ಜಿಲ್ಲಾ ಸುದ್ದಿತಾಜಾ ಸುದ್ದಿ

ಪತ್ರಿಕೆಗಳು ಜನಸೇವೆಯ ಜೊತೆಗೆ ಜನರ ಅಹವಾಲುಗಳಿಗೆ ಸ್ಪಂದಿಸಬೇಕು

Share Below Link

ಸಾಗರ: ಪತ್ರಿಕೆಗಳು ಜನಸೇವೆಯ ಜೊತೆಗೆ ಜನರ ಅಹವಾಲುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ ಮತ್ತು ತಾಲ್ಲೂಕು ಕಾರ್ಯರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪತ್ರಿಕಾ ವಿತರಕರಿಗೆ ಸೈಕಲ್, ರಿಫ್ಲ್ಲೆಕ್ಟ್ ಜಕೇಟ್ ವಿತರಿಸಿ, ಹಾಗೂ ಹಿರಿಯ ಪತ್ರಕರ್ತರನ್ನು ಸನ್ಮಾಸಿ ಅವರು ಮಾತನಾಡಿ, ಪತ್ರಿಕೆಗಳು ವಾಸ್ತವ ಸಂಗತಿಗಳನ್ನು ತಿಳಿಸಿದಾಗ ಜನರ ನಂಬಿಕೆ, ವಿಶ್ವಾಸ ಗಳಿಸಲು ಸಾಧ್ಯ ಎಂದರು.
ಪತ್ರಿಕಾ ವಿತರಕರು ಬಹಳ ಜಗ್ರತೆಯಿಂದ ವಿತರಣಾ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಮ್ಮನ್ನು ನಂಬಿ ಮ್ಮ ಕುಟುಂಬ ಇರುತ್ತದೆ ಎಂಬ ಪ್ರe ಇರಬೇಕು. ಆಕಸ್ಮಿಕ ಅವಘಡ ಸಂಭವಿಸಿದರೆ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇಂಥವರಿಗೆ ೧೦ ಲಕ್ಷ ರೂ. ವಿಮೆ ಅಳವಡಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಮತಿ ಸರಸ್ವತಿ, ಮೇಜರ್ ಎಂ. ನಾಗರಾಜ್ ಕುಟುಂಬದವರು ಕೊಡಮಾಡುವ ಉತ್ತಮ ಪತ್ರಕರ್ತ ಪ್ರಶಸ್ತಿಯನ್ನು ಮೊದಲ ಬಾರಿಗೆ ಹಿರಿಯ ಪತ್ರಕರ್ತ ಗಣಪತಿ ಶಿರಳಗಿ ಅವರಿಗೆ ಪ್ರಾಯೋಜಕರಾದ ಮೇಜರ್ ಎಂ.ನಾಗರಾಜ್ ಪ್ರದಾನ ಮಾಡಿದರು.
ಹಿರಿಯ ಪತ್ರಕರ್ತ ಜಗದೀಶ್ ನೀಚಡಿರನ್ನು ಸನ್ಮಾಸಲಾಯಿತು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸ್ರಾಣಿ , ಹಿರಿಯ ಪತ್ರಕರ್ತ ಶಿರಸಿಯ ಅಶೋಕ ಹಾಸ್ಯಗಾರ ಮಾತನಾಡಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ. ರಾಮಚಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಅಂತೋನಿ ನಜರತ್ ಪ್ರಾರ್ಥಿಸಿ, ಕೆ.ಎನ್.ವೆಂಕಟಗಿರಿ ಸ್ವಾಗತಿಸಿದರು. ಎಸ್.ವಿ.ಹಿತಕರ ಜೈನ್ ಪ್ರಾಸ್ತಾವಿಕ ಮಾತನಾಡಿ ದರು. ರಫಿ ಬ್ಯಾರಿ ವಂದಿಸಿದರು. ಗಣಪತಿ ಶಿರಳಗಿ ನಿರೂಪಿಸಿದರು.