ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಗೆಲುವು ನಿಶ್ಚಿತ: ಶ್ರೀಕಾಂತ್…

Share Below Link

ಶಿವಮೊಗ್ಗ: ರಾಷ್ಟ್ರೀಯತೆ ಮತ್ತು ಹಿಂದುತ್ವದ ಹಿನ್ನಲೆಯಲ್ಲಿ ನೈರುತ್ಯ ಪದವೀಧರ ಕೇತ್ರದಿಂದ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಗೆದ್ದೇ ಗೆಲ್ಲುತ್ತಾರೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖ ಶ್ರೀಕಾಂತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡುತ್ತೇವೆ ಎಂದ ಬಿಜೆಪಿ ಕೊನೆಗೆ ಕೈಕೊಟ್ಟಿದೆ. ಸಂಘ ಪರಿವಾರದವರನ್ನು ಹಿಂದುತ್ವ ವಾದಿಗಳನ್ನು ಬಿಜೆಪಿ ಪಕ್ಷ ಕಡೆಗಾಣಿಸುತ್ತಿದೆ. ಇದಕ್ಕೆ ಕೆ.ಎಸ್. ಈಶ್ವರಪ್ಪನವರು ಕೂಡ ಸಾಕ್ಷಿಯಾಗಿ zರೆ. ಈಗ ಸಮಾನ ಮನಸ್ಕರಾದ ಇಬ್ಬರು ಬಿಜೆಪಿಯನ್ನು ಶುದ್ಧೀಕರಣ ಗೊಳಿಸುವ ಹಿನ್ನಲೆಯಲ್ಲಿ ಲೋಕಸಭೆಯಂತೆಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಕೂಡ ರಾಷ್ಟ್ರೀಯತೆ ಹಿಂದುತ್ವವನ್ನೇ ಮುಖ್ಯವಾಗಿಟ್ಟುಕೊಂಡು ಚುನಾವಣೆಗೆ ಸ್ಪರ್ಧೆ ಮಾಡಲಾಗಿದೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರ ದಿಂದ ಸ್ಪರ್ಧಿಸಿರುವ ಉಡುಪಿಯ ರಘುಪತಿ ಭಟ್ ಆ ಭಾಗದಲ್ಲಿ ಅತ್ಯಂತ ಜನಪ್ರಿಯರಾಗಿzರೆ. ಅವರ ಪರವಾಗಿ ಕೆ.ಎಸ್. ಈಶ್ವರಪ್ಪ ನವರು ಈಗಾಗಲೇ ಹಲವು ತಂಡಗಳನ್ನು ರಚಿಸಿ ನೈರುತ್ಯ ಕ್ಷೇತ್ರದ ಎ ಜಿಗಳಲ್ಲೂ ಪ್ರಚಾರ ಮಾಡುತ್ತಿzರೆ. ರಘುಪತಿ ಭಟ್ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ವಿದೆ. ಅವರು ಯಾವುದೇ ಜತಿ, ಜನಾಂಗದ ಪರವಾಗಿ ಇಲ್ಲ. ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿzರೆ. ಖಂಡಿತ ಅವರು ಗೆಲ್ಲುತ್ತಾರೆ ಎಂದರು.
ಶಿವಮೆಗ್ಗ ನಗರವೊಂದ ರಲ್ಲಿಯೇ ಸುಮಾರು ೧೦ ಸಾವಿರ ಪದವೀಧರ ಮತದಾರರಿzರೆ. ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಈಗಾಗಲೇ ಮನೆ ಮನಗೆ ತಲುಪಿ ಮತಯಾಚಿಸುತ್ತಿ zರೆ. ಅವರ ವಿಚಾರಧಾರೆಗಳು ಪ್ರತಿಯೊಬ್ಬ ಮತದಾರನಿಗೂ ಇಷ್ಟವಾಗಿವೆ. ಸಂಘ ಪರಿವಾರದ ವರು ಬಿಜೆಪಿ ಕಾರ್ಯಕರ್ತರು ಕೂಡ ರಘುಪತಿ ಭಟ್ ಅವರಿಗೆ ಬೆಂಬಲ ನೀಡುತ್ತಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, ಬಿಜೆಪಿಯ ಅಭ್ಯರ್ಥಿ ಹಣ, ಹೆಂಡ ಹಂಚುವ ಮೂಲಕ ಚುನಾವಣೆಯಲ್ಲಿ ಅಕ್ರಮ ಎಸಗುತ್ತಿzರೆ. ಆಯೋಗ ಇದನ್ನು ಗಮನಿಸಬೇಕಾಗಿದೆ. ಪ್ರeವಂತ ಮತದಾರರನ್ನೇ ಈ ವ್ಯಕ್ತಿ ದಿಕ್ಕು ತಪ್ಪಿಸುತ್ತಿzರೆ. ಇಂತಹ ಸನ್ನಿವೇಶ ಬಿಜೆಪಿಯಲ್ಲಿ ಎಂದೆಂದೂ ಆಗಿರ ಲಿಲ್ಲ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗನ್ನಿ ಶಂಕರ್, ಸುವರ್ಣಾ ಶಂಕರ್, ಬಾಲು, ಸೋಗಾನೆ ರಮೇಶ್, ಶಂಕರ್, ಇದ್ದರು.