ನ.೨೨: ನಮ್ಮ ಸಹ್ಯಾದ್ರಿ – ನಮ್ಮ ಹೆಮ್ಮೆ ವಿಶೇಷ ಕಾರ್‍ಯಕ್ರಮ…
ಶಿವಮೊಗ್ಗ: ಸಹ್ಯಾದ್ರಿ ವಿeನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನ.೨೨ರ ಬೆಳಗ್ಗೆ ೧೦ರಿಂದ ಕಾಲೇಜಿನ ಸಭಾಂಗಣದಲ್ಲಿ ನಮ್ಮ ಸಹ್ಯಾದ್ರಿ, ನಮ್ಮ ಹೆಮ್ಮೆ-೨೦೨೫ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಪ್ರೊ. ರಾಜೇಶ್ವರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೪೧ರಲ್ಲಿ ಆರಂಭವಾದ ಸಹ್ಯಾದ್ರಿ ಕಾಲೇಜು ಮಲೆನಾಡು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ಬರುತ್ತಿದೆ. ಕಾಲೇಜಿಗೆ ಈಗ ೮೦ರ ಹರೆಯ. ನಾಡಿನ ಸಾಸ್ಕೃತಿಕ ನಗರಿ ಎಂದೇ ಪ್ರಸಿದ್ಧ ವಾದ ಶಿವಮೊಗ್ಗದ ಈ ವಿದ್ಯಾಕೇಂದ್ರಕ್ಕೆ ಸಹ್ಯಾದ್ರಿ ಎಂದು ಹೆಸರಿಟ್ಟವರು ರಾಷ್ಟ್ರಕವಿ ಕುವೆಂಪು ಎಂದರು.
೧೯೮೪ರಲ್ಲಿ ಸಹ್ಯಾದ್ರಿ ಕಲಾ ಕಾಲೇಜ್ ಮತ್ತು ಸಹ್ಯಾದ್ರಿ ವಿeನ ಕಾಲೇಜ್ ಎಂದು ಎರಡು ಬೇರೆ ಬೇರೆ ಕಾಲೇಜುಗಳಾಗಿ ವಿಭಜನೆ ಗೊಂಡಿತು. ನಂತರ ಕುವೆಂಪು ವಿವಿ ಘಟಕ ಕಾಲೇಜುಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ವಿeನ ಕಾಲೇಜ್ ಸ್ವಾಯತ್ತ ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೨೦೧೨ರಲ್ಲಿ ಕುವೆಂಪು ವಿವಿ ಈ ಸಂಸ್ಥೆಯನ್ನು ಸಂಶೋಧನಾ ಕೇಂದ್ರ ಎಂದು ಪರಿಗಣಿಸಿದ್ದು, ಸದ್ಯಕ್ಕೆ ನೂರಾರು ಸಂಶೋಧನಾರ್ಥಿಗಳು ಅಧ್ಯಯನ ವನ್ನು ಕಾಲೇಜಿನ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಕೈಗೊಂಡಿ zರೆ. ೧೯೯೨ರಲ್ಲಿ ಕಾಲೇಜಿನ ವಜ್ರ ಮಹೋತ್ಸವ ಸಮರಾಂಭ ನಡೆಯಿತು ಎಂದರು.

ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಉನ್ನತ ಹುz ಹಾಗೂ ಸ್ವಂತ ಉದ್ಯಮ ನಡೆಸುತ್ತಿದ್ದು, ಇವರೆಲ್ಲರ ಒತ್ತಾಸೆ ಯಂತೆ ಸಂಘವನ್ನು ಸ್ಥಾಪಿಸಿದ್ದು, ಈ ಕಾರ್ಯಕ್ರಮವನ್ನು ಸಾಂಸ್ಕತಿಕ ಮತ್ತು ಕ್ರೀಡಾ ಚಟುವಟಿಕೆಗಳ ನಡೆಸುವುದರ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ ಮೂರ್ತಿ ಉದ್ಘಾಟಿಸಲಿzರೆ ಎಂದ ಅವರು, ಈ ಕಾರ್ಯಕ್ರಮಕ್ಕೆ ಆಗಮಿಸುವ ಹಳೆ ವಿದ್ಯಾರ್ಥಿಗಳು ಪರಮೇಶ್ -೯೯೮೬೫ ೦೬೧೬೬, ಸುರೇಶ್- ೯೭೩೧೩ ೯೮೩೩೬, ಡಾ. ನಾಗರಾಜ್ ಪರಿಸರ -೯೯೦೧೭ ೯೮೯೯೯ ರಲ್ಲಿ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ್ ಪರಿಸರ, ಪರಮೇಶ್, ಉಮೇಶ್ ಶಾಸ್ತ್ರಿ, ನಾಗರಾಜ್ ನೇರಿಗೆ, ಶಶಿಕುಮಾರ್, ಸನತ್ ಉಪಸ್ಥಿತರಿದ್ದರು.
