ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಕೂಡಲಿ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠಮ್‌ನ ಕೂಡಲಿ ಮಠದಲ್ಲಿ ನವರಾತ್ರಿ ಉತ್ಸವ…
ಕೂಡಲಿ/ಶಿವಮೊಗ್ಗ: ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್ ಕೂಡಲಿ ಮಠದಲ್ಲಿ ನವರಾತ್ರಿ ಹಾಗೂ ವಿಜಯದಶಮಿಯ ಪ್ರಯುಕ್ತ ೧೦ ದಿನಗಳ ಕಾಲ ನವಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದ 71ನೇ ಪೀಠಾಧಿಪತಿಗಳಾದ ಶ್ರೀಮದ್ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ನವರಾತ್ರಿಯ ಆರಂಭದಿಂದ ವಿಜಯದಶಮಿಯ ವರೆಗೆ ಪ್ರತಿದಿನ ನವಚಂಡಿಕಾ ಹೋಮ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ.
ಇದೇ ಸಂದರ್ಭದಲ್ಲಿ ಪ್ರತಿದಿನ ಮಕ್ಕಳಿಗೆ ಅಕ್ಷರಾಭ್ಯಾಸ ಸೇರಿದಂತೆ ವಿವಿಧ ಪೂಜೆಗಳನ್ನು ಏರ್ಪಡಿಸಲಾಗಿದ್ದು, ಶ್ರೀಮದ್ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಅಭೂತಪೂರ್ವ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ತನು, ಮನ, ಧನಾರ್ಪಣೆಯೊಂದಿಗೆ ಪಾಲ್ಗೊಂಡು ಶ್ರೀ ಶಾರದಾದೇವಿ ಅಮ್ಮನವರ, ಆದಿಗುರು ಶ್ರೀ ಶಂಕರಾಚಾರ್ಯರ ಹಾಗೂ ಜಗದ್ಗುರುಗಳ ಕೃಪೆಗೆ ಪಾತ್ರರಾಗುವಂತೆ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಎಸ್. ಪ್ರಸನ್ನಕುಮಾರ್ ಅವರು ಕೋರಿzರೆ.