ನ.14: ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಪಪೂ ಕಾಲೇಜು – ಪ್ರೌಢ ಶಾಲಾ ವಿದ್ಯಾರ್ಥಿಗಳ ಅಣುಕು ಯುವ ಸಂಸತ್
ಶಿವಮೊಗ್ಗ : ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸಕ ರಚನೆ ಇಲಾಖೆ ಹಾಗೂ ಕಾರ್ಯಕ್ರಮದ ಆತಿಥ್ಯ ವಹಿಸಿ ಕೊಂಡಿರುವ ಆರ್ಯ ವಿeನ ಪಪೂ ಕಾಲೇಜು ಆಶ್ರಯದಲ್ಲಿ ಪ್ರಸಕ್ತ ಸಾಲಿನ ಪಪೂ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಅಣುಕು ಸಂಸತ್ ಸ್ಪರ್ಧೆಯನ್ನು ನ.೧೪ರಂದು ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಆಯೋಜಿಸಲು ಉzಶಿಸಲಾಗಿದೆ ಎಂದು ಜಿಪಂ ಸಿಇಓ ಹೇಮಂತ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪದವಿ ಪೂರ್ವ ವಿಭಾಗದ ಸ್ಪರ್ಧೆಯು ಶಿವಮೊಗ್ಗ ಮಹಾ ನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಹಾಗೂ ಪ್ರೌಢಶಾಲಾ ಮಟ್ಟದ ಸ್ಪರ್ಧೆಯು ಜಿಪಂ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನ.೧೪ರ ಬೆಳಿಗ್ಗೆ ೯ರಿಂದ ನಡೆಯಲಿದೆ. ಈ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಅಂದು ಮಧ್ಯಾಹ್ನ ೨.೩೦ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ವಿವರಿಸಿದರು.
ರಾಜ್ಯದ ಎ ಜಿಗಳಲ್ಲಿ ಆಯೋಜಿಸಲಾದ ಪಪೂ ಮತ್ತು ಪ್ರೌಢಶಾಲೆಗಳ ಯುವಸಂಸತ್ ಸ್ಪರ್ಧೆಯಲ್ಲಿ ವಿಜೇತರಾದ ೩೦ ಜಿಗಳಿಂದ ತಲಾ ಈರ್ವ ವಿಜೇತ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಪಪೂ ಕಾಲೇಜು ವಿಭಾಗದಲ್ಲಿ ೬೪ ವಿದ್ಯಾರ್ಥಿಗಳು, ೩೨ ಮಂದಿ ಮೇಲ್ವಿಚಾರಕರು, ಪ್ರೌಢಶಾಲಾ ವಿಭಾಗದಲ್ಲಿ ರಾಜ್ಯದ ಎ ಜಿಗಳಿಂದ ೭೦ ವಿದ್ಯಾರ್ಥಿಗಳು, ೩೫ ಮಂದಿ ಮೇಲ್ವಿಚಾರಕರು ಹಾಗೂ ಪೋಷಕರು ಸೇರಿದಂತೆ ಒಟ್ಟು ೨೦೦ ಜನ ಆಗಮಿಸಲಿzರೆ. ಕಾರ್ಯಕ್ರಮದ ಹಿಂದಿನ ದಿನ ಸಂಜೆ ನಗರಕ್ಕೆ ಆಗಮಿಸುವ ಸ್ಪರ್ಧಾಳುಗಳು, ಪೋಷಕರು ಹಾಗೂ ಮೇಲ್ವಿಚಾರಕರಿಗಾಗಿ ಊಟೋಪಹಾರ ಮತ್ತು ವಸತಿ ಸೌಲಭ್ಯ ಒದಗಿಸಲು ಉzಶಿಸಲಾ ಗಿದೆ. ಅಲ್ಲದೇ ಅದರ ವ್ಯವಸ್ಥಿತ ಉಸ್ತುವಾರಿಗಾಗಿ ವಿವಿಧ ಸಮಿತಿ ಗಳನ್ನು ರಚಿಸಲಾಗಿದ್ದು, ಸಮಿತಿಯ ಜವಾಬ್ದಾರಿಯುತ ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿಯ ಹೊಣೆ ನೀಡಲಾಗಿದೆ ಎಂದರು.
ಸಮಾರೋಪ ಸಮಾರಂಭ ವನ್ನು ಜಿ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಡಾ.ಎಚ್.ಕೆ. ಪಾಟೀಲ್ ಅವರು ಉದ್ಘಾಟಿಸ ಲಿದ್ದು, ಶಾಸಕರಾದ ಬಿ.ಕೆ. ಸಂಗಮೇಶ್ವರ, ಬೇಳೂರು ಗೋಪಾಲ ಕೃಷ್ಣ ಉಪಸ್ಥಿತರಿರು ವರು. ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಗಣ್ಯರು ಅತಿಥಿಗಳಾಗಿರುತ್ತಾರೆ ಎಂದರು.
ಕೆಸಿಇಟಿ-ನೀಟ್ ಪರೀಕ್ಷಾ ಪೂರ್ವಸಿದ್ಧತಾ ಉಚಿತ ತರಬೇತಿ:
ಇದೇ ಕಾರ್ಯಕ್ರಮದ ವೇದಿಕೆ ಯಲ್ಲಿ ಶಿವಮೊಗ್ಗ ಜಿಯ ಸರ್ಕಾರಿ ಪಪೂ ಕಾಲೇಜುಗಳ ವಿeನ ಸಂಯೋಜನೆಯ ವಿದ್ಯಾರ್ಥಿಗಳಿಗೆ ಕೆಸಿಇಟಿ-ನೀಟ್ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆಯೂ ನಡೆಯಲಿದೆ ಎಂದ ಅವರು, ಪ್ರತಿ ತಿಂಗಳ ೨ನೇ ಶುಕ್ರವಾರಗಳಂದು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಾಗೂ ೪ನೇ ಶನಿವಾರಗಳಂದು ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಜಿಯ ೩೩ ಪಪೂ ಕಾಲೇಜುಗಳಲ್ಲಿ ಅಭ್ಯಾಸ ಪರೀಕ್ಷೆ ನಡೆಸಲಾಗು ವುದು. ವಾರ್ಷಿಕ ಪರೀಕ್ಷೆಯ ನಂತರದಲ್ಲಿ ಪೂರ್ಣ ಪಠ್ಯಕ್ರಮಕ್ಕೆ ನೀಟ್ ಮಾದರಿಯಲ್ಲಿ ಅಣುಕು ಪರೀಕ್ಷೆಗಳು ನಡೆಯಲಿವೆ. ಇದರೊಂದಿಗೆ ಕಾಲೇಜು, ತಾಲೂಕು ಮತ್ತು ಜಿ ಮಟ್ಟದಲ್ಲಿ ರ್‍ಯಾಂಕ್ ಪ್ರಕಟಿಸಿ, ಉತ್ತಮ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲು ಉzಶಿಸಲಾ ಗಿದೆ. ನ.೧೫ರಂದು ಮೊದಲ ಪರೀಕ್ಷೆ ನಡೆಸಲು ಎ ರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಪಪೂ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ, ಡಯಟ್ ಉಪನಿರ್ದೇಶಕಿ ಶ್ರೀಮತಿ ಬಿಂಬಾ ಕೆ.ಆರ್., ಡಿಡಿಪಿಐ ಮಂಜುನಾಥ್ ಎಸ್.ಆರ್, ಆರ್ಯ ಪಿ.ಯು. ಕಾಲೇಜಿನ ಕಾರ್ಯದರ್ಶಿ ರಮೇಶ್, ಬಿಇಓ ರಮೇಶ್, ಡಯಟ್ ಹಿರಿಯ ಉಪನ್ಯಾಸಕ ಹರಿಪ್ರಸಾದ್ ಮತ್ತಿತರರಿದ್ದರು.