ಡೊನೇಷನ್ ಹಾವಳಿ ತಪ್ಪಿಸಲು ಆಗ್ರಹಿಸಿ ಎನ್‌ಎಸ್‌ಯುಐ ಮನವಿ
ಶಿವಮೊಗ್ಗ : ಖಾಸಗಿ ಪಿಯು ಕಾಲೇಜುಗಳಲ್ಲಿ ಡೋನೇಷನ್ ಹಾವಳಿ ತಪ್ಪಿಸ ಬೇಕು ಎಂದು ಆಗ್ರಹಿಸಿ ಎನ್‌ಎಸ್‌ಯುಐ ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿತು.
ಶೈಕ್ಷಣಿಕ ವರ್ಷ ಆರಂಭ ವಾಗುತ್ತಿದ್ದಂತೆ ಡೊನೇಷನ್ ಹಾವಳಿ ಹೆಚ್ಚಾಗಿದೆ. ಪದವಿ ಪೂರ್ವ ಶಿಕ್ಷಣಕ್ಕಾಗಿ ಪೋಷಕರು ಲಕ್ಷಾಂತರ ರೂ. ಡೊನೇಷನ್ ಪಾವತಿಸಬೇಕಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಡೊನೇಷನ್ ಹಾವಳಿಯನ್ನು ತಪ್ಪಿಸಬೇಕಾಗಿದೆ. ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪಡೆದುಕೊಳ್ಳ ಬೇಕು ಎಂದು ಆಗ್ರಹಿಸಿದರು.
ಸರ್ಕಾರ ಖಾಸಗಿ ಶಾಲೆಗಳಿಗೆ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತದೆ. ಇದನ್ನು ಗಮನದ ಲ್ಲಿಟ್ಟು ಕೊಂಡು ಖಾಸಗಿ ಶಾಲೆಗಳು ಬಡವರಿಗೂ ಅನುಕೂಲವಾಗು ವಂತೆ ನಿಗಧಿತ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ಮನವಿದಾರರು ಒತ್ತಾಯಿಸಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದು ಒಂದು ವಾರವೂ ಕಳೆದಿಲ್ಲ ಆದರೆ ಖಾಸಗಿ ಪಿಯು ಕಾಲೇಜು ಗಳ ಪ್ರವೇಶಾತಿ ಮುಗಿದುಬಿಟ್ಟಿದೆ. ಸಾವಿರಾರು ವಿದ್ಯಾರ್ಥಿಗಳು ಪಿಯು ಶಿಕ್ಷಣದಿಂದ ವಂಚಿತ ರಾಗುತ್ತಿzರೆ. ಆದ್ದರಿಂದ ಖಾಸಗಿ ಪಿಯು ಕಾಲೇಜುಗಳು ರೋಷ್ಟರ್ ಪದ್ದತಿಯನ್ನು ಅನುಸರಿಸಿ ಪ್ರವೇಶ ಪ್ರಕ್ರಿಯೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಧ್ಯಕ್ಷ ವಿಜಯ್‌ಕುಮಾರ್ ಎಸ್.ಎನ್., ಪ್ರಮುಖರಾದ ಹರ್ಷಿತ, ಚರಣ, ರವಿಕುಮಾರ್ ಸೇರಿದಂತೆ ಹಲವರಿದ್ದರು.