ಬರ ಪರಿಹಾರ ಸೇರಿದಂತೆ ಸರ್ಕಾರದ ಸೌಲಭ್ಯಕ್ಕಾಗಿ ಎಫ್‌ಐಡಿ ನೋಂದಣಿ ಮಾಡಿಸಲು ರೈತರಿಗೆ ಸೂಚನೆ
ಯಲಬುರ್ಗಾ: ಸರ್ಕಾರ ದಿಂದ ದೊರೆಯುವ ಬರ ಪರಿಹಾರ, ಬೆಳೆ ವಿಮೆ ಅದು ಇನ್ನಿತರ ಸೌಲಭ್ಯಕ್ಕಾಗಿ ಎಫ್‌ಐ ಡಿ ಕಡ್ಡಾಯವಾಗಿದ್ದು ಪ್ರತಿಯೊಬ್ಬರು ಎಫ್ ಐ ಡಿ ನೊಂದಣಿ ಮಾಡಿಸಿ ಕೊಳ್ಳುಮಂತೆ ಕೃಷಿ ಸಹಾಯಕ ನಿರ್ದೇಶಕ ಪ್ರಾಣೇಶ್ ಹಾದಿಮನಿ ಹೇಳಿದರು.
ಯಲಬುರ್ಗಾ ತಾಲೂಕಿನ ೬೯೩೦೨, ಕುಕನೂರು ತಾಲೂಕಿನ ೫೪, ೧೧೨ ರೈತರ ತಾಲೂಕುಗಳು ಭೂಮಿ ಪ್ರಕಾರ ದಾಖಲಾಗಿರು ತ್ತವೆ. ಅವುಗಳಲ್ಲಿ ಯಲಬುರ್ಗಾ ತಾಲೂಕಿನ ೪೯,೧೮೭ ರೈತರ ತಾಕುಗಳು ಹಾಗೂ ಕುಕುನೂರು ತಾಲೂಕಿನ ೩೯೮೯೯ ರೈತರ ತಾಲೂಕುಗಳ ಎಫ್ ಐ ಡಿ ಗೆ ಜೋಡಣೆಯಾಗಿದ್ದು, ಯಲಬುರ್ಗಾ ತಾಲೂಕಿನ ೨೦೧೧೨ ಹಾಗೂ ಕುಕುನೂರು ತಾಲೂಕಿನ ೧೪೨೧೩ ರೈತರ ತಾಲೂಕುಗಳು ಎಫ್‌ಐ ಡಿ ಗೆ ಜೋಡಣೆಯಾಗುವುದು ಬಾಕಿ ಇರುತ್ತದೆ ಎಂದರು.
೨೦೨೩ ಹಾಗೂ ೨೪ನೇ ಸಾಲಿನಲ್ಲಿ ಮುಂಗಾರು ಹಂಗಾಮಿ ನಲ್ಲಿ ಬರ ಪರಿಹಾರಕ್ಕಾಗಿ ಈ ಎ ರೈತರು ತಮ್ಮ ತಾಲೂಕುಗಳು ಎಫ್ ಐ ಡಿ ಗೆ ಜೋಡಣೆ ಮಾಡುವುದು ಅತಿ ಅವಶ್ಯಕವಾಗಿದ್ದು, ಪರ ಪರಿಹಾರವಲ್ಲದೆ ಬ್ಯಾಂಕುಗಳಲ್ಲಿ ಸಾಲದ ಸೌಲಭ್ಯ ಪಡೆಯಲು, ಬೆಳೆ ವಿಮೆ ಪಡೆಯಲು, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು, ಕಂದಾಯ, ಪಶುಸಂಗೋಪನೆ, ಮೀನುಗಾರಿಕೆ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ಯೋಜನೆಯ ಲಾಭ ಪಡೆಯಲು ಎಫ್ ಐ ಡಿ ಅತಿ ಅವಶ್ಯಕವಾಗಿದ್ದು. ಎಫ್ ಐ ಡಿ ಮಾಡಿಸದೆ ಇರುವ ರೈತರು ಬರ ಪರಿಹಾರ ಹಾಗೂ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಯಿದ್ದು ರೈತರು ತಮ್ಮ ಎ ತಾಕುಗಳನ್ನು ಎಫ್‌ಐ ಡಿ ಗೆ ಜೋಡಣೆ ಮಾಡಿಸಿ ಸರ್ಕಾರದ ಲಾಭ ಪಡೆಯುವಂತೆ ತಿಳಿಸಿರುತ್ತಾರೆ.