ನ.೩: ಕರ್ನಾಟಕ ರಾಜ್ಯ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ
ಶಿವಮೊಗ್ಗ: ಕರ್ನಾಟಕ ರಾಜ್ಯ, ಭಾಷೆ, ಜಲ, ನೆಲ ಉಳಿಸಿ ಹೋರಾಟ ಸಮಿತಿ ವತಿಯಿಂದ ನ.೩ರ ಬೆಳಿಗ್ಗೆ ೧೦ರಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರಾಜ್ಯಮಟ್ಟದ ಕನ್ನಡ ರಾಜ್ಯೋ ತ್ಸವ ಹಾಗೂ ಕರ್ನಾಟಕ ರಾಜ್ಯ ವೀರ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜಧ್ಯಕ್ಷ ಕುಣಜೆ ಮಂಜುನಾಥ ಗೌಡ ತಿಳಿಸಿದರು.
ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ ೯ ಗಂಟೆಗೆ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡುವುದ ರೊಂದಿಗೆ ಕಾಲ್ನಡಿಗೆ ಜಥಾ ಅಂಬೇಡ್ಕರ್ ಭವನದವರೆಗೆ ನಡೆಯಲಿದೆ ಎಂದರು.
ನಂತರ ನಡೆಯುವ ಸಮಾ ರಂಭವನ್ನು ಶಿವಮೊಗ್ಗದ ವೈದ್ಯ ಕೀಯ ಮಹಾವಿದ್ಯಾಲಯದ ಅಧೀಕ್ಷಕ ಡಾ. ಟಿ.ಡಿ. ತಿಮ್ಮಪ್ಪ ಉದ್ಘಾ ಟಿಸಲಿzರೆ. ಮುಖ್ಯ ಅತಿಥಿ ಯಾಗಿ ಜಿ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಶಾಸಕರಾದ ಆರಗ eನೇಂದ್ರ, ಶಾರದಾ ಪೂರ್‍ಯಾ ನಾಯ್ಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ಡಿಸಿ.ಡಾ. ಸೆಲ್ವಮಣಿ, ಎಸ್.ಪಿ.ಮಿಥುನ್‌ಕುಮಾರ್, ನಟಿ, ಪ್ರಿಯಾಂಕ ಮಲೆನಾಡು ಹಾಗೂ ಇನ್ನಿತರರು ಆಗಮಿಸಲಿ zರೆ ಎಂದ ಅವರು, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾದನೆಗೈದ ಟೀಕಪ್ಪ ಗೌಡ್ರು, ನಾಗರಾಜ ಕಲ್ಕೊಪ್ಪ ಸೇರಿದಂತೆ ೧೨ ಸಾಧಕರಿಗೆ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗುರುರಾಜ ಕನ್ನಂಗಿ, ಪುತ್ತಬ್ಬ ಬೆಜ್ಜವಳ್ಳಿ, ಗಣಪತಿ ಹಾನಗೆರೆ, ಇಮ್ತಿಯಾಜ್ ಹಣಗೆರೆ, ಅಧ್ಯಕ್ಷ ಅರುಣ್‌ಕುಮಾರ್, ಪವಿತ್ರಾ ಉಪಸ್ಥಿತರಿದ್ದರು.