ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎನ್‌ಎಸ್‌ಎಸ್ ಪ್ರಶಸ್ತಿ ಹಂಸಗೀತೆ ಇದ್ದಂತೆ: ಡಾ.ನಾಗಭೂಷಣ

Share Below Link

ಶಿವಮೊಗ್ಗ: ಸಮಾಜ ಸೇವೆ ಎಂಬುದು ಜೀವನದಲ್ಲಿ ನಿರಂತರ ಹವ್ಯಾಸವಾಗಿರಬೇಕು ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ನಾಗಭೂಷಣ ಹೇಳಿದರು.
ತಮ್ಮ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಅತ್ಯುತ್ತಮ ಎನ್.ಎಸ್.ಎಸ್.ಕಾರ್ಯ ಕ್ರಮಾಧಿಕಾರಿ ಪ್ರಶಸ್ತಿ ಪಡೆದ ಡಾ.ಬಾಲಕೃಷ್ಣ ಹೆಗಡೆ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಮಾತನಾಡುತ್ತಿದ್ದರು.


ಮೊದಲಿನಿಂದಲೂ ತಮ್ಮ ಕಾಲೇಜಿನ ಎನ್.ಎಸ್.ಎಸ್. ಘಟಕಗಳ ಕಾರ್ಯ ಚಟುವಟಿಕೆ ಗಳಿಂದಾಗಿ ಕುವೆಂಪು ವಿವಿಯಲ್ಲಿ ತಮ್ಮ ಕಾಲೇಜಿನ ಘಟಕಕ್ಕೆ ವಿಶೇಷ ಗೌರವ, ಮನ್ನಣೆ ಇದೆ. ಅದನ್ನು ಡಾ.ಹೆಗಡೆ ಮುನ್ನಡೆಸಿಕೊಂಡು ಬಂದಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ನೂತನ ಶಿಕ್ಷಣ ನೀತಿ ಜರಿ ಯಲ್ಲಿರುವುದರಿಂದ ವಿದ್ಯಾರ್ಥಿ ಗಳು ತಮ್ಮ ದಿನ ನಿತ್ಯದ ಪಾಠ, ಪ್ರವಚನ, ಪರೀಕ್ಷೆ, ಅಸೈನಮೆಂಟ್, ಸೆಮಿನಾರ್ ತಯಾರಿ ಇತ್ಯಾದಿ ಶೈಕ್ಷಣಿಕ ಕೆಲಸಗಳ ತಲ್ಲೀನರಾಗಿ ಪಠ್ಯೇತರ ಚಟುವಟಿಕೆಗಳಾದ ಎನ್.ಎಸ್. ಎಸ್. ನಂತಹ ಸಮಾಜ ಸೇವೆಗೆ ಬರುವುದು ಕಷ್ಟಕರ ಸನ್ನಿವೇಶವೇ ಆಗಿದೆ ಎಂಬ ವಾಸ್ತವ ಅಂಶವನ್ನು ಬಿಚ್ಚಿಟ್ಟರು.
ಡಾ.ಹೆಗಡೆ ಅವರಿಗೆ ಎನ್ . ಎಸ್. ಎಸ್. ಪ್ರಶಸ್ತಿ ಹಂಸಗೀತೆ ಇದ್ದಂತೆ. ಹಂಸ ಯಾವಾಗಲೂ ಹಾಡು ಹೇಳುವು ದಿಲ್ಲ. ಯಾವಾಗ ಲಾದರೂ ಹಾಡು ಕೇಳಿದರೆ ತಾನೇ ಹಾಡು ಹೇಳಿದಷ್ಟು ಸಂತೋಶ ಪಡುತ್ತದೆ. ಹಾಗೆಯೇ ಈ ಪ್ರಶಸ್ತಿ ಸಂದಾಯವಾದರೂ ಒಮ್ಮೆ ಸಂತೋಷಪಟ್ಟು ಮತ್ತೆ ಸಮಾಜ ಸೇವೆಗೆ ಮುಂದಾಗುವ ಸ್ವಭಾವ ಅವರದ್ದು ಎಂದು ಬಣ್ಣಿಸಿದರು.
