ನ. ೩೦: ಉಚಿತ ಆರೋಗ್ಯ ತಪಾಸಣೆ -ಚಿಕಿತ್ಸಾ ಶಿಬಿರ
ಶಿವಮೊಗ್ಗ: ಪುರಲೆಯಲ್ಲಿ ರುವ ಸುಬ್ಬಯ್ಯ ವೈದ್ಯಕೀಯ ಬೋಧನಾ ಆಸ್ಪತ್ರೆ ವತಿಯಿಂದ ಶಿಶು ಯೋಜನೆ ಅಭಿವೃದ್ಧಿ ಯೋಜನೆ ಇವರ ಸಹಕಾರದಲ್ಲಿ ನ. ೩೦ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಬಿ.ಹೆಚ್. ರಸ್ತೆಯಲ್ಲಿರುವ ಸೈನ್ಸ್ ಮೈದಾನದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಡಾ. ಮಂಜು ನಾಥ ಸ್ವಾಮಿ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಶಿಬಿರದಲ್ಲಿ ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಲಾಗುವುದು. ನುರಿತ ಮಕ್ಕಳ ತಜ್ಞರು ವೈದ್ಯ ಕೀಯ ತಪಾಸಣೆ ಮತ್ತು ಚಿಕಿತ್ಸೆ ನೀಡುವರು. ಹೆಚ್ಚಿನ ಚಿಕಿತ್ಸೆಗಾಗಿ ಸುಬ್ಬಯ್ಯ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು ಎಂದರು.
ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ವ್ಯತ್ಯಾಸ, ದೃಷ್ಟಿ ದೋಷ, ದಂತ ಸಮಸ್ಯೆ, ಅಲರ್ಜಿ, ಅಸ್ತಮಾ, ಥೆಲೆಸಿಮಿಯಾ ಇನ್ನು ಮುಂತಾದ ಸಮಸ್ಯೆಗಳಿಗೆ ಮಕ್ಕಳ ತಜ್ಞರಿಂದ ತಪಾಸಣೆ ಮಾಡಲಾಗುವುದು ಎಂದರು.
ಡಾ. ವಿಕ್ರಂ ಎಸ್. ಕುಮಾರ್ ಮಾತನಾಡಿ, ಸುಬ್ಬಯ್ಯ ಆಸ್ಪತ್ರೆ ಬೋಧನಾ ಆಸ್ಪತ್ರೆ ಕೂಡ ಆಗಿರುವುದರಿಂದ ಎ ರೀತಿಯ ಚಿಕಿತ್ಸೆ ಮತ್ತು ತಪಾಸಣೆ ನಡೆಸಲು ಅನುಕೂಲವಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ೨೪ ಗಂಟೆ ಸೇವೆ ಇದೆ. ಒಳ್ಳೆಯ ಔಷಧಾಲಯ ವಿದೆ. ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿದೆ. ಎ ರೀತಿಯ ಪರೀಕ್ಷೆ ಗಳಲ್ಲೂ ರಿಯಾಯಿತಿ ಇದೆ. ಇಎಸ್ಐ, ಆಯುಷ್ಮಾನ್, ಸಂಪೂರ್ಣ ಸುರಕ್ಷಾ ಯೋಜನೆ ಸೇರಿದಂತೆ ಹಲವು ವಿಮಾ ಸೌಲಭ್ಯಗಳು ಕೂಡ ಲಭ್ಯವಿದೆ ಎಂದರು.
ಉಚಿತ ಆರೋಗ್ಯ ಶಿಬಿರದ ಸೌಲಭ್ಯವನ್ನು ಸಾರ್ವಜನಿಕರು ಪಡೆಯಬೇಕು. ಮತ್ತು ಹೆಚ್ಚಿನ ಮಾಹಿತಿಗೆ ೯೦೩೫೨ ೯೩೬೮೦, ೯೯೬೪೩ ೪೮೯೨೮ ಸಂಪರ್ಕಿಸಬ ಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಟ್ರಸ್ಟಿ ಡಾ. ವಿನಯಾ ಶ್ರೀನಿವಾಸ್, ವೈದ್ಯಾಧಿಕಾರಿ ಡಾ. ಶಿವಮೂರ್ತಿ, ಲೋಬೋ ಇದ್ದರು.