ಶಕ್ತಿ ದೇವತೆಯ ಒಂಭತ್ತು ದಿನಗಳ ಸಂಭ್ರಮ …
ಸಾಗರ : ಶಕ್ತಿ ದೇವತೆಗಳೆಂದೇ ಹೇಳಲಾಗುವ ದುರ್ಗೆ, ದೇವಿ ಸೇರಿದಂತೆ ವಿವಿಧ ನಾಮಗಳಲ್ಲಿ ಪೂಜಿಸಲ್ಪಡುತ್ತಿರುವ ದೇವಸ್ಥಾನಗಳಲ್ಲಿ ಇಂದಿನಿಂದ ಒಂಭತ್ತು ದಿನಗಳ ಪರ್ಯಂತ ಸಂಭ್ರಮ ಮನೆ ಮಾಡಿದೆ. ದೇವಿ ಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಧನ್ಯರಾಗುವ ಪರ್ವಕಾಲದಲ್ಲಿ ಭಕ್ತರ ಸಮೂಹವಿದೆ.

ಸಾಗರದಲ್ಲಿ ಮಾರಿಕಾಂಬೆ, ಶೃಂಗೇರಿ ಶಾರದಾಂಬಾ, ಗಂಗಾ ಪರಮೇಶ್ವರಿ, ಭಗವತಿ ದೇವಿ, ಭದ್ರಕಾಳಿ, ವರದಳ್ಳಿಯ ವನ ದುರ್ಗಾಂಬಾ ದೇವಿ, ಸಿಗಂದೂರು ಶ್ರೀ ಚೌಡೇಶ್ವರಿ, ಸಿರಿವಂತೆಯ ಕೋಟೆ ದುರ್ಗಾಂಬಾ ದೇವಿ ಮುಂತಾದ ಕಡೆಗಳಲ್ಲಿ ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನವೂ ವಿಶೇಷ ಪೂಜೆ, ವಿಶೇಷ ಅಲಂಕಾರ, ಸಪ್ತಶತಿ ಪಾರಾಯಣ, ವಿವಿಧ ಹವನಗಳು, ಕುಂಕುಮಾರ್ಚನೆ, ಅಷ್ಟಾವಧಾನ ಸೇವೆ, ಭಜನೆ, ಭಕ್ತರಿಗೆ ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮ ಗಳು ನವರಾತ್ರಿ ದಿನಗಳಲ್ಲಿ ಎಡೆ ನಡೆಯಲಿವೆ. ದುರ್ಗಾಷ್ಟಮಿ, ವಿಜಯದಶಮಿ ವಿಶೇಷವಾಗಿ ಆಚರಿಸಲ್ಪಡುತ್ತದೆ.
ಹಬ್ಬ ಹರಿದಿನಗಳ ಸಾಲಿನಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ವಿಶೇಷವಾಗಿ ಮಹಿಳೆಯರಿಗೆ ನವರಾತ್ರಿಯ ಸಂಭ್ರಮ ಇನ್ನಷ್ಟು ಮೆರಗು ತಂದಿದೆ. ನಿನ್ನೆ ಸಿರಿವಂತೆಯ ಶ್ರೀ ದುಗಾಂಬಾ ದೇವಿ ದೇವಸ್ಥಾನ ದಲ್ಲಿ ಅಲ್ಲಿನ ಆಡಳಿತ ಸಮಿತಿ ಅಧ್ಯಕ್ಷರೂ ಆಗಿರುವ ಎಚ್.ಎನ್. ಉಮೇಶ್ ಅವರು ದೇವಿಗೆ ಸಪ್ತಶತಿ ಪಾರಾ ಯಣ ಸೇವೆ ಸಲ್ಲಿಸಿ ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ಆತಿಥ್ಯ ನೀಡಿದರು.


