ನ.೧೮ಮತ್ತು೧೯: ರೋಟರಿ ವಲಯ ಮಟ್ಟದ ಕ್ರೀಡಾಕೂಟ …
ಶಿವಮೊಗ್ಗ: ನ.೧೮ ಮತ್ತು ೧೯ ರಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಮುಂದಾಳತ್ವದಲ್ಲಿ ರೋಟರಿ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ರೋಟರಿ ವಲಯ ೧೧ರ ಸಹಾಯಕ ಗವರ್ನರ್ ರವಿ ಕೋಟೋಜಿ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಸೇವಾ ಸಂಸ್ಥೆ ಆಗಿದ್ದು, ರೋಟರಿ ಸದಸ್ಯರಿಗೆ ಶಿವಮೊಗ್ಗ ನಗರದಲ್ಲಿ ವಲಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗು ತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಅಧ್ಯಕ್ಷ ಗಣೇಶ್ ಎಂ.ಅಂಗಡಿ ಮಾತ ನಾಡಿ, ನ.೧೮ ರಂದು ನೆಹರು ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂ ಟನ್, ಚೆಸ್, ಕೇರಂ, ಟೇಬಲ್ ಟೆನ್ನಿಸ್ ನಡೆಯಲಿದೆ. ನ. ೧೯ ರಂದು ಕೃಷಿ ಕಾಲೇಜಿನ ಕ್ರೀಡಾ ಂಗಣದಲ್ಲಿ ಕ್ರಿಕೆಟ್ ವಾಲಿಬಾಲ್, ಥ್ರೋಬಾಲ್, ಟಗ್ ಆಫ್ ವಾರ್ ನಡೆಯಲಿದೆ. ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಲಿzರೆ ಎಂದರು.
ರೋಟರಿ ಶಿವಮೊಗ್ಗ ಪೂರ್ವ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್ ಮಾತನಾಡಿ, ಕ್ರೀಡಾ ಕೂಟದಲ್ಲಿ ಸದಸ್ಯರು ಒಟ್ಟುಗೂ ಡಿಸಲು ಸಹಕಾರಿಯಾಗುತ್ತದೆ. ವಿಜೇತರಾದವರು ಜಿ ಮಟ್ಟ ದಲ್ಲಿ ಭಾಗವಹಿಸಲು ಅವಕಾಶ ವಿದೆ. ಕ್ರೀಡಾಕೂಟದಲ್ಲಿ ೧೫ಕ್ಕಿಂತ ಹೆಚ್ಚಿನ ಕ್ಲಬ್‌ಗಳು ೩೦೦ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವರು ಎಂದು ತಿಳಿಸಿದರು.
ವಲಯ ೧೦ರ ಸಹಾಯಕ ಗವರ್ನರ್ ರಾಜೇಂದ್ರ ಪ್ರಸಾದ್, ವಲಯ ಸೇನಾನಿ ಧರ್ಮೇಂದ್ರ ಸಿಂಗ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ, ಕಾರ್‍ಯದರ್ಶಿ ಕಿಶೋರ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.