ನ್ಯಾಮತಿ: ಶಾಂತಿಯುತ ಮತದಾನ…
ನ್ಯಾಮತಿ : ಮೇ ೭ರಂದು ನಡೆದ ೨ನೇ ಹಂತದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನ್ಯಾಮತಿ ತಾಲೂಕಿನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಬೆಳಿಗ್ಗೆ ೭ ಗಂಟೆಯಿಂದ ಆರಂಭವಾದ ಮತದಾನದಲ್ಲಿ ನ್ಯಾಮತಿ ಪಟ್ಟಣ ಸೇರಿದಂತೆ ಎಲ್ಲಿಯೂ ಯಾವುದೇ ಅಹಿತರ ಘಟನೆ, ಗಲಾಟೆ, ಗದ್ದಲಗಳು ನಡೆಯದಂತೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಶಾಂತಿ ಯುತವಾಗಿ ನಡೆಸಿದೆ.
ನಿಗದಿಯಾದ ೧೦೦ ಮೀ ವ್ಯಾಪ್ತಿಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ತಾಲೂಕಿನ ಯಾವುದೇ ಇವಿಎಂ ಮತ್ತು ವಿವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ಯಾವುದೇ ವರದಿಯಾಗಿಲ್ಲ.
ಸಖಿ ಮತಗಟ್ಟೆ ಕೇಂದ್ರವನ್ನು ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ , ತಾಲೂಕಿನ ಸುರಹೊನ್ನೆ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಗೋವಿನಕೋವಿ ಗ್ರಾಮದ ಸರಕಾರಿ ಪ್ರೌಡಶಾಲೆ , ಹೊನ್ನಾಳಿ ಪಟ್ಟಣದ ತಾಪಂ ಕಾರ್ಯಾಲಯ, ತಾಲೂಕಿನ ಹಿರೇಬಾಸೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ತೆರೆಯಲಾಗಿದ್ದು ಎಲ್ಲರೂ ಅಧಿಕಾರಿಗಳಾಗಿzರೆ. ಮತ ಚಲಾಯಿಸಿ ಮಹಿಳೆಯರು ಮೊಬೈಲ್ ಮೂಲಕ ಸೆಲ್ಫಿಯೊಂದಿಗೆ ಭಾವಚಿತ್ರ ತೆಗೆಯುವುದು ವಿಶೇಷವಾಗಿತ್ತು . ಹೊನ್ನಾಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.೭೪.೪೬ ಮತದಾನವಾಗಿದೆ.