ರಾಜ್ಯೋತ್ಸವ ನಿಮಿತ್ತ ನ.೪-೫ರಂದು ನಿವೃತ್ತ ಶಿಕ್ಷಕರಿಗೆ ಸನ್ಮಾನ – ಝೀ ಕನ್ನಡ ಕಲಾವಿದರಿಂದ ವಿಶೇಷ ಕಾರ್ಯಕ್ರಮ
ಶಿಕಾರಿಪುರ: ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಕನ್ನಡ ಯುವಕ ಸಂಘದ ವತಿಯಿಂದ ನ. ೪ ಹಾಗೂ ೫ರ ಶನಿವಾರ ಮತ್ತು ಭಾನುವಾರ ೬೮ನೇ ಕನ್ನಡ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷ ಮಹೇಶ್ ನಾಯ್ಡು ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ರವಿಕುಮಾರ್ ಎಂ.ಆರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಬೆಳಿಗ್ಗೆ ೮ ಗಂಟೆಗೆ ಗ್ರಾ.ಪಂ ಅಧ್ಯಕ್ಷ ವೀರೇಂದ್ರ ಪಾಟೀಲ್ ಧ್ವಜರೋಹಣ ನೆರವೇರಿಸುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿzರೆ ಎಂದು ತಿಳಿಸಿದ ಅವರು, ನಂತರದಲ್ಲಿ ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆಯಲಿರುವ ರಾಜರಾಜೇಶ್ವರಿಯ ಭವ್ಯ ಮೆರವಣಿಗೆಯಲ್ಲಿ ಉಡುಪಿ ಕಾಡುಬೆಟ್ಟುವಿನ ಅಶೋಕ್ ರಾಜ್ ನೇತೃತ್ವದಲ್ಲಿ ವಿಶಿಷ್ಟ ಹುಲಿಕುಣಿತ, ತರೀಕೆರೆಯ ಪ್ರಸಿದ್ದ ಮಹಿಳಾ ವೀರಗಾಸೆ ತಂಡದಿಂದ ನೃತ್ಯ, ಮಂಗಳೂರಿನ ಚಂಡಿವಾದ್ಯ ದೊಂದಿಗೆ ಕಪ್ಪನಹಳ್ಳಿ,ಅಮಟೆಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿನ ಪ್ರಾಥಮಿಕ, ಪ್ರೌಡ ಶಾಲಾ ಮಕ್ಕಳು ಶಿಕ್ಷಕ ವೃಂದ ಹಾಗೂ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು, ಗ್ರಾಮಸ್ಥರು ಹೆಜ್ಜೆ ಹಾಕಲಿzರೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಂ. ಎಚ್ ಪ್ರಕಾಶ್ ಚಾಲನೆ ನೀಡಲಿzರೆ ಎಂದು ತಿಳಿಸಿದರು.
ಅಂದು ಸಂಜೆ ೬ ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿzರೆ. ಮಕ್ಕಳನ್ನು ಸಾಕಿ ಸಲಹುವ ಕಪ್ಪನಹಳ್ಳಿ- ಅಮಟೆಕೊಪ್ಪ ಗ್ರಾ.ಪಂ ವ್ಯಾಪ್ತಿಯ ಎಲ್ಲ ಅಂಗನವಾಡಿ ಶಿಕ್ಷಕಿಯರನ್ನು ಸನ್ಮಾನಿಸಲಾಗುವುದು ನಂತರದಲ್ಲಿ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕ ಹೇಮಂತ್ ಹಾಗೂ ಖಾಸಿಂ ಅಲಿ ಇವೆಂಟ್ಸ್, ಐಶ್ವರ್ಯ ರಂಗನಾಥನ್, ಸೂರ್ಯಕಾಂತ್, ವೈಭವ್, ಶ್ರೀವತ್ಸ, ಪಲ್ಲವಿ ಅವರಿಂದ ರಸಮಂಜರಿ, ಜೀ ಕನ್ನಡ ಡಿ.ಕೆ.ಡಿ ಖ್ಯಾತಿಯ ರವಿಮಾಸ್ಟರ್ ಸಂಗಡಿಗರಿಂದ ನೃತ್ಯ ಕಾರ್ಯಕ್ರಮ, ಝೀ ಕನ್ನಡ ಸೀಜನ್ ೭ರ ಹಾಸ್ಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಭಾನುವಾರ ಸಂಜೆ ೬ ಗಂಟೆಗೆ ನಡೆಯಲಿರುವ ಸಮಾರೋಪದಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿನ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಗುವುದು ನಂತರದಲ್ಲಿ ಝೀ ಕನ್ನಡ ಖ್ಯಾತಿಯ ಸರಿಗಮಪ ಗಾಯಕರಾದ ಚನ್ನಪ್ಪ, ಸುನೀಲ್, ಮೆಹಬೂಬ್, ನೇಹಾಶಾಸ್ತ್ರಿ, ದಿವ್ಯಾ ವಸಂತ್ ರಿಂದ ಸಂಗೀತ ರಸಮಂಜರಿ, ಕುಣಿಗಲ್ ಶಾಂತಲಾ ತಂಡದಿಂದ ನೃತ್ಯ, ಕಾಮಿಡಿ ಕಿಲಾಡಿಯ ಅಪ್ಪಣ್ಣ ತಂಡದಿಂದ ಮಿಮಿಕ್ರಿ, ಮಂಗಳೂರು ಹೆಜ್ಜೆ ನಾದ ತಂಡದಿಂದ ನೃತ್ಯ ಸಹಿತ ಭಾರಿ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರತಿ ವರ್ಷ ರಾಜ್ಯೋತ್ಸವವನ್ನು ಗ್ರಾಮಸ್ಥರು ಹಬ್ಬದ ರೀತಿಯಲ್ಲಿ ಆಚರಿಸುವ ಸಂಪ್ರದಾಯವಿದ್ದು ಸತತ ತಿಂಗಳ ಕಾಲ ಎಲ್ಲ ಕೆಲಸ ಕಾರ್ಯ ಬದಿಗೊತ್ತಿ ಸಂಭ್ರಮಿಸುತ್ತಾರೆ. ಸತತ ೨೬ನೇ ವರ್ಷದ ಈ ಬಾರಿಯ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಸಮಸ್ತ ಕನ್ನಡಾಭಿಮಾ ನಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಅಜಿತ್ ಬಾಬು, ಉಪಾಧ್ಯಕ್ಷ ಲೋಹಿತ್ ಕುಮಾರ್, ಮಾರ್ಗದರ್ಶಕ ಲೋಕೇಶ, ರಾಘವೇಂದ್ರ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.