ಅಧಿಕಾರಿಗಳು ಉತ್ತಮವಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ; ಕೊಟ್ಟ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸುತ್ತದೆ: ಸಚಿವ ಮಧು
ಶಿವಮೊಗ್ಗ: ಹೊಸ ಸರ್ಕಾರ ಬಂದ ನಂತರ ಗ್ಯಾರಂಟಿ ಮೂಲಕ ಯೋಜನೆ ಜರಿಗೊಳಿಸುತ್ತಿದೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿzರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸ ಸರ್ಕಾರ ಬಂದಾಗ ಆಸೆ ಹಾಗೂ ಕಾರ್ಯಕ್ರಮದ ನಿರೀಕ್ಷೆ ಇರುತ್ತದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಯನ್ನು ಶೀಘ್ರವಾಗಿ ಈಡೇರಿಸುತ್ತಿ ದ್ದೇವೆ. ನೀಡಿದ ಭರವಸೆ ಈಡೇರಿದಾಗ ಮಾತ್ರ ಜನರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಬೆಲೆ ಬರುತ್ತದೆ ಎಂದರು. ರಾಜ್ಯ ಸರ್ಕಾರದ ೫ ಗ್ಯಾರಂಟಿ ಪೈಕಿ ನನಗೆ ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆ ಹೆಚ್ಚು ಹತ್ತಿರ ವಾಗಿದೆ. ಹಾಗೆಯೇ ಶಕ್ತಿ ಮತ್ತು ನಿರುದ್ಯೋಗ ಭತ್ಯೆ ಸಹ ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.
ಜಿಯ ಶರಾವತಿ ಸಂತ್ರಸ್ತರಿಗೆ ಶೀಘ್ರ ನ್ಯಾಯ ಸಿಗಲಿದೆ. ಕೋರ್ಟ್ ವಿಚಾರ ಬಂದಾಗ ಅಧಿಕಾರಿಗಳು ನಿಭಾಯಿಸುತ್ತಾರೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದ್ದು ಸಭೆ ನಡೆಸಲಾಗುತ್ತಿದೆ ಎಂದರು.
ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ಸಲ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಇದೇ ೧೮ರಂದು ಮಂಡ್ಯದಲ್ಲಿ ಚಾಲನೆ ನೀಡಲಾಗು ತ್ತದೆ. ಇದರಿಂದ ೬೦ ಲಕ್ಷ ಮಕ್ಕಳಿಗೆ ಅನುಕೂಲ ಆಗಲಿದೆ. ಹಾಗೆಯೇ ದೇಶದಲ್ಲಿ ಮೊದಲ ಬಾರಿಗೆ ಪಿಯು ೨ನೇ ಸಲ ಪೂರಕ ಪರೀಕ್ಷೆ ನಡೆಸಲಾ ಗುತ್ತದೆ. ಅವರನ್ನು ಫೇಲ್ ಮಾಡಿ ದರೆ ಒಂದು ವರ್ಷ ಕಾಯಬೇಕು. ಹಾಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದರು.
ಪಠ್ಯ ಪುಸ್ತಕ ಬದಲಾಗಿದೆ. ಎನ್‌ಇಪಿ ಬದಲು ಎಸ್‌ಇಪಿ ಜರಿಗೊಳಿಸಲಾಗುತ್ತದೆ. ಪಠ್ಯ ಪುಸ್ತಕದಲ್ಲೂ ಕೆಲ ಬದಲಾವಣೆ ತರಬೇಕಿದೆ. ಡಿಜಿಟಲ್ ಲೈಬ್ರರಿ ಯಲ್ಲಿ ೪೦ ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದೆ. ಇದನ್ನು ಶಿಕ್ಷಕರ ದಿನಾಚರಣೆ ದಿನ ರೀಲಾಂಚ್ ಮಾಡಲಾಗುವುದು. ಈಗಾಗಲೇ ೩.೪೦ ಕೋಟಿ ಜನ ಇದಕ್ಕೆ ಸದಸ್ಯ ರಾಗಿzರೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಲೈಬ್ರರಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಚ್ಚಿನ ಬೇಡಿಕೆಯಿದ್ದು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಆರಂಭಿಸಲಾಗುವುದು. ಅನುದಾನ ಪಡೆಯದ ೧೬೦೦ ಶಾಲೆಗಳಿವೆ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದರು.
ಇನ್ನಾರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ. ಅವರಿಗೆ ಬಸ್ ನಿಲ್ದಾಣದಲ್ಲಿ ಗಿಣಿ ಶಾಸ್ತ್ರ ಹೇಳಲು ಹೇಳಿ. ಬಸ್ ಸ್ಟ್ಯಾಂಡ್‌ನಲ್ಲಿ ಜಗ ಖಾಲಿ ಇರುತ್ತೆ. ಅಲ್ಲಿ ಅವರಿಗೆ ಹೋಗಿ ಗಿಣಿಶಾಸ್ತ್ರ ಹೇಳಲಿ ಎಂದು ತಿರುಗೇಟು ನೀಡಿದರು.
ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿರುವ ಬಗ್ಗೆ ಸಾಕ್ಷ್ಯಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದನ್ನೇ ಹೇಳಿzರೆ ಎಂದರು.
ಅಘೋಷಿತ ವಿದ್ಯುತ್ ಕಡಿತದ ಬಗ್ಗೆ ಸಾಕಷ್ಟು ಜನ ಅಸಮಾಧಾನ ವ್ಯಕ್ತಪಡಿಸಿzರೆ. ಜಲ ವಿದ್ಯುತ್ ಕೇಂದ್ರಗಳಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ಕೆಲವೆಡೆ ವಿದ್ಯುತ್ ಕಡಿತ ವಾಗುತ್ತಿದೆ ಎಂದು ಹೇಳಿದರು.