನ ದಿನಗಳಲ್ಲಿ ಭ್ರಷ್ಟ್ರಾಚಾರ ಎಲ್ಲೆಡೆ ವ್ಯಾಪಿಸಿದ್ದು, ಯಾವುದೇ ಇಲಾಖೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ಶೇ.೧೦ರಷ್ಟು ಮಾತ್ರ ಒಳ್ಳೆಯ ಅಧಿಕಾರಿಗಳು ಸಿಗುತ್ತಾರೆ ಎಂದು ವಿಷಾದಿಸಿದರು.
ನಮ್ಮ ದೇಶ ಮತ್ತು ರಾಜ್ಯದಲ್ಲಿ ಹೇಗೆ ಬ್ರಷ್ಟಾಚಾರವನ್ನು ತಡೆಯಬೇಕು ಎಂದು ಚಿಂತಿಸುವ ಸಮಯ ಇದೀಗ ಬಂದಿದೆ. ನಾವೀಗ ಕಣ್ಮುಚ್ಚಿ ಕುಳಿತರೆ ಮುಂದೊಂದು ದಿನ ನಾವು ನಮ್ಮ ಮಕ್ಕಳ ಭವಿಷ್ಯವನ್ನೇ ಹಾಳು ಮಾಡಿದಂತಾಗುತ್ತದೆ ಎಂದರು.
ವಿಶ್ವದ ೧೮೦ ದೇಶಗಳ ಪೈಕಿ ಭಾರತಕ್ಕೆ ಭ್ರಷ್ಟಾಚಾರದಲ್ಲಿ ೧೦೬ನೇ ಸ್ಥಾನ ದೊರೆತಿದೆ. ಅದೇ ರೀತಿ ಕರ್ನಾಟಕಕ್ಕೆ ೫ನೇ ಸ್ಥಾನ ದೊರೆತಿದೆ. ಕೇರಳ ಶೇ.೧೦ರಷ್ಟು ಭ್ರಷ್ಟಾಚಾರದಲ್ಲಿ ಇದ್ದರೆ, ಕರ್ನಾಟಕ ಶೇ.೬೫ರಷ್ಟು ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅಂದರೆ ನಾವು ಅತ್ಯಂತ ಅಪಾಯಕರ ಸ್ಥಾನದಲ್ಲಿzವೆ. ಇಂದು ಹೇಗಾದರೂ ಇರು ಎದರೂ ಇರು ಭ್ರಷ್ಟಾಚಾರಿ ಯಾಗಿರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಶಾಧಿಸಿದರು.
ನಿಮ್ಮ ಬರವಣಿಗೆಯಲ್ಲಿ ಭ್ರಷ್ಟಾಚಾರದ ಬಗ್ಗೆಯೂ ನೀವು ಬೆಳಕು ಚೆಲ್ಲಿರುವುದು ಗಮನಿಸಬೇಕಾದ ವಿಷಯವಾಗಿದೆ. ಭ್ರಷ್ಟಾಚಾರಿಗಳ ಹೆಡೆಮುರಿಕಟ್ಟುವ ಕಾಲ ಬಂದಿದೆ. ಭ್ರಷ್ಟರ ಸಂಹಾರ ಮಾಡಲು ನಿಮ್ಮ ಸಹಕಾರವೂ ನಮಗೆ ಬೇಕು. ನಮ್ಮೊಂದಿಗೆ ನೀವೆಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು.
ಜಸ್ಟಿಸ್ ಅನು ಶಿವರಾಮನ್ ಅವರು ಮಾತನಾಡಿ, ತುಳುವನೂರು ಶಂಕರಪ್ಪ ಅವರ ಕೃತಿಯನ್ನು ಓದಿ ನಾನು ಪುಳಕಿತ ಗೊಂಡಿzನೆ. ಈ ಪುಸ್ತಕದಲ್ಲಿ ಬೇರೆ ಬೇರೆ ದೇಶಗಳ ಸ್ಥಳಗಳಲ್ಲಿ ಸಂಸ್ಕೃತಿಗಳ ಅನಾವರಣವಾಗಿದೆ. ಕೃತಿಯನ್ನು ಓದುತ್ತಿರುವಂತೆ ನಾವೇ ಅಲ್ಲಿ ಪ್ರಯಾಣಿಸುತ್ತಿzನೆ ಎಂಬ ಅನುಭವವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ವಕೀಲರಿಗೆ ನ್ಯಾಯಾಧೀಶರಿಗೆ ಪ್ರವಾಸ ಮಾಡಲು ಸಮಯ ವಿರುವುದಿಲ್ಲ. ಶಂಕರಪ್ಪ ಅವರು ತಮ್ಮ ಒತ್ತಡದ ಕೆಲಸದ ನಡುವೆಯೂ ಒಂದಷ್ಟು ಬಿಡುವು ಮಾಡಿಕೊಂಡು ಹತ್ತು ಹಲವು ದೇಶಗಳಿಗೆ ಪ್ರವಾಸ ಮಾಡಿ ಪ್ರವಾಸ ಕಥನ ರಚಿಸಿರುವುದು ಸಾಮಾನ್ಯದ ಮಾತಲ್ಲ ಎಂದರು.
