ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ನ.೨೩: ರಾಜ್ಯಮಟ್ಟದ ಆರೋಗ್ಯ ಜ್ಯೋತಿ ಅವಾರ್ಡ್…

Share Below Link

ಶಿವಮೊಗ್ಗ, : ಬೆಂಗಳೂರಿನ ರಾಘವಿ ಚಾರಿಟೇಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಶನ್ ವತಿಯಿಂದ ನೀಡಲಾ ಗುತ್ತಿರುವ ರಾಜ್ಯಮಟ್ಟದ ಆರೋಗ್ಯ ಜ್ಯೋತಿ ಅವಾರ್ಡ್ ಕರ್ನಾಟಕ -೨೦೨೫ ಕಾರ್ಯಕ್ರಮವನ್ನು ನ.೨೩ ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಸುಂಟ್ರಹಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ೨ನೇ ವರ್ಷದ ಕಾರ್ಯಕ್ರಮವಾಗಿದ್ದು, ಆರೋಗ್ಯ ಕ್ಷೇತ್ರದ ವಿವಿಧ ೪೦ಕ್ಕೂ ಹೆಚ್ಚು ವಿಭಾಗಗಳಲ್ಲಿನ ವೈದ್ಯರು, ಶುಶ್ರೂಷಕರು, ಫಾರ್ಮಸಿಸ್ಟ್, ತಂತ್ರಜ್ಞರು, ಬ್ಲಡ್ ಬ್ಯಾಂಕ್, ಡಯಲಿಸಿಸ್, ಎಕ್ಸ್‌ರೇ ಹೀಗೆ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆ ಮಾಡಿದ ೧೦೦ ಜನರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.


ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ನ.೧೦ ಕಡೆ ದಿನವಾಗಿದೆ. ಆನ್‌ಲೈನ್‌ನಲ್ಲಿ ಬಂದ ಅರ್ಜಿ ಗಳನ್ನು ಅನ್‌ಬಾಕ್ಸ್ ಮಾಡಿ ೧೦೦ ಜನರನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣಬೇಳೂರು, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಸಿನಿಮಾ ತಾರೆಯರಾದ ಸುಧಾರಾಣಿ, ಮೇಘನಾರಾಜ್, ವಿವಿಧ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರು ಪಾಲ್ಗೊಳ್ಳಲಿzರೆ ಎಂದರು.
ಪ್ರಮುಖರಾದ ಯೋಗೇಶ್ ಹಿರಿಅರ್ಕ, ಹೊದಲ ಶಿವು, ಮೋಹನ್ ಸಿಂಧುವಾಡಿ ಇದ್ದರು.