ಜಿಲ್ಲಾ ಸುದ್ದಿತಾಜಾ ಸುದ್ದಿ

ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲಲು ಸಾಧ್ಯವಿಲ್ಲ…

Share Below Link

ಶಿವಮೊಗ್ಗ : ಜನಶಕ್ತಿಯ ಮುಂದೆ ಯಾವುದೇ ಶಕ್ತಿ ನಿಲ್ಲಲಾಗ ದಂತಹ ಅದ್ಭುತ ಪ್ರಜತಂತ್ರ ವ್ಯವಸ್ಥೆ ಭಾರತದಾಗಿದೆ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ೭೭ನೇ ಸ್ವಾತಂತ್ರ ದಿನಾಚರಣೆ ಕಾರ್ಯ ಕ್ರಮವನ್ನು ಧ್ವಜರೋಹಣಗೊಳಿಸಿ ಮಾತನಾಡಿದ ಅವರು, ವಿಶ್ವದ ಅತಿ ದೊಡ್ಡ ಜನಶಕ್ತಿ ಹೊಂದಿರುವ ರಾಷ್ಟ್ರ ಭಾರತ. ಇದರ ಜೊತೆಯಲ್ಲಿ ಪ್ರಬಲವಾದ ಪ್ರಜತಂತ್ರ ವ್ಯವಸ್ಥೆ ಯಿದೆ. ಲೋಕಸಭೆಯಿಂದ ಗ್ರಾಮ ಪಂಚಾಯತಿವರೆಗೆ ಕಾಲಕಾಲಕ್ಕೆ ಚುನಾವಣೆಗಳು ನಡೆಯುತ್ತಿರುವು ದರ ಮೂಲಕ ಪಟ್ಟಣದಿಂದ ಗ್ರಾಮೀಣ ಭಾಗದವರೆಗಿನ ಅಭಿವೃದ್ಧಿಗಳಿಗೆ ಪೂರಕವಾದ ಎ ಅಂಶಗಳು ಅತ್ಯದ್ಭುತವಾಗಿ ನಡೆಯುತ್ತಿದೆ ಎಂದರು.


ದೇಶದ ಸ್ವಾತಂತ್ರಕ್ಕಾಗಿ ಮಡಿದವರ ತ್ಯಾಗ ಬಲಿದಾನ ನೀಡಿದವರನ್ನು ಸ್ಮರಿಸಿಕೊಳ್ಳಬೇಕಾ ದದ್ದು ನಮ್ಮ ಆದ್ಯತೆಯ ಕರ್ತವ್ಯ. ೭೭ ವರ್ಷಗಳಲ್ಲಿ ದೇಶ ಅನೇಕ ಅಭಿವೃದ್ಧಿ ಪಥಗಳನ್ನು ಕಂಡಿದೆ. ಹಸಿರು, ವಿeನ, ರಕ್ಷಣೆ, ಶಿಕ್ಷಣ ಸೇರಿದಂತೆ ಎ ರಂಗಗಳಲ್ಲಿ ಕ್ರಾಂತಿಯನ್ನು ಸಾಧಿಸಿದೆ ಎಂದರು.
ಇಂದಿನ ಬದಲಾದ ಕಾಲ ಮಾನದಲ್ಲಿ ರಾಜಕಾರಣದ ಮೂಲ ಗುರಿ ಅಧಿಕಾರವಾಗಿದೆ. ರಾಜಕಾರಣದ ಮುಂದೆ ಸಾಮಾಜಿಕ ಮೌಲ್ಯಗಳನ್ನು ಕಳೆದು ಕೊಂಡಿದ್ದು, ಗುಣಮಟ್ಟದ ನಾಯಕತ್ವದ ಕೊರತೆ ಇದೆ. ಇಂದು ನಮಗೆ ಆರೋಗ್ಯವಂತ ರಾಜಕೀಯ ವ್ಯವಸ್ಥೆ ಬೇಕಾಗಿದೆ. ಆಡಳಿತ ನಡೆಸುವವರಲ್ಲಿ ಮತ್ಸರ ತನಕ್ಕಿಂತ ಮುತ್ಸದ್ದಿತನಬೇಕಾಗಿದೆ ಎಂದರಲ್ಲದೇ, ನಿಸ್ವಾರ್ಥ ಆಡಳಿತವಿರುವ ಕಡೆ ಭಯ ಭಕ್ತಿ ಸದಾ ಇರುತ್ತದೆ. ಕೃತಕವಾಗಿ ನಿರ್ಮಾಣವಾಗುವ ಭಯ ಭಕ್ತಿ ಕ್ಷಣಿಕ ಮಾತ್ರ. ವ್ಯಕ್ತಿಯ ಆಕರ್ಷಣೆ ಬೇಗ ಅಳಿಯುತ್ತೆ, ವ್ಯಕ್ತಿತ್ವದ ಆದರ್ಶ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅಂತಹ ಆದರ್ಶ ಯುತ ಸಮಾಜ ನಿರ್ಮಾಣ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಎನ್‌ಇಎಸ್ ಉಪಾಧ್ಯಕ್ಷ ಸಿ.ಆರ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್, ಖಜಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಹೆಚ್.ಸಿ. ಶಿವಕುಮಾರ್, ಮಧು ರಾವ್, ಎನ್.ಟಿ. ನಾರಾಯಣ ರಾವ್, ಎಂ.ಜಿ. ರಾಮಚಂದ್ರ ಮೂರ್ತಿ, ಅಜೀವ ಸದಸ್ಯರಾದ ಆನಂದ್, ಗುರುಪ್ರಸಾದ್, ಕಿಶೋರ ಶೀರನಾಳಿ, ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.