ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಿ…
ಶಿವಮೊಗ್ಗ : ರಸ್ತೆ ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋಟೆ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ಬಾಗೋಜಿ ತಿಳಿಸಿದರು.
ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ಕಲಾ ಪರಿಷತ್, ಎನ್‌ಎಸ್‌ಎಸ್ ಘಟಕಗಳು, ಕೋಟೆ ಪೊಲೀಸ್ ಠಾಣೆ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದು ರಸ್ತಾ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಗಳು ರಸ್ತಾ ಸುರಕ್ಷತೆಯ ಬಗ್ಗೆ ಗಮನಹರಿಸಲೇಬೇಕಾಗಿದೆ. ವ್ಹೀಲಿಂಗ್ ಮಾಡುವುದು, ಅತೀ ವೇಗವಾಗಿ ವಾಹನ ಚಲಾಯಿಸು ವುದು, ದ್ವಿಚಕ್ರವಾಹನಗಳಲ್ಲಿ ಮೂವರಿಗಿಂತ ಹೆಚ್ಚಾಗಿ ಸಂಚರಿಸು ವುದು, ಹಾರನ್‌ಗಳನ್ನು ವಿಚಿತ್ರ ವಾಗಿ ಬಳಸುವುದು, ಅತೀ ಹೆಚ್ಚು ಶಬ್ಧ ಬರುವಂತೆ ಸೈಲೆನ್ಸರ್ ಪೈಪುಗಳನ್ನು ಮಾರ್ಪಡಿಸಿ ಕೊಳ್ಳುವುದು ಇವೆಲ್ಲವೂ ತಪ್ಪಾಗಿದ್ದು, ಇದರಿಂದ ದಂಡ ತೆರಬೇಕಾಗುತ್ತದೆ ಎಂದರು.
ಟ್ರಾಫಿಕ್ ಸಿಗ್ನಲ್‌ಗಳನ್ನು ಮತ್ತು ಚಿಹ್ನೆಗಳನ್ನು ಬಳಸುವುದು, ಕಡ್ಡಾಯವಾಗಿರುತ್ತದೆ. ಜೀಬ್ರಾ ಕ್ರಾಸಿಂಗ್ ಮೂಲಕವೇ ರಸ್ತೆ ದಾಟ ಬೇಕು. ಕಾರುಗಳಲ್ಲಿ ಪ್ರಯಾಣಿಸುವವರು ಸೀಟ್‌ಬೆಲ್ಟ್ ಧರಿಸಬೇಕು. ಯಾವುದೇ ಕಾರಣಕ್ಕೂ ಮದ್ಯಪಾನ ಮಾಡ ಬಾರದು. ಚಾಲನೆ ಮಾಡುವಾಗ ಮೊಬೈಲ್‌ನ್ನು ಬಳಸಲೇಬೇಡಿ, ಶಾಲೆ ಮತ್ತು ಆಸ್ಪತ್ರೆಗಳ ಮುಂದೆ ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲ ಕಾಲಕ್ಕೆ ವಾಹನಗಳನ್ನು ತಪಾಸಣೆ ಮಾಡಿಸಿಕೊಳ್ಳಿ. ಎಚ್ಚರಿಕೆ ಯಿಂದ ವಾಹನಗಳನ್ನು ಚಲಾಯಿಸಿ, ಮನೆಯಲ್ಲಿ ನಿಮಗಾಗಿ ತಂದೆ-ತಾಯಿಗಳು ಕಾಯುತ್ತಿರುತ್ತಾರೆ. ಅವರ ನೆನಪುಮಾಡಿಕೊಳ್ಳಿ. ವಿನಾಃಕಾರಣ ವಾಹನಗಳನ್ನು ಪ್ರತಿಷ್ಠೆಗಾಗಿ ಓಡಿಸಬೇಡಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಸಿರಾಜ್ ಅಹ್ಮದ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಪ್ರಾಧ್ಯಾಪಕರುಗಳಾದ ಡಾ.ಎಂ. ಹೆಚ್. ಪ್ರಹ್ಲಾದಪ್ಪ, ಡಾ.ಬಿ.ಎಂ. ಚಂದ್ರಶೇಖರ್, ಕರಿಬಸಪ್ಪ, ಎಎಸ್‌ಐ ಆಂತೋಣಿ, ಪೊಲೀಸ್ ಕಾನ್ಸ್‌ಟೇಬಲ್ ಪ್ರಕಾಶ್ ಎಸ್. ಸೇರಿದಂತೆ ಹಲವರಿದ್ದರು. ಸುಮಾರು ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