ಹಿರಿಯ ವಕೀಲ ನಾಣಯ್ಯ ಅವರು ಮಾತನಾಡಿ, ತುಳುವನೂರು ಶಂಕರಪ್ಪ ಅವರು ನನ್ನ ಜೊತೆ ಸುಮಾರು ೨೧ ವರ್ಷಗಳಿಂದ ಇದ್ದಾರೆ. ಅವರು ೨೭ ದೇಶಗಳನ್ನು ಸುತ್ತಿಕೊಂಡು ಬಂದಿzರೆ. ವೃತ್ತಿಯಲ್ಲಿಯೂ ಕೂಡ ಅವರು ನಿಪುಣರು. ಯಾವುದೇ ಪ್ರಕರಣಗಳನ್ನು ಕ್ಷಣಮಾತ್ರದಲ್ಲಿ ಅಧ್ಯಯನ ಮಾಡಿ ಅದ್ಭುತವಾಗಿ ವಾದ ಮಂಡಿಸುತ್ತಿ ದ್ದರು. ಅವರ ಮಾರ್ಗದರ್ಶನ ಕಿರಿಯ ವಕೀಲರಿಗೆ ದೊರೆಯಲಿ ಎಂದು ಹಾರೈಸಿದರು.
ಹೈಕೋರ್ಟ್ ವಕೀಲರೂ ಆದ ಕೃತಿ ರಚನೆಕಾರ ತುಳುವನೂರು ಶಂಕರಪ್ಪ ಅವರು ಮಾತನಾಡಿ, ತಾವು ಕಳೆದ ೨೧ ವರ್ಷಗಳಿಂದ ಪರ್ಯಟನೆ ಮಾಡಿರುವ ೨೭ ದೇಶಗಳ ಕುರಿತ ಪ್ರವಾಸ ಕಥನ ಇದಾಗಿದ್ದು, ಆಯಾ ದೇಶಗಳ ಕಾನೂನು, ರಾಜಕೀಯ, ಸಂಸ್ಕೃತಿಯ ಅನಾವರಣ ಈ ಓವರ್ಸೀಸ್ ಟ್ರಾವೆಲರ್ ಆಗಿದೆ ಎಂದರು.
ಕೇವಲ ದೇಶ ಸುತ್ತುವುದು ತಮ್ಮ ಉದ್ದೇಶವಲ್ಲ. ಪ್ರವಾಸಿಗರಿಗೆ ವಿವಿಧ ದೇಶಗಳಲ್ಲಿನ ಸ್ಥಳಗಳ ಪರಿಚಯ ಮಾಡಿಸುವ ಜೊತೆಗೆ, ಪ್ರತಿಯೊಬ್ಬರಿಗೂ ಅಲ್ಲಿನ ನ್ಯಾಯಾಂಗ ವ್ಯವಸ್ಥೆ, ಸಂಸ್ಕಾರ- ಸಂಸ್ಕೃತಿ ಪರಿಚಯಿಸುವುದು ತಮ್ಮ ಉದ್ದೇಶವಾಗಿದೆ ಎಂದರಲ್ಲದೇ, ತಮ್ಮ ಪುಸ್ತಕದಲ್ಲಿ ನೂರಾರು ಐತಿಹಾಸಿಕ ಘಟನೆಗಳನ್ನು ಪ್ರಸ್ತಾಪ ಮಾಡಿzನೆ, ಅವರೊಂದಿಗೆ ನಾನು ಸ್ನೇಹಿತರೊಂದಿಗೆ ಕಳೆದ ಸಮಯವನ್ನು ಸಹ ಪ್ರಸ್ತಾಪ ಮಾಡಿzನೆ. ಈ ಪುಸ್ತಕವನ್ನು ಓದುತ್ತಿದ್ದರೆ ನಿಮಗೆ ಸಹಜವಾಗಿ ನೀವೇ ಆದೇಶದಲ್ಲಿ ಸಂಚಾರ ಮಾಡುತ್ತಿದ್ದೀರಿ ಎಂಬ ಅನುಭವ ಬರುತ್ತದೆ. ಪ್ರವಾಸಕ್ಕೆ ಹೋದಾಗ ಪುಸ್ತಕ ಮಾರ್ಗದರ್ಶಿಯಾಗುತ್ತದೆ ಹಾಗೂ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಪರಿಚಯಿಸಲು ಅನುಕೂಲವಾಗುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ನಾನು ಈ ಹಿಂದೆ ಅನೇಕ ವಕೀಲ ಸಹೋದ್ಯೋಗಿಗಳು ಪುಸ್ತಕಗಳನ್ನು ಬರೆದಾಗ ಅವುಗಳ ಬಿಡುಗಡೆಗೆ ನಾನೇ ಕಾರ್ಯಕ್ರಮ ಆಯೋಜಿಸಿ ಪುಸ್ತಕ ಬಿಡುಗಡೆಗೆ ಅವಕಾಶ ಮಾಡಿಸಿದ್ದೇನೆ. ಈಗಾಗಲೇ ನನ್ನ ೧೮ ಪುಸ್ತಕಗಳು ಬೇರೆ ಬೇರೆ ವೇದಿಕೆಗಳಲ್ಲಿ ಬಿಡುಗಡೆ ಆಗಿದ್ದು, ಇದೀಗ ಬೆಂಗಳೂರು ಭಾರ ಅಸೋಸಿಯೇಷನ್‌ನಲ್ಲಿ ೧೯ನೇ ಪುಸ್ತಕ ಬಿಡುಗಡೆಗೆ ಅವಕಾಶ ನೀಡಿದ್ದು ನನ್ನ ಭಾಗ್ಯ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭಹಾರೈಸಿದರು.