ಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಎನ್‌ಸಿಸಿ ಸಹಕಾರಿ: ಸಲೀಂ

Share Below Link

ಸಾಗರ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಾಧನೆ ಮಾಡಲು ಎನ್.ಸಿ.ಸಿ. ಸಹಕಾರಿಯಾಗಿದೆ ಎಂದು ಉದ್ಯಮಿ ಎ.ಎಂ.ಸಲೀಂ ಹೇಳಿದರು.
ಪಟ್ಟಣದ ಎಲ್.ಬಿ.ಮತ್ತು ಎಸ್ ಬಿ ಎಸ್ ಕಾಲೇಜಿನಲ್ಲಿ ಜ.೨೬ ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಎನ್‌ಸಿಸಿ ಪಥ ಸಂಚಲನ ರಾಜ್ಯಮಟ್ಟದ ಆಯ್ಕೆ ಶಿಬಿರದ ಸಂದರ್ಭದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಪ್ರಕೃತಿ ವಿಕೋಪ, ಸಮಾಜದಲ್ಲಿ ಆಗುವ ದುರಂತಗಳಿಗೆ ಎನ್‌ಸಿಸಿ ವಿದ್ಯಾರ್ಥಿ ಗಳು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತದೆ. ನಾನು ಭವಿಷ್ಯ ರೂಢಿಸಿ ಕೊಂಡಿದ್ದೇ ಎನ್‌ಸಿಸಿಯಿಂದ. ಹಣವಿಲ್ಲದೇ ಕಾಲೇಜಿಗೆ ಬಂದ ನಾನು ಕಾಲೇಜು ಆಡಳಿತ ಮಂಡಳಿಯ ಸಲಹೆ ಮೇರೆಗೆ ಎನ್‌ಸಿಸಿ ಸೇರಿ ಸಾಧನೆ ಮಾಡಲು ಸಾಧ್ಯವಾಯಿತು. ಸೈಕ್ಲಿಂಗ್, ಈಜು, ಯೋಗ, ಹಿಮಾಲಯ ಚಾರಣ, ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ಬೈಕ್ ರ್‍ಯಾಲಿ, ಪ್ಯಾರಾ ಚೂಟಿಂಗ್, ವಿಪತ್ತು ನಿರ್ವಹಣೆ, ವಿವಿಧ ಕ್ಯಾಂಪ್‌ಗಳಲ್ಲಿ ಭಾಗವಹಿಸಲು ಅನುಕೂಲವಾ ಯಿತು. ಸೈನ್ಯದ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ಒಡನಾಟ ನನ್ನ ಬದುಕಿಗೆ ತಿರುವು ನೀಡಿತು. ಅನೇಕ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯಮಟ್ಟದ ಪ್ರಶಸ್ತಿ ಗಳಿಸಲು ಸಾಧ್ಯವಾಯಿತು. ನೀವೂ ಎನ್‌ಸಿಸಿ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಹಕಾರಿ ಎಂದರು.
ಖಂಡಿಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಪಮ ಸಾರಂಗ ಅವರನ್ನು ಅಭಿನಂದಿಸಲಾಯಿತು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯ ದರ್ಶಿ ಡಾ.ಎಚ್.ಎಂ. ಶಿವ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿ ಖಜಂಚಿ ಕೆ.ವೆಂಕಟೇಶ್ ಕವಲಕೋಡು, ಸಹಕಾರ್ಯದರ್ಶಿ ಎಂ.ಆರ್. ಸತ್ಯನಾರಾಯಣ, ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಬಿ.ಸಿ.ಶಶಿಧರ್, ಕಾಲೇಜು ಪ್ರಾಂಶುಪಾಲ ಡಾ. ಲಕ್ಷ್ಮೀಶ್ ಎ.ಎಸ್., ಲೆಫ್ಟಿನೆಂಟ್ ನೂತನ್ ಇದ್ದರು.