ಕಾನೂನು ಪಾಲನೆ ನಮ್ಮೆಲ್ಲರ ಕರ್ತವ್ಯ…
ಶಿಕಾರಿಪುರ : ಸಮಾಜದಲ್ಲಿನ ಪ್ರತಿಯೊಬ್ಬರೂ ನಿರ್ವಹಿಸುವ ಪ್ರತಿಯೊಂದು ಚಟುವಟಿಕೆ ಕಾನೂನಿನ ರಕ್ಷಣೆ ಹಾಗೂ ನಿಯಂತ್ರಣವಿದೆ. ಕಾನೂನನ್ನು ಅರಿತು ಗೌರವಿಸು ವುದು ಪ್ರತಿಯೊಬ್ಬರ ಕರ್ತವ್ಯ ವಾಗಬೇಕು ಎಂದು ಪಟ್ಟಣ ಠಾಣೆ ಸಿಪಿಐ ಸಂತೋಷ್. ಪಾಟೀಲ್ ತಿಳಿಸಿದರು.
ಕುಮದ್ವತಿ ವಿeನ ಮತ್ತು ವಾಣಿಜ್ಯ ಪಪೂ ಕಾಲೇಜು ಹಾಗೂ ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯ ಮತ್ತು ಪಟ್ಟಣ ಪೊಲೀಸ್ ಠಾಣೆ ಶಿಕಾರಿಪುರ ಇವರ ಸಹಯೋಗದಲ್ಲಿ ನಡೆದ ವಿಶ್ವ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನದಿಂದ ಇಡೀ ಜೀವನವೇ ಸರ್ವನಾಶವಾಗುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ವ್ಯಸನ ಮುಕ್ತರಾಗಿ ಆರೋಗ್ಯದ ಕಡೆಗೆ ಗಮನಹರಿಸ ಬೇಕೆಂದು ತಿಳಿಸಿದ ಅವರು, ಭಾರತ ಸಂವಿಧಾನದಲ್ಲಿ ಅಂದಾಜು ೪೦ ಸಾವಿರ ಅಧಿಕ ಕಾಯ್ದೆಗಳಿವೆ, ಐಟಿ ಕಾಯ್ದೆ, ಮೋಟಾರ್ ಕಾಯ್ದೆ, ಪೋಕ್ಸೋ ಕಾಯ್ದೆ ಸಹಿತ ಪ್ರತಿಯೊಂದು ಕಾಯ್ದೆ ಕಾನೂನು ಪಾಲಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದ್ದು ಉಲ್ಲಂಘಿಸಿದಲ್ಲಿ ವ್ಯಕ್ತಿ ಶಿಕ್ಷೆಗೆ ಗುರಿಯಾಗುತ್ತಾನೆ ಎಂದರು.
ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಪ್ರತಿನಿಧಿ ಹಾಗೂ ಕುಮದ್ವತಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಎಸ್ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ಶರತ್ ಮಕ್ಕಳಿಗೆ ಪ್ರತಿe ವಿಧಿಯನ್ನು ಬೋಧಿಸಿದರು.
