ಏಕದಿನ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ:ಅ.೧೫: ಭಾರತ v/s ಪಾಕ್ ಹೈಟೆನ್ಷನ್ ಮ್ಯಾಚ್
ಮುಂಬೈ: ಕ್ರಿಕೆಟ್ ಅಭಿಮಾನಿ ಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಬಹುನಿರೀಕ್ಷಿತ ಐಸಿಸಿ ಪುರುಷರ ಏಕದಿನ ವಿಶ್ವಕಪ್ ೨೦೨೩ ವೇಳಾಪಟ್ಟಿ ಇದೀಗ ಪ್ರಕಟಗೊಂ ಡಿದೆ. ಅ.೫ ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ. ಅಂತರ ರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂಬೈ ನಲ್ಲಿ ನಡೆದ ೧೦೦ ದಿನಗಳ ವಿಶ್ವಕಪ್ ಸಮಾರಂಭದಲ್ಲಿ ವಿಶ್ವಕಪ್ ೨೦೨೩ ವೇಳಾಪಟ್ಟಿ ಅನಾವರಣಗೊಳಿ ಸಿದೆ.
ಅ.೫ ರಿಂದ ನ.೧೯ರವರೆಗೆ ಟೂರ್ನಿ ನಡೆಯಲಿದೆ. ದೇಶದ ೧೦ ನಗರಗಳಲ್ಲಿ ಟೂರ್ನಿ ನಡೆಯ ಲಿದ್ದು, ಟೂರ್ನಿಯ ಉದ್ಘಾಟನಾ ಮ್ಯಾಚ್ ಹಾಗೂ ಫೈನಲ್ ಪಂದ್ಯ ವು ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣ ದಲ್ಲಿ ಆಯೋಜನೆಗೊಳ್ಳಲಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ಆಗಿದ್ದ ನ್ಯೂಜಿಲೆಂಡ್ ತಂಡಗಳು ಟೂರ್ನಿಯ ಉದ್ಘಾಟನಾ ಪಂದ್ಯ ದಲ್ಲಿ ಸೆಣಸಲಿವೆ. ಈ ಬಾರಿ ವಿಶ್ವಕಪ್‌ನ ಆತಿಥ್ಯ ವಹಿಸಿರುವ ಭಾರತವು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅ.೮ ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅ. ೫ ರಿಂದ ನ.೧೯ ರವರೆಗೆ ನಡೆಯ ಲಿದೆ. ಸೆಮಿಫೈ ನಲ್ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನ.೧೫ ಮತ್ತು ೧೬ರಂದು ಆಯೋಜಿಸಲಾ ಗಿದ್ದು, ಅಂತಿಮ ಫೈನಲ್ ಪಂದ್ಯವು ನ.೧೯ ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.
ಭಾರತದ ಪಂದ್ಯ ಯಾವಾಗ:
ಭಾರತ ತಂಡ ಅ.೮ ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೀಮ್ ಇಂಡಿಯಾ ಒಟ್ಟು ೯ ಪಂದ್ಯಗಳನ್ನ ಆಡಲಿದೆ. ಆಸ್ಟ್ರೇಲಿಯಾ, ಅಫ್ಘಾನಿ ಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಕ್ವಾಲಿಫೈಯರ್ ೧, ಕ್ವಾಲಿಫೈಯರ್ ೨ ವಿರುದ್ಧ ಸೆಣೆಸಾಟ ನಡೆಯಲಿದೆ.
ಅ.೧೫: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ:
ಪಾಕಿಸ್ತಾನದ ಆಕ್ಷೇಪಗಳ ಹೊರತಾಗಿಯೂ, ಭಾರತ ಹಾಗೂ ಪಾಕ್ ನಡುವಣ ಪಂದ್ಯವು ಅ.೧೫ ರಂದು ಅಹಮದಾಬಾದ್ ನಲ್ಲೇ ನಡೆಯಲಿದೆ. ಭಾರತ ತಂಡ ವನ್ನು ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನ ತಂಡವನ್ನು ಬಾಬರ್ ಅಜಂ ಮುನ್ನಡೆಸಲಿದ್ದಾರೆ.
