ತೀರ್ಥಹಳ್ಳಿಯಲ್ಲಿ ಹೊಸಗಾಳಿ ಬೀಸಲಿದೆ: ರಾಜರಾಂ ಹೆಗ್ಡೆ
ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲಗೌಡರ ತತ್ವಸಿದ್ಧಾಂತಗಳ ಮೇಲೆ ರಾಜ ಕಾರಣ ಮಾಡುವ ಉದ್ದೇಶದಿಂದ ಈ ಬಾರಿ ಸ್ಪರ್ಧೆ ಮಾಡಿದ್ದು, ಮಾದರಿ ಕ್ಷೇತ್ರಕ್ಕಾಗಿ ಪಣತೊಟ್ಟಿ ದ್ದೇನೆ. ಬುದ್ದಿವಂತ ಮತಕ್ಷೇತ್ರದ ಜನರು ಘಟಾನುಘಟಿ ನಾಯಕರ ನಡುವೆ ಹೊಸ ಮುಖಕ್ಕೆ ಅವಕಾಶ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜರಾಂ ಹೆಗ್ಡೆ ಹೇಳಿದರು.
ಇಂದು ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿ , ಭೌಗೋಳಿಕ ವಾಗಿ ವಿಸ್ತಾರವಾಗಿರುವ ತೀರ್ಥ ಹಳ್ಳಿ ಕ್ಷೇತ್ರದಲ್ಲಿ ವಿಭಿನ್ನ ಭಾಗದಲ್ಲಿ ವಿಭಿನ್ನ ಸಮಸ್ಯೆಗಳಿವೆ. ಪ್ರಮುಖ ವಾಣಿಜ್ಯಬೆಳೆಯಾದ ಅಡಕೆ ಈಗ ಸಂಕಷ್ಟದಲ್ಲಿದೆ. ದಿನಕ್ಕೊಂದು ರೋಗ ಮತ್ತು ಸರಕಾರದ ಪಾಲಿಸಿ ಗಳಿಂದ ಬೆಳೆಗಾರ ಆತಂಕದಲ್ಲಿzನೆ ಅವರಲ್ಲಿ ಆತ್ಮವಿಶ್ವಾಸ ತುಂಬುದ ಕೆಲಸ ಮಾಡಬೇಕಿದೆ ಎಂದರು.
ತೀರ್ಥಹಳ್ಳಿ ಕ್ಷೇತ್ರದ ಚಕ್ರಾ,ವರಾಹಿ ಹಾಗೂ ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಹಾಗೇ ಇದೆ. ವಿದ್ಯುತ್ ಯೋಜನೆಗಳಿಗೆ ಮನೆಮಠ ಕಳೆದುಕೊಂಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರಕಾರಗಳಿಗೆ ಆಗಿಲ್ಲ ಈ ಎ ಸಮಸ್ಯೆಗಳ ಬಗ್ಗೆ ನನಗೆ ಅರಿವಿದ್ದು, ಆ ಜನರ ನಡುವೆ ಇದ್ದು ಬಗೆಹರಿಸುವೆ ಎಂದರು.
ಉದ್ಯೋಗ ಸೃಷ್ಠಿ:
ತೀರ್ಥಹಳ್ಳಿಯ ಯುವ ಜನರು ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿzರೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿದರೆ ನಮ್ಮ ಹುಡುಗರು ಬೇರೆ ಕಡೆ ಹೋಗು ವುದು ತಪ್ಪುತ್ತದೆ. ಅಡಕೆ ಉತ್ಪನ್ನಗಳ ಕೈಗಾರಿಕೆ, ಗುಡಿಕೈಗಾರಿಕೆ, ಪ್ರವಾ ಸೋದ್ಯಮಕ್ಕೆ ಆದ್ಯತೆ ನೀಡಿ ಇಲ್ಲಿಯೇ ಉದ್ಯೋಗ ಸೃಷ್ಟಿ ಮಾಡಿ ದರೆ ಯುವಜನರು ವಲಸೆ ತಪ್ಪು ತ್ತದೆ. ಮಲೆನಾಡಿನಲ್ಲಿ ಈಗ ವೃದ್ಧ ದಂಪತಿಗಳು ಮಾತ್ರ ಇದ್ದು, ಅವರನ್ನು ನೋಡಿಕೊಳ್ಳಬೇಕಾದ ಮಕ್ಕಳು ಹೊಟ್ಟೆಪಾಡಿಗಾಗಿ ನಗರ ಗಳಿಗೆ ಹೋಗಿzರೆ. ಇದರಿಂದ ಮಲೆನಾಡಿನ ಸಂಸ್ಕೃತಿಯ ಮೇಲೆ ಯೇ ಪೆಟ್ಟು ಬಿದ್ದಿದೆ. ಆದ್ದರಿಂದ ಸ್ಥಳೀಯವಾಗಿ ಉದ್ಯಮ ಸೃಷ್ಟಿಗೆ ಆದ್ಯತೆ ನೀಡುವೆ ಎಂದು ಹೇಳಿ ದರು.
ಶಾಂತವೇರಿ ಗೋಪಾಲಗೌ ಡರ ಹೆಸರು ಹೇಳಿಕೊಂಡು ರಾಜ ಕಾರಣ ಮಾಡುವ ತೀರ್ಥಹಳ್ಳಿ ಕ್ಷೇತ್ರದ ರಾಷ್ಟ್ರೀಯ ಪಕ್ಷಗಳ ಮುಖಂಡರು ಅವರ ಸಿದ್ಧಾಂತ ಗಳನ್ನು ಗಾಳಿಗೆ ತೂರಿzರೆ. ಹಣಬಲದ ಮೇಲೆ ರಾಜಕಾರಣಕ್ಕೆ ಮುಂದಾಗಿzರೆ. ಅವರ ನಡುವೆ ಹೊಸ ಮುಖಕ್ಕೆ ಅವಕಾಶ ಕೊಡಲು ತೀರ್ಥಹಳ್ಳಿಯ ಜನರು ತೀರ್ಮಾನ ಮಾಡಿzರೆ.
ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಎಂಬು ದು ನೆರೆಯ ಕೇರಳ, ತಮಿಳು ನಾಡು ,ಆಂಧ್ರಗಳಲ್ಲಿ ಸಾಬೀತಾ ಗಿದೆ. ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕುಮಾರಣ್ಣ ಸರಕಾರದ ಯೋಜನೆಗಳು ನಮ್ಮ ಕೈ ಹಿಡಿಯಲಿವೆ ಎಂದರು.
ಯುವಕರ, ಕೃಷಿಕರ ಮತ್ತು ಸಾಮಾನ್ಯರ ಪ್ರತಿನಿಧಿಯಾಗಿರುವ ನನಗೆ ಈ ಬಾರಿ ತೀರ್ಥಹಳ್ಳಿ ಕ್ಷೇತ್ರದ ಮತದಾರರು ಕೈಹಿಡಿಯ ಲಿzರೆ.ಮಾದರಿ ಕ್ಷೇತ್ರಕ್ಕಾಗಿ ನನ್ನನ್ನು ಬೆಂಬಲಿಸಲಿzರೆ ಎಂದು ರಾಜರಾಂ ಹೇಳಿದರು. ಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.