ಜಿಲ್ಲಾ ಸುದ್ದಿತಾಜಾ ಸುದ್ದಿ

ಸೇವಾ ಮನೋಭಾವ ವೃದ್ಧಿಸಲು ಎನ್‌ಎಸ್‌ಎಸ್ ಸಹಕಾರಿ…

Share Below Link

ಶಿವಮೊಗ್ಗ: ಯುವ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ ಸೇವಾ ಮನೋಭಾವ ವೃದ್ಧಿಸುವಲ್ಲಿ ಎನ್‌ಎಸ್‌ಎಸ್ ಸಹಕಾರಿಯಾಗುತ್ತದೆ ಎಂದು ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯ ದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.


ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಆಯೋ ಜಿಸಿದ್ದ ಎನ್‌ಎಸ್‌ಎಸ್ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತ ನಾಡಿ, ಪಲಾಪೇಕ್ಷೆ ಬಯಸದೇ ನಿರಂತರ ಸೇವೆ ಮಾಡುತ್ತಿರುವ ಎನ್‌ಎಸ್‌ಎಸ್ ಘಟಕಗಳು ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಸೇವಾ ಮನೋಭಾವ ವೃದ್ಧಿಸುವ ಗೀತ ಗಾಯನದಿಂದ ಮಕ್ಕಳ ಮನಸ್ಸು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತದೆ. ಮಕ್ಕಳಲ್ಲಿರುವ ದುರ್ಗುಣ ದುಮ್ಮಾ ನಗಳು ಕಡಿಮೆಯಾಗುತ್ತವೆ. ಜತಿ ಮತ ಭೇದವಿಲ್ಲದೆ ಗ್ರಾಮಗಳಲ್ಲಿ ಆರೋಗ್ಯದ ಬಗ್ಗೆ ಜಗೃತಿ ಮೂಡಿಸುತ್ತಾ ಸ್ವಚ್ಛತೆ ಹಾಗೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಮಾಡುತ್ತಿರುವ ಎನ್‌ಎಸ್‌ಎಸ್ ಘಟಕಗಳು ಸಮಾಜದ ಆಸ್ತಿ ಯಾಗಿವೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಾನೂನು ಕಾಲೇಜಿನ ಸಹಪಾಧ್ಯಾಪಕ ಡಾ. ಬಿ.ಸಿ.ಬಸಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ರಾಷ್ಟ್ರದ ಆಸ್ತಿ ನಿರ್ಮಾಣ ಹಾಗೂ ರಾಷ್ಟ್ರದ ಪ್ರೇಮ, ಸಹೋದರತ್ವ, ಏಕತೆ ಹಳ್ಳಿಗಳ ಬೆಳವಣಿಗೆಗೆ ಎನ್‌ಎಸ್ ಎಸ್ ಅತ್ಯಂತ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತಿದೆ. ಡಾ. ದಿಲ್ ಶಾ ಅವರು ರಚನೆ ಮಾಡಿದ ಎನ್‌ಎಸ್‌ಎಸ್ ಗೀತೆ ಸದಾ ಹಚ್ಚಹಸಿರಾಗಿದೆ. ಇಂತಹ ಗೀತೆಗಳನ್ನು ಹಾಡುವುದರಿಂದ ಮಕ್ಕಳಲ್ಲಿ ಚೈತನ್ಯ ಮೂಡುತ್ತದೆ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ. ಎ ಗೀತೆಗಳಿಗಿಂತ ಎನ್ ಎಸ್ ಎಸ್ ಗೀತೆ ತುಂಬಾ ವಿಭಿನ್ನವಾಗಿದೆ. ಪ್ರತಿಯೊಂದು ಸಾಲು ಸಾಲಿನಲ್ಲಿ ಸೇವಾ ಮನೋ ಭಾವನೆ ಬಿತ್ತುವ ಕಾರ್ಯವಾಗಿದೆ. ಅದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮನತುಂಬಿ ಹಾಡಬೇಕು ಎಂದು ತಿಳಿಸಿದರು.
ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ. ಕೆ ಎಂ ನಾಗರಾಜ್ ಅವರು ಪ್ರಸ್ತಾವಿಕವಾಗಿ ಮಾತ ನಾಡಿ, ಗೀತ ಗಾಯನ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಮೂಡಿಸು ತ್ತದೆ. ಆದರಿಂದ ಸರಿಯಾಗಿ ಅಭ್ಯಾ ಸ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊ ಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಎಟಿಎನ್‌ಸಿಸಿ ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ವಹಿಸಿ ಮಾತನಾಡಿ, ಈಗಾಗಲೇ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳನ್ನು ನಮ್ಮ ಕಾಲೇಜು ಪಡೆದುಕೊಂಡಿದೆ. ಶಿವಮೊಗ್ಗ ಜಿಯಲ್ಲಿ ಅತ್ಯುತ್ತಮ ಕಾಲೇಜು ಎಂದು ಹೆಸರುವಾಸಿ ಬೆಳೆಸಿದೆ ವಿದ್ಯಾರ್ಥಿಗ ಸಮಗ್ರ ಅಭಿವೃದ್ಧಿಗೆ ಎನ್‌ಎಸ್‌ಎಸ್ ಸಹಕಾರಿಯಾಗಿದೆ ಎಂದು ನುಡಿದರು.
ಸಮಾರಂಭದಲ್ಲಿ ಪ್ರೊಫೆಸರ್ ಜಗದೀಶ್ ಪ್ರೊಫೆಸರ್ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.