ಈ ಪಂದ್ಯವನ್ನು ಚೆನ್ನೈ, ಬೆಂಗಳೂರು ಅಥವಾ ಕೋಲ್ಕತ್ತಾಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ, ಇದೀಗ ಅಂತಿಮ ವಾಗಿ ಅಹ್ಮದಾ ಬಾದ್‌ನಲ್ಲೇ ನಡೆಸಲು ಒಪ್ಪಿಗೆ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ೧,೩೦,೦೦೦ ಪ್ರೇಕ್ಷಕರಿಗೆ ಆತಿಥ್ಯ ವಹಿಸುತ್ತದೆ. ಇಲ್ಲಿ ಭಾರತ-ಪಾಕ್ ಪಂದ್ಯ ನಡೆದರೆ ಸ್ಟೇಡಿಯಂ ಹೌಸ್ ಫುಲ್ ಆಗಲಿದ್ದು, ಟಿಕೆಟ್‌ಗಳೂ ಕೂಡ ಸಂಪೂರ್ಣ ಮಾರಾಟವಾ ಗುವ ನಿರೀಕ್ಷೆಯಿದೆ. ಹೀಗಾಗಿ ಬಿಸಿಸಿಐ ಅಥವಾ ಐಸಿಸಿ ಸ್ಥಳವನ್ನು ಬದಲಾಯಿಸಲು ಒಪ್ಪಿಲ್ಲ ಎನ್ನಲಾ ಗಿದೆ.
ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ:
ಅ.೮: ಭಾರತ v/s ಆಸ್ಟ್ರೇಲಿಯಾ, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಅ.೧೧: ಭಾರತ v/s ಅಫ್ಘಾನಿಸ್ತಾನ, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ.
ಅ.೧೫: ಭಾರತv/s ಪಾಕಿಸ್ತಾನ, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
ಅ.೧೯: ಭಾರತ v/s ಬಾಂಗ್ಲಾದೇಶ, ಎಂಸಿಎ ಸ್ಟೇಡಿಯಂ, ಪುಣೆ.
ಅ.೨೨: ಭಾರತ v/s ನ್ಯೂಜಿಲೆಂಡ್, ಹೆಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ.
ಅ.೨೯: ಭಾರತ v/s ಇಂಗ್ಲೆಂಡ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ.
ನ.೨: ಭಾರತ v/s ಕ್ವಾಲಿಫೈಯರ್ ೨, ವಾಂಖೆಡೆ ಸ್ಟೇಡಿಯಂ, ಮುಂಬೈ.
ನ.೫: ಭಾರತ v/s ದಕ್ಷಿಣ ಆಫ್ರಿಕಾ, ಈಡನ್ ಗಾರ್ಡನ್ಸ್, ಕೋಲ್ಕತ್ತಾ.
ನ.೧೧: ಭಾರತv/s ಕ್ವಾಲಿ ಫೈಯರ್ ೧, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.
ಟೂರ್ನಿಯಲ್ಲಿ ೧೦ ತಂಡಗಳು:
ವಿಶ್ವಕಪ್ ಟೂರ್ನಿಯಲ್ಲಿ ೧೦ ತಂಡಗಳು ಕಣಕ್ಕಿಳಿಯಲಿವೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿ ಸ್ತಾನ ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿಕೊಂಡಿದ್ದು, ನೇರ ವಾಗಿ ಟೂರ್ನಿಯಲ್ಲಿ ಆಡಲಿವೆ. ಉಳಿದೆರಡು ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಜಿಂಬಾಬ್ವೆ ತಂಡಗಳು ಪೈಪೋಟಿ ನಡೆಸುತ್ತಿವೆ.
ಯಾವ ನಗರಗಳಲ್ಲಿ ಟೂರ್ನಿ ನಡೆಯುತ್ತೆ?
ಬೆಂಗಳೂರು, ಹೈದರಾಬಾದ್, ಪುಣೆ, ಲಖನೌ, ಅಹಮದಾಬಾದ್, ದೆಹಲಿ, ಧರ್ಮಶಾಲಾ, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ.