ಆನೆ ಗರ್ಭಧಾರಣೆ ಬಗ್ಗೆ ನಿರ್ಲಕ್ಷ್ಯ: ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ
ಶಿವಮೊಗ್ಗ: ದಸರಾ ಮೆರವಣಿ ಗೆಗೆ ತಂದ ಹೆಣ್ಣು ಆನೆ ನೇತ್ರಾವತಿ ಮರಿಗೆ ಜನ್ಮ ನೀಡಿದ್ದು, ಇದರ ಗರ್ಭಧಾರಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳು ವಂತೆ ಕೋರಿ ಶಿವಮೊಗ್ಗ ಜಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಲೆನಾಡು ಕೇಸರಿ ಪಡೆ ಮನವಿ ಸಲ್ಲಿಸಿದೆ.
ಅ,೨೩ರಂದು ದಸರಾ ಹಬ್ಬದ ಸಾರ್ವಜನಿಕ ಮೆರವಣಿಗೆಗೆಂದು ಸಕ್ರೆಬೈಲು ಆನೆಬಿಡಾರದಿಂದ ಒಂದು ಗಂಡು ಎರಡು ಹೆಣ್ಣು ಆನೆಯನ್ನು ತರಿಸಿದ್ದು,ಇದರಲ್ಲಿ ಎಲ್ಲರಿಗೂ ಆಶ್ಚರ್ಯ ಮೂಡಿಸು ವಂತೆ ನೇತ್ರಾವತಿ ಆನೆ ಮರಿಗೆ ಜನ್ಮ ನೀಡಿದೆ. ಗರ್ಭ ಧರಿಸಿದ ಆನೆಯ ನ್ನು ಸಾರ್ವಜನಿಕ ಮೆರವಣಿಗೆಗೆ ರವಾ ನಿಸುವುದು ವನ್ಯಜೀವಿ ಕಾಯ್ದೆ ಪ್ರಕಾರ ಅಪರಾಧವಾಗಿರುತ್ತದೆ. ಇದಕ್ಕೆ ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡ ಬೇಕು. ಗರ್ಭ ಧರಿಸಿದ ಆನೆಯ ದೈಹಿಕ ಬದಲಾವಣೆ ಗುರುತಿಸಬೇ ಕಾಗಿರುವುದು ಸದರಿ ಕಾರ್ಯ ನಿರ್ವಹಿಸುತ್ತಿರುವ ಪಶು ವೈದ್ಯಾಧಿಕಾರಿಯ ಕರ್ತವ್ಯವಾಗಿದ್ದು, ಈ ಪ್ರಕರಣದಲ್ಲಿ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಆನೆಗಳಲ್ಲಿ ಗರ್ಭಾವಸ್ಥೆಯ ಅವಧಿ ೨೦ರಿಂದ ೨೩ ತಿಂಗಳು ಇದ್ದು, ಈ ಹೆಣ್ಣು ಆನೆ ಗರ್ಭ ಧರಿಸಿರುವ ಬಗ್ಗೆ ಕೆಲವು ಲಕ್ಷಣಗಳ ಬಗ್ಗೆ ಮಾವುತ, ಜಮೇದಾರ್, ಆರ್‌ಎಫ್‌ಒ. ಪಶು ವೈದಾಧಿಕಾರಿಗಳು ಪತ್ತೆ ಮಾಡಬಹು ದಾಗಿದೆ.
ಕೆಚ್ಚಲು, ಹೊಟ್ಟೆ ಉಬ್ಬುವಿಕೆ ಮುಂತಾದ ಅನೇಕ ಲಕ್ಷಣಗಳನ್ನು ಗಮನಿಸುವುದರಲ್ಲಿ ಸಿಬ್ಬಂದಿಗಳು ವಿಫಲರಾಗಿzರೆ. ಆನೆಯ ಚಲನ ವಲನದ ಬಗ್ಗೆ ಕರ್ತವ್ಯಲೋಪ ಎದ್ದುಕಾಣುತ್ತಿದೆ. ಒಂದು ಕಡೆ ಯಿಂದ ಮತ್ತೊಂದು ಕಡೆಗೆ ಕಳುಹಿಸುವ ಮೊದಲು ಎ ಹೆಣ್ಣು ಆನೆಗಳಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿ, ದೈಹಿಕ ಪರೀಕ್ಷೆ ನಡೆಸಿ ಸದೃಢತೆಯ ಸರ್ಟಿಫಿಕೇಟ್ ದಾಖಲುಪಡಿಸಿ ಮೇಲಧಿಕಾರಿಗ ಳೊಂದಿಗೆ ಚರ್ಚಿಸಿ ನಿಯಮಾನು ಸಾರವಾಗಿ ನಿರ್ಧಾರ ತೆಗೆದು ಕೊಳ್ಳಬೇಕಾಗಿದ್ದು, ಈ ಪ್ರಕರಣ ದಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ.ಪ್ರತಿ ೧೫ ದಿನಗಳಿಗೊಮ್ಮೆ ಹೆಲ್ತ್ ರಿಜಿ ಸ್ಟರ್‌ನಲ್ಲಿ ವರದಿ ದಾಖಲಿಸಬೇಕಿ ರುತ್ತದೆ.
ಇಷ್ಟೆ ನಿಯಮಗಳಿದ್ದರೂ ಸಂಬಂಧಪಟ್ಟ ಫಾರೆಸ್ಟ್ ಇನ್ ಚಾರ್ಜ್ ಆಫ್ ಎಲಿಫೆಂಟ್, ಜಮೇದಾರ್, ಮಾವುತ ಹಾಗೂ ಕೋತಾಲ್‌ರಿಂದ ಕಾಲಕಾಲಕ್ಕೆ ಎ ಮಾಹಿತಿಯನ್ನು ಆರ್‌ಎಫ್ ಒ ಮತ್ತು ಪಶುವೈದ್ಯಾಧಿಕಾರಿಗಳಿಗೆ ತಿಳಿಸಬೇಕಾಗಿದ್ದು, ಇವರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ತಾಲೀಮಿನ ನೆಪದಲ್ಲಿ ಕಾದಿರುವ ಡಾಂಬರ್ ರಸ್ತೆಯ ಮೇಲೆ ನಡೆಸಿರುತ್ತಾರೆ ಹಾಗೂ ಪಟಾಕಿ ಶಬ್ದ ಮಾಡಿರುತ್ತಾರೆ. ಲಾರಿಯಲ್ಲಿ ಬಲವಂತವಾಗಿ ಕರೆದುಕೊಂಡು ಬರುವುದು ಹೋಗುವುದು ಅಮಾನವೀಯವಾಗಿರುತ್ತದೆ ಹಾಗಾಗಿ ಕೂಡಲೇ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಲೆನಾಡು ಕೇಸರಿ ಪಡೆ ಆಗ್ರಹಿಸಿದೆ.ಈ ಸಂದರ್ಭದಲ್ಲಿ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ್( ರಾಜು) ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.