ನ.9: ಮಾನಸ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ…
ಶಿವಮೊಗ್ಗ: ಕೋಟೆ ಗಂಗೂರಿನಲ್ಲಿರುವ ಮಾನಸ ಇಂಟರ್ ನ್ಯಾಷನಲ್ ಐಸಿಎಸ್‌ಇ ಶಾಲೆಯ ವತಿಯಿಂದ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಮಕ್ಕಳ ದಿನಾಚರಣೆ ನಿಮಿತ್ತ ಜಿ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಶಾಲೆಯ ಆವರಣದಲ್ಲಿ ನ.೯ರಂದು ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆ ಯವರೆಗೆ ಆಯೋಜಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಕೆ.ವಿ. ಸೌಮ್ಯಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೬ ಹಂತಗಳಲ್ಲಿ ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಎಲ್‌ಕೆಜಿಯಿಂದ ೧೦ನೇ ತರಗತಿ ಮಕ್ಕಳು ಭಾಗವಹಿಸ ಬಹುದಾಗಿದೆ ಎಂದರು.

ಎಲ್‌ಕೆಜಿ ಮತ್ತು ಯುಕೆಜಿ ಯವರಿಗೆ ಹಾಗೂ ೧ ಮತ್ತು ೨ನೇ ತರಗತಿ ಮಕ್ಕಳಿಗೆ ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ, ೩ ಮತ್ತು ೪ನೇ ತರಗತಿ ಕಲ್ಚರಲ್ ಗಾರ್ಡನ್, ೫ ಮತ್ತು ೬ನೇ ತರಗತಿ ಮಕ್ಕಳಿಗೆ ಭೂಮಿ ಉಳಿಸಿ, ೭ ಮತ್ತು ೮ನೇ ತರಗತಿ ಮಕ್ಕಳಿಗೆ ಭಾರತೀಯ ಹಬ್ಬಗಳು ಹಾಗೂ ೯ ಮತ್ತು೧೦ನೇ ತರಗತಿ ಮಕ್ಕಳಿಗೆ ೨೦೩೦ರಲ್ಲಿ ಭಾರತ ಥೀಮ್ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದರು.
ಪ್ರವೇಶ ಶುಲ್ಕ ೧೦೦ ರೂ. ಇದ್ದು, ಪ್ರತಿ ಹಂತಕ್ಕೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗು ವುದು. ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗೆ ಮೊ. ೯೩೫೩೧ ೪೩೦೩೩ ಅಥವಾ ೯೪೮೧೨ ೬೫೪೦೫ರಲ್ಲಿ ಸಂಪರ್ಕಿಸ ಬಹುದಾಗಿದೆ ಎಂದರು.
ನ.೨೨ರಂದು ಕುವೆಂಪು ರಂಗಮಂದಿರದಲ್ಲಿ ಶಾಲೆಯ ವಾರ್ಷಿಕೋತ್ಸವ ಬೆಳಗ್ಗೆ ೯ರಿಂದ ರಾತ್ರಿ ೮ರವರೆಗೆ ನಡೆಯಲಿದ್ದು, ವಾರ್ಷಿಕೋತ್ಸವದಲ್ಲಿ ಪತ್ರಕರ್ತ ಚಂದ್ರಕಾಂತ್ ಅವರಿಗೆ ಮಾನಸ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಾರಾ ಪ್ರಕಾಶ್, ಎಂ.ವಿ. ಸವಿತಾ, ನವೀನ್ ಸಾದಿಯಾ, ಕರಿಬಸಪ್ಪ ಬಿ. ಉಪಸ್ಥಿತರಿದ್ದರು.