ಡಾ.ಹೆಗಡೆ ಅವರು ತಮ್ಮ ಸುದೀರ್ಘ ಕಾರ್ಯಕ್ರಮಾಧಿಕಾರಿ ಕೆಲಸದ ಅನುಭವದಿಂದ ವಿದ್ಯಾರ್ಥಿ ನಿಯರನ್ನು ಮನವೊಲಿಸಿ, ಹುರಿದುಂಬಿಸಿ ನಿರಂತರವಾಗಿ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿzರೆ. ಅವರಿಗೆ ಎನ್.ಎಸ್.ಎಸ್. ಎಂದರೆ ಒಂದು ಪ್ಯಾಷನ್, ಹವ್ಯಾಸವಾಗಿದೆ ಎಂದ ಅವರು, ವೃತ್ತಿಯಲ್ಲಿರಲಿ ಇಲ್ಲದೇ ಹೋಗಲಿ ಅವರು ಸಮಾಜ ಸೇವೆಯನ್ನು ಮುಂದುವರಿಸಿ ಕೊಂಡು ಹೋಗುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಅವರಿಗೆ ದೊರೆತ ಪ್ರಶಸ್ತಿ ಮುಂದಿನ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಸಾಧನೆ ಗೈಯಲು ಅವಕಾಶ ಕಲ್ಪಿಸಿದಂತಾಗಿದೆ. ಡಾ.ಹೆಗಡೆ ಅವರಿಗೆ ಇನ್ನೂ ಹೆಚ್ಚಿನ ಉನ್ನತ ಪ್ರಶಸ್ತಿ ಲಭಿಸಲಿ ಎಂದು ಕಾಲೇಜಿನ ಪರವಾಗಿ ಹಾರೈಸುವುದಾಗಿ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಹೆಗಡೆ, ತಾವು ಎಂದಿಗೂ ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ. ಸಮಾಜ ಸೇವೆಯೇ ಮೂಲ ಮಂತ್ರ ತಮ್ಮದು ಎಂದ ಅವರು ತಾವು ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತಳೆದಿದ್ದು, ಉಪನ್ಯಾಸಕ ವೃತ್ತಿ ಮಾಡುತ್ತಿರುವಾಗಲೂ ಅದನ್ನು ಮುಂದುವರೆಸಿಕೊಂಡು ಬಂದಿzಗಿ ತಿಳಿಸಿದರಲ್ಲದೆ ಈ ಪ್ರಶಸ್ತಿ ಬರಲು ಕೇವಲ ತಾವು ಮಾಡಿದ ಕೆಲಸಗಳಷ್ಟೇ ಅಲ್ಲ ಅದರ ಹಿಂದೆ ಪ್ರಾಚಾರ್ಯರ, ಅಧ್ಯಾಪಕರ, ಸಿಬ್ಬಂದಿಗಳ, ಎನ್.ಇ.ಎಸ್. ಆಡಳಿತ ಮಂಡಳಿ ಹಾಗೂ ವಿಶೇಷವಾಗಿ ವಿದ್ಯಾರ್ಥಿನಿ ಯರ ಸದಾ ಬೆಂಬಲ ಈ ಯಶಸ್ಸಿಗೆ ಕಾರಣ ಎಂದು ತಿಳಿಸಿದರು.
ಉಪ ಪ್ರಾಶುಪಾಲ ಡಾ. ಜಗದೀಶ ಆರ್.ಎಂ., ಪ್ರೊ| ಮಂಜುಳಾ, ಸಾಂದರ್ಭಿಕವಾಗಿ ಮಾತನಾಡಿದರು. ಪ್ರೊ| ಓಂಕರಪ್ಪ, ಪ್ರೊ| ಆಶಾಲತಾ, ಶ್ರೀಮತಿ ಅರ್ಪಿತಾ ಮೊದಲಾದವರು ಉಪಸ್ಥಿತರಿದ್ದರು. ಡಾ.ಅನ್ನಪೂರ್ಣ ಕಾರ್ಯಕ್ರಮ ನಿರ್ವಹಿಸಿದರು.