ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ವಿವಿಧ ನಮೂನೆಯ ಸಂಪ್ರದಾಯ,ನಂಬಿಕೆ,ಕೌಶಲಗಳನ್ನು ವಿದ್ಯಾರ್ಥಿ ಬದುಕಿನಲ್ಲಿ ತಿಳಿದುಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ…

Share Below Link

ಶಿಕಾರಿಪುರ : ಸಮಾಜದಲ್ಲಿನ ವಿವಿಧ ನಮೂನೆಯ ಸಂಪ್ರದಾಯ ಗಳು, ನಂಬಿಕೆ,ಕೌಶಲಗಳನ್ನು ವಿದ್ಯಾರ್ಥಿ ಬದುಕಿನಲ್ಲಿ ತಿಳಿದುಕೊ ಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಯ ಖಜಂಚಿ ಹಾಗೂ ಕ್ಷೇತ್ರದ ನೂತನ ಶಾಸಕ ಬಿ.ವೈ ವಿಜ ಯೇಂದ್ರ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾ ನಂದ ವಿದ್ಯಾಸಂಸ್ಥೆ(ರಿ),ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ವತಿ ಯಿಂದ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಸಮಾಜ ಜೀವಿ, ಸಮುದಾಯವನ್ನು ಅರ್ಥ ಮಾಡಿ ಕೊಳ್ಳಬೇಕಾದುದು ಜವಾಬ್ದಾರಿ ಯಾಗಿದೆ ಎಂದ ಅವರು ಸಮಾಜ ದಲ್ಲಿನ ಅಗತ್ಯತೆ ಹಾಗೂ ಸಮಸ್ಯೆ ಗಳನ್ನು ಗುರುತಿಸಿ, ಸ್ವತಃ ಬಗೆಹರಿಸಿ ಕೊಳ್ಳುವಲ್ಲಿ ವ್ಯಕ್ತಿಯ ಪಾತ್ರ ಅತ್ಯಂತ ಮಹತ್ವವನ್ನು ಪಡೆದು ಕೊಳ್ಳುತ್ತದೆ.ಸಮಾಜದಲ್ಲಿನ ವಿವಿಧ ರೀತಿಯ ಸಂಪ್ರದಾಯಗಳು, ನಂಬಿಕೆಗಳು, ಕೌಶಲಗಳನ್ನು ಅರಿ ಯುವುದು ಹಾಗೂ ಅವುಗಳಿಗೆ ಮುಕ್ತ ಹಾಗೂ ಉತ್ತಮ ವೇದಿಕೆ ಯನ್ನು ದೊರಕಿಸಿಕೊಡಲು ರಾಷ್ಟ್ರೀ ಯ ಸೇವಾ ಯೋಜನೆ ಮಹತ್ವದ ಪಾತ್ರವನ್ನು ವಹಿಸುತ್ತವೆ.ನಾಡು ನುಡಿ ದೇಶಾಭಿಮಾನವನ್ನು ಮೂ ಡಿಸಿಕೊಳ್ಳಲು,ಸಮಾಜ ಮುಖಿ ಕಾರ್ಯಗಳು ಮಾರ್ಗದರ್ಶಕವಾ ಗುತ್ತವೆ. ಸಮಸ್ಯೆಗಳನ್ನು ಎದುರಿ ಸದೇ ಅದರಿಂದ ಪಲಾಯನವಾ ಗದೇ ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಉತ್ತಮ ವೇದಿ ಕೆಯಾಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ದಿವ್ಯ ಸಾನಿ ಧ್ಯ ವಹಿಸಿದ್ದ ಸ್ಥಳೀಯ ಶಿವಯೊ ಗಾಶ್ರಮದ ಪೀಠಾಽಪತಿ ಶ್ರೀ ಸಿದ್ಧಲಿಂಗ ಸ್ವಾಮಿಗಳು,ಋಷಿ ಮುನಿಗಳ ಕಾಲದಲ್ಲಿಯೂ ವಿದ್ಯೆಯ ಜತೆಗೆ ಸಮಾಜ ಸೇವೆಗೆ ಹೆಚ್ಚಿನ ಮಹತ್ವವಿದ್ದು ಸ್ವಾರ್ಥ ರಹಿ ತವಾದ ಸೇವೆಯನ್ನು ಮಾಡುವ ನಿಷ್ಕಲ್ಮಶ ಮನಸನ್ನು ಯುವ ಪೀಳಿ ಗೆಯಲ್ಲಿ ಬೆಳೆಸಬೇಕಾಗಿದೆ. ಹಣಗಳಿಕೆ ಮುಖ್ಯವಲ್ಲ,ಸಾಮರ ಸ್ಯದ ಜೀವನವನ್ನು ಕಂಡುಕೊಳ್ಳು ವುದು ಬಹು ಮುಖ್ಯ. ದೇಶ, ಭಾಷೆ, ನೆಲವನ್ನು ನಿರಂತರವಾಗಿ ಜೋಪಾನ ಮಾಡಲು ಎನ್‌ಎಸ್ ಎಸ್ ಕಾರ್ಯಕ್ರಮಗಳು ಸಹಕಾರಿ ಯಾಗುತ್ತದೆ ಎಂದು ತಿಳಿಸಿ ಇಂದಿನ ಯುವಕರು ದುಶ್ಚಟಗಳಿಂದ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿzರೆ.ಗುರುಗಳ ಮಾರ್ಗದರ್ಶನ ಬೇಡವಾಗಿದೆ, ತಂದೆ ತಾಯಿಗಳನ್ನು ಸಾಕುವ ಮನಸ್ಥಿತಿಯಿಂದ ದೂರ ಉಳಿಯು ತ್ತಿzರೆ ಎಂದು ಆತಂಕ ವ್ಯಕ್ತಪಡಿ ಸಿದರು.
ಮುಖ್ಯ ಅತಿಥಿ ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ನಾಗರಾಜ ಪರಿಸರ ಮಾತನಾಡಿ, ಗ್ರಾಮೀಣ ಪ್ರದೇಶ ಗಳಲ್ಲಿ ದೊರೆಯುವ ಮೂಲಭೂತ ಸೌಲಭ್ಯ ಬಗ್ಗೆ ಅರಿತು ಸ್ವಯಂ ಪ್ರೇರಿ ತವಾಗಿ ಯುವಕರು ಸೇವೆಯನ್ನು ಮಾಡುವುದು,ಸಮಾಜಕ್ಕೆ ಪೂರಕವಾಗಿ ಪ್ಲಾಸ್ಟಿಕ್ ನಿಷೇಧ,ಮರಗಳನ್ನ ಬೆಳೆ ಸುವ ಹಲವು ಸಮಾಜಮುಖಿ ಕಾರ್ಯವನ್ನು ವಿದ್ಯಾರ್ಥಿ ಜೀವನ ದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿ ಎನ್‌ಎಸ್‌ಎಸ್ ತತ್ವವು ಉತ್ತಮ ಸಿದ್ಧಾಂತವಾಗಿದೆ,ಇದು ವ್ಯಕ್ತಿಯ ಕಲ್ಯಾಣದ ಜತೆಗೆ ಅಂತಿಮವಾಗಿ ಸಮಾಜದ ಕಲ್ಯಾಣವನ್ನು ಅವಲಂ ಬಿಸಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ,ಗ್ರಾಮಾಭಿವೃದ್ದಿ ಅಧ್ಯಕ್ಷ ಮಂಜುನಾಥ್,ಗ್ರಾ.ಪಂ ಸದಸ್ಯ ಕೆರೆಸ್ವಾಮಿ, ಗಂಗಮ್ಮ, ಪ್ರಾಚಾರ್ಯ ಡಾ.ಶಿವಕುಮಾರ್ ಉಪಸ್ಥಿತರಿದ್ದರು.ಎನ್‌ಎಸ್‌ಎಸ್ ಸಂಯೋಜನಾಽಕಾರಿ ರವಿಕು ಮಾರ ಪ್ರಾಸ್ತಾವಿಕವಾಗಿ ಮಾತನಾ ಡಿದರು.ಗ್ರಾಮಸ್ಥರು ನೂತನ ಶಾಸಕರನ್ನು ಸನ್ಮಾನಿಸಿದರು.
ಮರಿಸ್ವಾಮಿ ಸಂಗಡಿಗರು ಪ್ರಾರ್ಥಿಸಿ,ದೇವರಾಜ ವೈ ಸ್ವಾಗತಿಸಿ,ಸುಷ್ಮಾ ಪೂಜರ್, ವರ್ಷಿಣಿ ನಿರೂಪಿಸಿ ರವಿ ವಂದಿಸಿದರು.